Asianet Suvarna News Asianet Suvarna News

ಬ್ರಿಟಿಷ್ ಕಾಲದ ಕ್ರಿಮಿನಲ್ ಕಾನೂನು ಬದಲಿಸುವ 3 ಮಸೂದೆಗೆ ರಾಷ್ಟ್ರಪತಿ ಮುರ್ಮು ಅಂಕಿತ!

ಕೇಂದ್ರ ಸರ್ಕಾರ ಮಂಡಿಸಿದ ಹೊಸ ಕ್ರಿಮಿನಲ್ ಕಾನೂನು ಮಸೂದೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಪಾಸ್ ಆಗಿ ಕಾನೂನು ಮಾನ್ಯತೆಗೆ ರಾಷ್ಟ್ರಪತಿಗೆ ಕಳುಹಿಸಲಾಗಿತ್ತು. ಇದೀಗ ರಾಷ್ಟ್ರಪತಿ ದ್ರೌಪದಿ ಮುರ್ಮು ಈ ಮೂರು ಮಸೂದೆಗಳಿಗೆ ಅಂಕಿತ ಹಾಕಿದ್ದಾರೆ. ಕಾನೂನು ಜಾರಿ ದಿನಾಂಕವನ್ನು ಕೇಂದ್ರ ಸರ್ಕಾರ ಶೀಘ್ರದಲ್ಲೇ ಘೋಷಿಸಲಿದೆ.

President Droupadi Murmu assent to new 3 criminal law bills which replace British law ckm
Author
First Published Dec 25, 2023, 9:41 PM IST

ನವದೆಹಲಿ(ಡಿ.25):  ಬ್ರಿಟಿಷರ ಕಾಲದ ಕ್ರಿಮಿನಲ್ ಕಾನೂನುಗಳ ಬದಲಿಗೆ ಕೇಂದ್ರ ಸರ್ಕಾರ ಮೂರು ಕ್ರಿಮಿನಲ್ ಕಾನೂನುಗಳನ್ನು ತಂದಿದೆ. ಈ ಮಸೂದೆಗಳಿಗೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಅನುಮೋದನೆ ಸಿಕ್ಕಿತ್ತು. ಹೀಗಾಗಿ ಈ ಮೂರು ಮಸೂದೆಗಳನ್ನು ರಾಷ್ಟ್ರಪತಿಗೆ ಕಳುಹಿಸಲಾಗಿತ್ತು. ಇದೀಗ ರಾಷ್ಟ್ರಪತಿ ದ್ರೌಪದಿ ಮುರ್ಮು ಮೂರು ಕ್ರಿಮಿನಲ್ ಮಸೂದೆಗೆ ಅಂಕಿತ ಹಾಕಿದ್ದಾರೆ. ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಕಾಯ್ದೆ ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಗಳು ಇದೀಗ ಕಾನೂನಾಗಿ ಜಾರಿಗೆ ಬರುತ್ತಿದೆ.

ಕೇಂದ್ರ ಸರ್ಕಾರ ಮೂರು ಕ್ರಿಮಿನಲ್ ಕಾನೂನುಗಳು ಜಾರಿಗೆ ಬರುವ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಿದೆ. ಶತಮಾನ ಹಳೆಯ ಇಂಡಿಯನ್‌ ಪೆನಲ್ ಕೋಡ್‌, ಇಂಡಿಯನ್‌ ಎವಿಡೆನ್ಸ್‌ ಕೋಡ್‌ ಹಾಗೂ ಸಿಆರ್‌ಪಿಸಿ ಕಾಯ್ದೆಗಳನ್ನು ಬದಲಿಗೆ ತಂದಿರುವ ಹೊಸ ಮೂರು ಕಾಯ್ದೆಗಳು ರಾಜ್ಯಸಭೆಯಲ್ಲಿ ಧ್ವನಿಮತದ ಮೂಲಕ ಅಂಗೀಕಾರ ದೊರೆತ ಬಳಿಕ ರಾಷ್ಟ್ರಪತಿ ಅಂಗೀಕಾರಕ್ಕೆ ಕಳುಹಿಸಲಾಗಿತ್ತು. ಲೋಕಸಭೆಯಲ್ಲಿ ಧ್ವನಿಮತದ ಅಂಗೀಕಾರ ಸಿಕ್ಕಿತ್ತು. ಬಹುತೇಕ ವಿಪಕ್ಷ ಸಂಸದ ಅನುಪಸ್ಥಿತಿಯಲ್ಲಿ ಈ ಮಸೂದೆಗೆ ಒಪ್ಪಿಗೆ ಸಿಕ್ಕಿತ್ತು.  

 

ಗುಂಪು ಹತ್ಯೆಗೆ ಗಲ್ಲು ಶಿಕ್ಷೆ, ಮಹತ್ತರ ಬದಲಾವಣೆಯ ಭಾರತೀಯ ನ್ಯಾಯ ಸಂಹಿತೆ ಬಿಲ್ ಪಾಸ್!

