ಭಾರತದ ರಾಷ್ಟ್ರಪತಿಗೆ ತಿಂಗಳಿಗೆ 5 ಲಕ್ಷ ರೂ ಸಂಬಳ; ಪಾವತಿಸಬೇಕು 2.75 ಲಕ್ಷ ರೂ ತೆರಿಗೆ!
- ಹಾಸ್ಯದ ಮೂಲಕ ಜನರಿಗೆ ತೆರಿಗೆ ಮಹತ್ವ ತಿಳಿಸಿದ ರಾಷ್ಟ್ರಪತಿ
- ನನ್ನ ಅರ್ಧ ಸಂಬಳ ತೆರಿಗೆ ರೂಪದಲ್ಲಿ ಕಟ್ಟುತ್ತೇನೆ ಎಂದು ರಾಮನಾಥ್
- ತಮ್ಮ ವೇತನ ಬಹಿರಂಗ ಪಡಿಸಿದ ರಾಮನಾಥ್ ಕೋವಿಂದ್
ಕಾನ್ಪುರ(ಜೂ.28): ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಮ್ಮ ಹುಟ್ಟೂರಿಗೆ ತೆರಳಿ ಬಾಲ್ಯದ ಜೀವನವನ್ನು ನೆನಪಿಸಿದ್ದಾರೆ. ಇದರ ಜೊತೆಗೆ ಹುಟ್ಟೂರಿನ ಜನರ ಜೊತೆ ಮಾತನಾಡಿದ್ದಾರೆ. ರಾಷ್ಟ್ರಪತಿಯಾದ ಬಳಿಕ ಇದೇ ಮೊದಲ ಬಾರಿಗೆ ಹುಟ್ಟೂರಿಗೆ ತೆರಳಿದ ರಾಮಾನಾಥ್ ಕೋವಿಂದ್, ಜನರಲ್ಲಿ ತೆರಿಗೆ ಮಹತ್ವವನ್ನು ಹಾಸ್ಯದ ಮೂಲಕ ವಿವರಿಸಿದ್ದಾರೆ. ಇದೇ ವೇಳೆ ತಮ್ಮ ವೇತನವನ್ನೂ ಬಹಿರಂಗಪಡಿಸಿದ್ದಾರೆ.
ಅಬ್ದುಲ್ ಕಲಾಂ ಬಳಿಕ ರೈಲು ಹತ್ತಿದ ಭಾರತದ ಮೊದಲ ರಾಷ್ಟ್ರಪತಿ; ಹುಟ್ಟೂರಿನತ್ತ ಕೋವಿಂದ್ ಪ್ರಯಾಣ!.
ರಾಮನಾಥ್ ಕೋವಿಂದ್ ಹುಟ್ಟೂರಾದ ಕಾನ್ಪುರದ ಝಿಂಜಾಕ್‌ನಲ್ಲಿ ಮಾತನಾಡಿದ ರಾಷ್ಟ್ರಪತಿ, ಎಲ್ಲರೂ ತೆರಿಗೆಯನ್ನು ತಪ್ಪದೆ ಪಾವತಿಸಬೇಕು ಎಂದು ಮನವಿ ಮಾಡಿದರು. ತಿಂಗಳಿಂಗ 5 ಲಕ್ಷ ರೂಪಾಯಿ ವೇತನ ಪಡೆಯುತ್ತಿದ್ದೇನೆ. ಎಲ್ಲರೂ ದೊಡ್ಡ ಮೊತ್ತವನ್ನೇ ಸ್ಯಾಲರಿಯಾಗಿ ಪಡೆಯುತ್ತಿದ್ದೀರಿ ಎಂದುಕೊಳ್ಳುತ್ತಾರೆ. ಆದರೆ ನಾನು ಪ್ರತಿ ತಿಂಗಳು 2.75 ಲಕ್ಷ ರೂಪಾಯಿ ತೆರೆಗಿ ಕಟ್ಟುತ್ತೇನೆ ಎಂದು ಕೋವಿಂದ್ ಹೇಳಿದ್ದಾರೆ.
ರಾಮ ಮಂದಿರ ನಿರ್ಮಾಣಕ್ಕೆ 5 ಲಕ್ಷ ರೂ ದೇಣಿಗೆ ನೀಡಿದ ರಾಷ್ಟ್ರಪತಿ!
ತಿಂಗಳ ಸಂಬಂಳದಲ್ಲಿ ಅರ್ಧಕ್ಕಿಂತ ಹೆಚ್ಚು ನಾನು ತೆರಿಗೆ ಕಟ್ಟುತ್ತೇನೆ. ನನಗಿಂತ ನಮ್ಮ ಅಧಿಕಾರಿಗಳು ಹೆಚ್ಚು ಉಳಿತಾಯ ಮಾಡುತ್ತಾರೆ ಎಂದು ಕೋವಿಂದ್ ಹಾಸ್ಯ ಚಟಾಕಿ ಹಾರಿಸಿದ್ದಾರೆ.
ನಾವು ರೈಲಿಗೆ ಬೆಂಕಿ ಹಾಕಿರುವುದನ್ನು ನೋಡಿದ್ದೇವೆ. ರೈಲಿ ಹೊತ್ತಿ ಉರಿದಾಗ ಸರ್ಕಾರಕ್ಕೆ ಕೋಟಿ ಕೋಟಿ ನಷ್ಟ ಎಂದು ಮಾತನಾಡಿಕೊಳ್ಳುತ್ತಾರೆ. ಈ ನಷ್ಟ ಯಾರದ್ದು? ತೆರಿಗೆ ಕಟ್ಟಿದವರ ಹಣವಿದೆ. ನಷ್ಟ ತೆರಿಗೆದಾತರಿಗೆ. ಹೀಗಾಗಿ ಸಾರ್ವಜನಿಕ ಆಸ್ತಿ ಪಾಸ್ತಿ ಕುರಿತು ನಮ್ಮ ದೃಷ್ಟಿಕೋನ ಬದಲಾಗಬೇಕು ಎಂದು ಕೋವಿಂದ್ ಹೇಳಿದ್ದಾರೆ.