ಗರ್ಭಿಣಿ ಸತ್ತಿದ್ದಕ್ಕೆ ನರ್ಸ್ ಅನ್ನು ಮಹಡಿಯಿಂದ ಎಸೆದು ಕುಟುಂಬಸ್ಥರ ಸೇಡು!
ಹೊಟ್ಟೆನೋವಿನಿಂದ ಖಾಸಗಿ ನರ್ಸಿಂಗ್ ಹೋಮ್ ಗೆ ದಾಖಲಾಗಿದ್ದ 25 ವರ್ಷದ ಗರ್ಭಿಣಿ ಸಾವನ್ನಪ್ಪಿದ್ದಕ್ಕೆ ಆಕ್ರೋಶಗೊಂಡ ಕುಟುಂಬದ ಸದಸ್ಯರು ದಾದಿಯನ್ನು ಮೊದಲ ಮಹಡಿಯಿಂದ ಕೆಳಕ್ಕೆ ತಳ್ಳಿದ ಘಟನೆ ಬಿಹಾರದಲ್ಲಿ ನಡೆದಿದೆ.
ಪಾಟ್ನಾ (ಮೇ.29): ಹೊಟ್ಟೆನೋವಿನಿಂದ ಖಾಸಗಿ ನರ್ಸಿಂಗ್ ಹೋಮ್ ಗೆ ದಾಖಲಾಗಿದ್ದ 25 ವರ್ಷದ ಗರ್ಭಿಣಿ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಕ್ಕೆ ಆಕ್ರೋಶಗೊಂಡ ಮಹಿಳೆಯ ಕುಟುಂಬದ ಸದಸ್ಯರು ದಾದಿಯನ್ನು ಮೊದಲ ಮಹಡಿಯಿಂದ ಕೆಳಕ್ಕೆ ತಳ್ಳಿದ ಘಟನೆ ಬಿಹಾರದ ನಳಂದ ಜಿಲ್ಲೆಯಲ್ಲಿ ನಡೆದಿದೆ.
30 ನಿಮಿಷದಲ್ಲಿ ಸ್ಫೋಟಿಸುವ ಬಾಂಬ್ ಬೆದರಿಕೆ: ವಿಮಾನದಿಂದ ಜಾರಿ ಹೊರಬಂದ ಪ್ರಯಾಣಿಕರು, ರಕ್ಕೆ ಮೇಲೆ ಬಂದ ವೃದ್ಧೆ
ಗುಡಿಯಾ ಕುಮಾರಿ ಎಂಬಾಕೆ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಇದರಿಂದ ಕೋಪಗೊಂಡು ಆಕೆಯ ಕುಟುಂಬಸ್ಥರು, ನರ್ಸ್ ನೀಡಿದ್ದ ಚುಚ್ಚು ಮುದ್ದಿನಿಂದ ಆಕೆ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಿ ನರ್ಸ್‌ನ್ನು ಮಹಡಿಯಿಂದ ತಳ್ಳಿದ್ದಾರೆ. ಅದೃಷ್ಟವಶಾತ್ ನರ್ಸ್ ಪೂನಮ್ ಕುಮಾರಿ (35) ಬದುಕುಳಿದಿದ್ದಾರೆ.ಸದ್ಯ ಆಕೆಯ ಪರಿಸ್ಥಿತಿ ಮಾತ್ರ ಗಂಭೀರವಾಗಿದೆ.
ಕ್ಯಾನ್ಸರ್ ಆತಂಕದಲ್ಲಿ ದೆಹಲಿ ಸಿಎಂ ಕೇಜ್ರಿವಾಲ್, ಜಾಮೀನು ವಿಸ್ತರಣೆ ನಿರಾಕರಿಸಿದ ಸುಪ್ರೀಂ
ಬಿಹಾರ ಪೊಲೀಸ್ ಠಾಣೆಯ ಗೃಹ ಅಧಿಕಾರಿ (ಎಸ್‌ಎಚ್‌ಒ) ರಮಾಶಂಕರ್ ಸಿಂಗ್, ರೋಗಿಯ ಸಾವಿನ ನಂತರ ಕೋಪಗೊಂಡ ಕುಟುಂಬ ಸದಸ್ಯರು ಕ್ಲಿನಿಕ್ ಅನ್ನು ಧ್ವಂಸಗೊಳಿಸಿದರು.ಗರ್ಭಿಣಿ ಮಹಿಳೆಯ ಸಾವು ಸಂಬಂಧಿಕರಿಂದ ಹಿಂಸಾಚಾರಕ್ಕೆ ಕಾರಣವಾಯಿತು. ನರ್ಸ್ ಅನ್ನು ಬಿಹಾರ ನರ್ಸಿಂಗ್ ಹೋಂನ 1 ನೇ ಮಹಡಿಯಿಂದ ಎಸೆದರು. ಗರ್ಭಿಣಿಯ ಸಾವು ನಂತರ ಆಕೆಯ ಕುಟುಂಬವು ಆಸ್ಪತ್ರೆಯ ಅನೇಕ ಸೌಲಭ್ಯವನ್ನು ಧ್ವಂಸಗೊಳಿಸಿದೆ ಎಂದಿದ್ದಾರೆ.