Asianet Suvarna News Asianet Suvarna News

ಅಹಿಂಸೆ ಮಾರ್ಗ ಮರೆಯಬೇಡಿ: ಯುವಕರಿಗೆ ಕರೆ ನೀಡಿದ ರಾಷ್ಟ್ರಪತಿ!

ಗಣರಾಜ್ಯೋತ್ಸವ ಸಂಭ್ರಮಕ್ಕೆ ಸಜ್ಜಾದ ಭಾರತ| ದೇಶವನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್| ಅಹಿಂಸೆ ಮಾರ್ಗ ಮರೆಯಬೇಡಿ ಎಂದು ಯುವಕರಿಗೆ ಕರೆ ನೀಡಿದ ರಾಷ್ಟ್ರಪತಿ| ಸಾಂವಿಧಾನಿಕ ವಿಧಾನಗಳಲ್ಲಿ ನಂಬಿಕೆ ಇಡಬೇಕೆಂದು ಕೋವಿಂದ್ ಮನವಿ| ಸರ್ಕಾರ ಹಾಗೂ ವಿಪಕ್ಷಗಳ ಪಾತ್ರ ನೆನಪಿಸಿದ ರಾಮನಾಥ್ ಕೋವಿಂದ್| 

President Ram Nath Kovind Address The Nation On Republic Day Eve
Author
Bengaluru, First Published Jan 25, 2020, 10:02 PM IST

ನವದೆಹಲಿ(ಜ.25): ಗಣರಾಜ್ಯೋತ್ಸವದ ಮುನ್ನಾ ದಿನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ.

ದೇಶದ ಜನತೆ ಅದರಲ್ಲೂ ಮುಖ್ಯವಾಗಿ ಯುವಕರು ನಿರ್ದಿಷ್ಟ ಕಾರಣಕ್ಕಾಗಿ ಹೋರಾಟ ಮಾಡುವಾಗ ಅಹಿಂಸೆಯ ಮಾರ್ಗವನ್ನು ಅನುಸರಿಸಬೇಕೆಂದು ರಾಷ್ಟ್ರಪತಿಗಳು ಈ ವೇಳೆ ಕರೆ ನೀಡಿದ್ದಾರೆ. 

ಸಾಮಾಜಿಕ ಹಾಗೂ ಆರ್ಥಿಕ ಉದ್ದೇಶಗಳನ್ನು ಈಡೇರಿಸಿಕೊಳ್ಳುವುದಕ್ಕಾಗಿ ಸಾಂವಿಧಾನಿಕ ವಿಧಾನಗಳಲ್ಲಿ ನಂಬಿಕೆ ಇಡಬೇಕೆಂದು ರಾಷ್ಟ್ರಪತಿ ಮನವಿ ಮಾಡಿದ್ದಾರೆ. 

ಪೌರತ್ವ ಕಾಯ್ದೆಯ ವಿರುದ್ಧದ ಪ್ರತಿಭಟನೆಗಳು ಹಿಂಸಾಚಾರ ಸ್ವರೂಪ ಪಡೆದಿರುವ ಹಿನ್ನೆಲೆಯಲ್ಲಿ, ರಾಷ್ಟ್ರಪತಿಗಳು ತಮ್ಮ  ಭಾಷಣದಲ್ಲಿ ಈ ಅಂಶಗಳನ್ನು ಉಲ್ಲೇಖಿಸಿರುವುದು ಮಹತ್ವ ಪಡೆದುಕೊಂಡಿದೆ.

ಆಧುನಿಕ ಭಾರತ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಎಂಬ ಮೂರು ಪ್ರಮುಖ ಅಂಗಗಳನ್ನು ಹೊಂದಿದ್ದು, ಇವು ಒಂದಕ್ಕೊಂದು ಪೂರಕವಾಗಿ ಹಾಗೂ ಸ್ವತಂತ್ರವಾ ಕಾರ್ಯನಿರ್ವಹಿಸುತ್ತವೆ. ನಮ್ಮೆಲ್ಲರ ಭವಿಷ್ಯವನ್ನು ನಿರ್ಧರಿಸಲು ನಮಗೆ ಈ ದೇಶ ಶಕ್ತಿ ನೀಡಿದೆಎ ಎಂದು ಕೋವಿಂದ್ ಅಭಿಪ್ರಾಯಪಟ್ಟಿದ್ದಾರೆ.  
 
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರ ಹಾಗೂ ವಿಪಕ್ಷಗಳು ಬಹುಮುಖ್ಯ ಪಾತ್ರ ನಿರ್ವಹಿಸುತ್ತವೆ. ಇವೆರಡೂ ದೇಶದ ಅಭಿವೃದ್ಧಿಗೆ ತಮ್ಮ ಕೊಡುಗೆ ನೀಡುತ್ತವೆ ಎಂದು ರಾಷ್ಟ್ರಪತಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.

ಇನ್ನು ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿರುವ ರಾಷ್ಟ್ರಪತಿ ಭವನವನ್ನು ದೀಪಾಲಂಕಾರಗಳಿಂದ ಸಿಂಗರಿಸಲಾಗಿದೆ.

Follow Us:
Download App:
  • android
  • ios