ಹೆರಿಗೆ ನೋವು ಬಂದರೂ ರಜೆ ನೀಡದ ಮೇಲಧಿಕಾರಿ, ಗರ್ಭದಲ್ಲಿಯೇ ಮಗು ಕಳೆದುಕೊಂಡ ಮಹಿಳೆ!

ಅಕ್ಟೋಬರ್ 25 ರಂದು ಈ ಘಟನೆ ಸಂಭವಿಸಿದೆ ಆದರೆ ಮಂಗಳವಾರ ಮಹಿಳೆ ವರ್ಷಾ ಪ್ರಿಯದರ್ಶಿನಿ ತನ್ನ ಕಥೆಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಾಗ ಬೆಳಕಿಗೆ ಬಂದಿದೆ.

Pregnant Government Employee in Labour Denied Leave Loses Child san

ಭುವನೇಶ್ವರ (ಅ.30): ಕಚೇರಿಯಲ್ಲಿ ಕೆಲಸ ಮಾಡುವಾಗಲೇ ಹೆರಿಗೆ ನೋವು ಬಂದರೂ ರಜೆ ನಿರಾಕರಿಸಿದ ಕಾರಣಕ್ಕೆ ಮಹಿಳೆಯೊಬ್ಬಳು ತನ್ನ ಮಗುವನ್ನು ಗರ್ಭದಲ್ಲಿಯೇ ಕಳೆದುಕೊಂಡಿದ್ದಾಳೆ. ಈ ಬಗ್ಗೆ ಸ್ವತಃ ಆಕೆಯೇ ಮಾಧ್ಯಮ ಎದುರು ಹೇಳಿಕೊಂಡಿದ್ದಾರೆ. 26 ವರ್ಷದ ಮಹಿಳೆ ಒಡಿಶಾ ಸರ್ಕಾರಿ ಉದ್ಯೋಗಿಯಾಗಿದ್ದು, ಕೇಂದ್ರಪಾರ ಜಿಲ್ಲೆಯ ತಮ್ಮ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಅವಧಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಆದರೆ,  ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ (ಸಿಡಿಪಿಒ)ರಜೆ ನೀಡದ ಕಾರಣಕ್ಕೆ ತನ್ನ ಮಗುವನ್ನು ಗರ್ಭದಲ್ಲಿಯೇ ಕಳೆದುಕೊಂಡಿದ್ದೇನೆ ಎಂದಿದ್ದಾರೆ. ಅಕ್ಟೋಬರ್ 25 ರಂದು ಈ ಘಟನೆ ಸಂಭವಿಸಿದೆ ಆದರೆ ಮಂಗಳವಾರ ಮಹಿಳೆ ವರ್ಷಾ ಪ್ರಿಯದರ್ಶಿನಿ ತನ್ನ ಕಥೆಯನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಾಗ ಬೆಳಕಿಗೆ ಬಂದಿದೆ.

ಜಿಲ್ಲೆಯ ದೇರಾಬಿಶ್ ಬ್ಲಾಕ್‌ನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉದ್ಯೋಗಿ ವರ್ಷಾ ಅವರು ತಮ್ಮ ಏಳನೇ ತಿಂಗಳ ಗರ್ಭಾವಸ್ಥೆಯಲ್ಲಿದ್ದರು. ಅಕ್ಟೋಬರ್‌ 25 ರಂದು ಕಚೇರಿಯಲ್ಲಿ ಕೆಲಸ ಮಾಡುವ ಸಮಯದಲ್ಲಿಯೇ ತಮಗೆ ತೀವ್ರತರವಾದ ಹೆರಿಗೆ ನೋವು ಬಂದಿತ್ತು ಎಂದು ಹೇಳಿದ್ದಾರೆ. ಈ ಹಂತದಲ್ಲಿ ತಮ್ಮನ್ನು ಆಸ್ಪತ್ರೆಗೆ ಕರೆದೊಯ್ಯುವಂತೆ ಸಿಡಿಪಿಒ ಸ್ನೇಹಲತಾ ಸಾಹೂ ಮತ್ತು ಇತರ ಅಧಿಕಾರಿಗಳಿಗೆ ಮನವಿ ಮಾಡಿದರೂ ಅವರು ತಮ್ಮ ಮನವಿಯನ್ನು ನಿರ್ಲಕ್ಷ್ಯ ಮಾಡಿದರು ಎಂದು ಆರೋಪಿಸಿದ್ದಾರೆ. ಸ್ನೇಹಲತಾ ತಮ್ಮನ್ನು ಹೀನಾಯವಾಗಿ ನಡೆಸಿಕೊಂಡಿದ್ದಾರೆ ಎಂದು ವರ್ಷಾ ಹೇಳಿದ್ದಾರೆ.