3 ಮಸೂದೆಗಳ ಪ್ರಮುಖ ಅಂಶಗಳು
- ಅಪರಾಧ ನಡೆದ 30 ದಿನದಲ್ಲಿ ಆರೋಪಿ ತಪ್ಪೊಪ್ಪಿಕೊಂಡರೆ ಆತನಿಗೆ ಶಿಕ್ಷೆ ಪ್ರಮಾಣ ಇಳಿಕೆ
- ಮಹಿಳೆಯ ಮೇಲಿನ ಮಾನಸಿಕ ದೌರ್ಜನ್ಯಕ್ಕೂ ಇನ್ನು 3 ವರ್ಷ ಜೈಲು ಶಿಕ್ಷೆ
- ಲೈಂಗಿಕ ದೌರ್ಜನ್ಯ ಸಂತ್ರಸ್ತರ ಗುರುತು ಬಹಿರಂಗಪಡಿಸಿದರೆ 2 ವರ್ಷ ಜೈಲು
- ಲೈಂಗಿಕ ದೌರ್ಜನ್ಯ ಕೇಸಲ್ಲಿ ಸಂತ್ರಸ್ತರ ವಿಡಿಯೋ ರೆಕಾರ್ಡಿಂಗ್ ಕಡ್ಡಾಯ.
- ಅತ್ಯಾಚಾರಕ್ಕೆ ಕನಿಷ್ಠ ಶಿಕ್ಷೆ 10 ವರ್ಷಕ್ಕೆ ಏರಿಕೆ, ಜೀವಾವಧಿ/ಗಲ್ಲು ಶಿಕ್ಷೆಗೂ ಅವಕಾಶ
- ಅಪ್ರಾಪ್ತರ ಮೇಲಿನ ಅತ್ಯಾಚಾರಕ್ಕೆ ಕನಿಷ್ಠ 30 ವರ್ಷ, ಗಲ್ಲುಶಿಕ್ಷೆಗೂ ಅವಕಾಶ
- 7 ವರ್ಷಕ್ಕಿಂತ ಹೆಚ್ಚು ಶಿಕ್ಷೆ ಪ್ರಕರಣಗಳಲ್ಲಿ ವಿಧಿವಿಜ್ಞಾನ ತಂಡ ಕ್ರೈಂಸೀನ್‌ಗೆ ಭೇಟಿ ಕಡ್ಡಾಯ
- ಮೊದಲ ಸಲ ಇ-ಎಫ್‌ಐಆರ್ ಫೈಲ್ ಅವಕಾಶ. ಎಫ್‌ಐಆರ್‌ನಿಂದ ಚಾರ್ಜ್‌ಶೀಟ್‌ವರೆಗಿನ ಎಲ್ಲಾ ಹಂತ ಡಿಜಿಟಲೀಕರಣ
- ಸಂತ್ರಸ್ತರ ಹೇಳಿಕೆ ದಾಖಲು ಕಡ್ಡಾಯ/ ಆನ್‌ಲೈನ್‌ ಮೂಲಕವೂ ಹೇಳಿಕೆ ದಾಖಲಿಸಿಕೊಳ್ಳಬಹುದು
- ಶಿಕ್ಷೆ ನೀಡುವುದೊಂದೇ ಅಲ್ಲ, ಅದರ ಬದಲು ತ್ವರಿತ ನ್ಯಾಯದಾನಕ್ಕೆ ಒತ್ತು

ಸಿಮ್‌ ಕಾರ್ಡ್‌ ಪಡೆಯಲು ಇನ್ಮುಂದೆ ಬಯೋಮೆಟ್ರಿಕ್‌ ಕಡ್ಡಾಯ: ಹೊಸ ಟೆಲಿಕಾಂ ಮಸೂದೆಯ ಪ್ರಮುಖಾಂಶ ಹೀಗಿದೆ..

