ಲೋಕಸಭಾ ಎಕ್ಸಿಟ್ ಪೋಲ್ ಬಹಿರಂಗಕ್ಕೆ ಕೆಲವೇ ಗಂಟೆ ಮುನ್ನ ಭವಿಷ್ಯ ನುಡಿದ ಪ್ರಶಾಂತ್ ಕಿಶೋರ್!
ಲೋಕಸಭಾ ಚುನಾವಣೋತ್ತರ ಸಮೀಕ್ಷಾ ವರದಿ ಬಹಿರಂಗಕ್ಕೆ ಕೆಲವೇ ಗಂಟೆಗಳು ಮಾತ್ರ ಬಾಕಿ. ಇದಕ್ಕೂ ಮುನ್ನ ಚುನಾವಣಾ ತಂತ್ರಗಾರ ಪ್ರಶಾಂಕ್ ಕಿಶೋರ್ ಫಲಿತಾಂಶದ ಭವಿಷ್ಯ ನುಡಿದಿದ್ದಾರೆ.
ನವದೆಹಲಿ(ಜೂನ್ 01) ಲೋಕಸಭಾ ಚುನಾವಣೆಯ ಅಂತಿಮ ಹಂತದ ಮತಾನದ ನಡೆಯುತ್ತಿದೆ. 7ನೇ ಹಂತದ ಮತದಾನ ಅಂತ್ಯಗೊಳ್ಳುತ್ತಿದ್ದಂತೆ ಮತಗಟ್ಟೆ ಸಮೀಕ್ಷಾ ವರದಿಗಳು ಪ್ರಕಟಗೊಳ್ಳಲಿದೆ. ಇದೀಗ ಎಲ್ಲರ ಚಿತ್ತ ಎಕ್ಸಿಟ್ ಪೋಲ್‌ನತ್ತ ನೆಟ್ಟಿದೆ. ಸಂಜೆ 6.30ರ ಹೊತ್ತಿಗೆ ಎಕ್ಸಿಟ್ ಪೋಲ್ ವರದಿಗಳು ಬಹಿರಂಗೊಳ್ಳಲಿದೆ. ಇದಕ್ಕೂ ಕೆಲವೇ ಗಂಟೆ ಮುನ್ನ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಈ ಬಾರಿಯ ಲೋಕಸಭಾ ಚುನಾವಣೆ ಫಲಿತಾಂಶದ ಕುರಿತು ಭವಿಷ್ಯ ನುಡಿದಿದ್ದಾರೆ. ಈ ಬಾರಿ ಬಿಜೆಪಿ ಪಕ್ಷ ಹಾಗೂ ಬಿಜೆಪಿ ನಾಯಕರು ನಿರೀಕ್ಷಿದಷ್ಟು ಸ್ಥಾನ ಗೆಲ್ಲುವುದಿಲ್ಲ. 2019ರಂತೆ 303 ಅಥವಾ ಅದಕ್ಕಿಂತ ಸ್ವಲ್ಪ ಸ್ಥಾನ ಹೆಚ್ಚು ಗೆಲ್ಲು ಸಾಧ್ಯತೆ ಇದೆ ಎಂದಿದೆ.
ಲೋಕಸಭಾ ಚುನಾವಣೆ ಫಲಿತಾಂಶ ಕುರಿತು ಪ್ರಶಾಂತ್ ಕಿಶೋರ್ ನುಡಿದ ಭವಿಷ್ಯ ಪ್ರಕಾರ, ಉತ್ತರ ಹಾಗೂ ಪಶ್ಚಿಮ ಭಾರತದಲ್ಲಿ ಬಿಜೆಪಿಯ ಸ್ಥಾನಗಳಲ್ಲಿ ಹೆಚ್ಚಿನ ಬದಲಾವಣೆಗಳಿಲ್ಲ. ಇಲ್ಲಿ ಸ್ಥಾನ ಹೆಚ್ಚುಗಳಿಸುವ ಸಾಧ್ಯತೆಯೂ ಇಲ್ಲ ಎಂದಿದ್ದಾರೆ. ಆದರೆ ಈಶಾನ್ಯ ಭಾರತ ಹಾಗೂ ದಕ್ಷಿಣ ಭಾರತದಲ್ಲಿ ಬಿಜೆಪಿ ಸ್ಥಾನ ಹೆಚ್ಚಾಗಲಿದೆ. ಹೀಗಾಗಿ 303 ಅಥವಾ ಒಂದೆರಡು ಸ್ಥಾನ ಹೆಚ್ಚಿಗೆ ಗಳಿಸಬಹುದು ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ಲೋಕಸಭೆಗೆ ಇಂದು ಕೊನೆ ಹಂತದ ಮತದಾನ: ಇಂದು ಸಂಜೆ ಎಕ್ಸಿಟ್‌ಪೋಲ್
ತೆಲಂಗಾಣ, ಆಂಧ್ರ ಪ್ರದೇಶ, ತಮಿಳುನಾಡು ಹಾಗೂ ಕೇರಳದಲ್ಲಿ ಹೆಚ್ಚು ಗಮನಹರಿಸಿದ್ದ ಬಿಜೆಪಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಲಿದೆ. ಇದು ದಕ್ಷಿಣ ಭಾರತದ ಸಂಖ್ಯೆ ಹೆಚ್ಚಿಗೆ ಕಾರಣವಾಗಲಿದೆ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.ಬಿಜೆಪಿಯ ಈ ಲೋಕಸಭಾ ಚುನಾವಣಾ ಘೋಷಣೆಯಂತೆ 400 ಸ್ಥಾನ ಸಾಧ್ಯತೆ ಕಡಿಮೆ ಎಂದಿದ್ದಾರೆ. ಎನ್‌ಡಿಎ ಕೂಟ 400 ಸ್ಥಾನ ಗೆಲ್ಲುವ ಸಾಧ್ಯತೆಗಳು ಕಡಿಮೆ. ಆದರೆ ಬಿಜೆಪಿ ಏಕಾಂಗಿಯಾಗಿ ಬಹುಮತ ಪಡೆಯಲಿದೆ. ಮೂರನೇ ಬಾರಿಗೆ ಮೋದಿ ಪ್ರಧಾನಿಯಾಗುವ ಎಲ್ಲಾ ಸಾಧ್ಯತೆಗಳಿವೆ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆ ಹೆಚ್ಚಾಗಿ ಇರಲಿಲ್ಲ. ಪ್ರಧಾನಿ ಮೋದಿ ವಿರುದ್ಧ ಅಸಮಾಧಾನ ಇರಬಹುದು. ಆದರೆ ದೇಶಾದ್ಯಂತ ಮೋದಿ ವಿರುದ್ಧ ಆಕ್ರೋಶ, ಆಡಳಿತ ವಿರೋಧಿ ಅಲೆ ಇರಲಿಲ್ಲ. ಪ್ರಧಾನಿ ಮೋದಿಗೆ ವಿರುದ್ಧ ಸಮರ್ಥ ನಾಯಕರ ಕೊರತೆಯೂ ಪ್ರತಿಪಕ್ಷಕ್ಕೆ ಎದುರಾಗಿತ್ತು. ಹೀಗಾಗಿ ಬಿಜೆಪಿ 2019ರಂತೆ ಈ ಬಾರಿಯೂ ಗೆಲುವು ದಾಖಲಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಬಿಜೆಪಿ, ಎಎಪಿ, ಕಾಂಗ್ರೆಸ್ ನಡುವೆ ಬಿಗ್ ಫೈಟ್, ಯಾರಾಗ್ತಾರೆ ದೆಹಲಿ ಸುಲ್ತಾನ?