ನವಿ ಮಾಡಿದರೂ ಅವರು ತಮ್ಮ ಮನವಿಯನ್ನು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿದರು. ಸ್ನೇಹಲತಾ ತನ್ನನ್ನು ಹೀನಾಯವಾಗಿ ನಡೆಸಿಕೊಂಡಿದ್ದಾಳೆ ಎಂದು ಬಾರ್ಷಾ ಹೇಳಿಕೊಂಡಿದ್ದಾರೆ.ಬಳಿಕ ಬರ್ಷಾಳ ಸಂಬಂಧಿಕರು ಆಕೆಯನ್ನು ಕೇಂದ್ರಪಾರಾದಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಟ್ರಾಸೌಂಡ್ ಪರೀಕ್ಷೆಯಲ್ಲಿ ಆಕೆಯ ಮಗು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

ಸಿಡಿಪಿಒ ಅವರ "ಮಾನಸಿಕ ಕಿರುಕುಳ ಮತ್ತು ಸಂಪೂರ್ಣ ನಿರ್ಲಕ್ಷ್ಯ"  ತನ್ನ ಮಗುವಿನ ಸಾವಿಗೆ ಕಾರಣವಾಗಿದೆ, ಸ್ನೇಹಲತಾ ಸಾಹೂ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಲಿಖಿತ ದೂರು ದಾಖಲು ಮಾಡಿದ್ದಾರೆ.

ಕೇಂದ್ರಪಾರ ಹೆಚ್ಚುವರಿ ಜಿಲ್ಲಾಧಿಕಾರಿ (ಎಡಿಎಂ) ನಿಲು ಮಹಾಪಾತ್ರ, ''ದೂರು ಸ್ವೀಕರಿಸಿದ ನಂತರ, ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾಡಳಿತವು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ (ಡಿಎಸ್‌ಡಬ್ಲ್ಯುಒ) ಅವರಿಗೆ ಸೂಚಿಸಿದೆ, ವರದಿ ಬಂದ ನಂತರ ನಾವು ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ. ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಉಪಮುಖ್ಯಮಂತ್ರಿ ಪ್ರವತಿ ಪರಿದಾ ಅವರು ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ಕೇಂದ್ರಪಾರಾ ಕಲೆಕ್ಟರ್‌ನೊಂದಿಗೆ ಘಟನೆಯ ಬಗ್ಗೆ ಚರ್ಚಿಸಿದ್ದಾರೆ ಮತ್ತು ತಕ್ಷಣ ವಿವರವಾದ ತನಿಖೆ ನಡೆಸಿ ವರದಿಯನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ ಎಂದು ಹೇಳಿದರು.

ಸೂರ್ಯ ಅಭಿನಯದ ಕಂಗುವಾ ಸಿನಿಮಾದ ಎಡಿಟರ್‌ ಶವವಾಗಿ ಪತ್ತೆ!

ಆರೋಪದ ಕುರಿತು ಪ್ರತಿಕ್ರಿಯಿಸಿದ ಸಿಡಿಪಿಒ, ವರ್ಷಾಳ ಕಷ್ಟದ ಬಗ್ಗೆ ತನಗೆ ತಿಳಿದಿರಲಿಲ್ಲ. ಆಕೆಗೆ ಹೆರಿಗೆ ನೋವು ಬಂದಿದ್ದು ಗೊತ್ತಾಗಲಿಲ್ಲ ಎಂದಿದ್ದಾರೆ.ಈ ಕುರಿತು ತನಿಖೆ ನಡೆಸಲು ಸಮಿತಿಯೊಂದನ್ನು ರಚಿಸಲಾಗುವುದು, ಅದರ ನಂತರ ನಾವು ನಮ್ಮ ವರದಿಯನ್ನು ಸಲ್ಲಿಸುತ್ತೇವೆ ಎಂದು ಕೇಂದ್ರಪಾರದ ಡಿಎಸ್‌ಡಬ್ಲ್ಯೂಒ ಮನೋರಮಾ ಸ್ವೈನ್ ತಿಳಿಸಿದ್ದಾರೆ.

ಪಹಣಿಯಲ್ಲಿ ವಕ್ಫ್‌ ಹೆಸರು ಹಾಕಿ ನಿದ್ದೆಗೆಡಿಸಿದ ಜಿಲ್ಲಾಧಿಕಾರಿಗೆ 'ಸ್ಲೀಪ್‌ ಟಾರ್ಚರ್‌' ಕೊಟ್ಟ ರೈತರು!

Latest Videos
Follow Us:
Download App:
  • android
  • ios