- ಚಾರ್ಜ್‌ಶೀಟ್‌ಗೆ 90 ದಿನ, ಮತ್ತೆ 90 ದಿನ ವಿಸ್ತರಣೆ ಅವಕಾಶ. ಗರಿಷ್ಠ 180 ದಿನದ ಗಡುವು
-ಸಮೂಹ ದಾಳಿ ಕೇಸಲ್ಲಿ ಕನಿಷ್ಠ 7 ವರ್ಷ/ ಜೀವಾವಧಿ/ ಗಲ್ಲುಶಿಕ್ಷೆ
- ಮಕ್ಕಳ ವಿರುದ್ಧದ ಅಪರಾಧಗಳಿಗೆ 10 ವರ್ಷ ಜೈಲು, ದಂಡ ಹೆಚ್ಚಳ
- ಪ್ರತಿಯೊಬ್ಬರಿಗೂ ಗರಿಷ್ಠ 3 ವರ್ಷದೊಳಗೆ ನ್ಯಾಯ ದೊರಕಿಸುವ ಗುರಿ
- ಖೋಟಾನೋಟು ತಯಾರಿಕೆ, ಕಳ್ಳಸಾಗಣೆ, ಚಲಾವಣೆಗೆ ಜೀವಾವಧಿ/ ಗಲ್ಲು
- ಖೋಟಾನೋಟು ತಯಾರಿಕೆ, ಚಲಾವಣೆಗೆ ಕೂಡ ಭಯೋತ್ಪಾದನೆ ಕಾಯ್ದೆ ಅನ್ವಯ
- ದೇಶದ ವಿರುದ್ಧ ಮಾತು, ಬರಹ, ಸನ್ನೆ, ದೃಶ್ಯ ನಿರೂಪಣೆಗೆ ಗರಿಷ್ಠ ಜೀವಾವಧಿ
- ಹಿಂಸೆಗೆ ಪ್ರಚೋದನೆ, ಸಶಸ್ತ್ರ ದಂಗೆ, ವಿಧ್ವಂಸಕ ಕೃತ್ಯಕ್ಕೆ ಜೀವಾವಧಿ ಶಿಕ್ಷೆ
- ಗುಂಪು ಹತ್ಯೆ (ಮಾಬ್ ಲಿಂಚಿಂಗ್)ಯಲ್ಲಿ ಪಾಲ್ಗೊಂಡರೆ 7 ವರ್ಷ/ ಗಲ್ಲುಶಿಕ್ಷೆ
-ಮಕ್ಕಳ ವಿರುದ್ಧದ ಅಪರಾಧಕ್ಕೆ 10 ವರ್ಷ ಜೈಲು
- ಕ್ರಿಮಿನಲ್ ಕೇಸುಗಳ ವಿಚಾರಣೆ ಗರಿಷ್ಠ 3 ವರ್ಷದೊಳಗೆ ಮುಗಿಸುವ ಗುರಿ
- ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಸಂತ್ರಸ್ತರ ವಿಡಿಯೋ ರೆಕಾರ್ಡಿಂಗ್ ಕಡ್ಡಾಯ
- ವ್ಯಾಪ್ತಿ ಮೀರಿ ದೇಶದ ಯಾವುದೇ ಠಾಣೆಯಲ್ಲಿ ‘ಜೀರೋ ಎಫ್‌ಐಆರ್’ ದಾಖಲಿಗೆ ಅವಕಾಶ
- ಪ್ರಕರಣದ ವಿಚಾರಣೆ ಆರಂಭವಾದ 30 ದಿನದೊಳಗೆ ಸಂಬಂಧಿಸಿದ ದಾಖಲೆಗಳ ಸಲ್ಲಿಕೆ ಕಡ್ಡಾಯ
- ಘೋಷಿತ ಅಪರಾಧಿಯ ಆಸ್ತಿಯ ಮೂಲಕ ಪರಿಹಾರ ವಸೂಲಿಗೆ ಅವಕಾಶ
- ಸಂತ್ರಸ್ತರ ಅಭಿಪ್ರಾಯ ಪಡೆಯದೆ ಸರ್ಕಾರ ಕ್ರಿಮಿನಲ್ ಕೇಸ್ ರದ್ದುಪಡಿಸುವಂತಿಲ್ಲ
- ಗುರುತು ಮುಚ್ಚಿಟ್ಟು ಮದುವೆ, ಬಡ್ತಿ, ಉದ್ಯೋಗದ ಭರವಸೆ ನೀಡಿ ಲೈಂಗಿಕ ಸಂಪರ್ಕ ಮಾಡುವುದು ಅಪರಾಧ
- ಪ್ರಕರಣ ದಾಖಲಾಗಿ 90 ದಿನವಾದರೂ ಆರೋಪಿ ಸಿಗದೇ ಹೋದರೆ ಆತನ ವಿರುದ್ಧ ವಿಚಾರಣೆ ಶುರು, ಶಿಕ್ಷೆ
- 7 ವರ್ಷಕ್ಕಿಂತ ಹೆಚ್ಚು ಶಿಕ್ಷೆ ಕೇಸಲ್ಲಿ ಸಂತ್ರಸ್ತರ ಅಭಿಪ್ರಾಯ ಪಡೆಯದೇ ಕೇಸು ರದ್ದು ಸಾಧ್ಯವಿಲ್ಲ
- ಜೀವಾವಧಿ, ಗಲ್ಲು ಶಿಕ್ಷೆ ಜಾರಿಯಾದ 7 ವರ್ಷಗಳ ಒಳಗೆ ಮಾತ್ರ ಶಿಕ್ಷೆ ಕಡಿತದ ಅವಕಾಶ

Follow Us:
Download App:
  • android
  • ios