Asianet Suvarna News Asianet Suvarna News

ಕೇಂದ್ರ, ರಾಜ್ಯ ಸರ್ಕಾರಕ್ಕೆ ಪ್ರಶಾಂತ್ ಕಿಶೋರ್ ಸವಾಲು!

ಕಾರ್ಮಿಕರ ಬಳಿ ರೈಲು ಟಿಕೆಟ್ ದರ| ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಪ್ರಶ್ನೆ| ಎಲ್ಲರೂ ಸಹಾಯ ಮಾಡ್ತಿದ್ದಾರೆಂದರೆ ಕಾರ್ಮಿಕರ ಬಳಿ ಹಣ ಪಡೆಯುತ್ತಿರುವವರಾರು?

Prashant Kishor Mocks Centre, State Govts Over Migrant Issue
Author
Bangalore, First Published May 9, 2020, 3:38 PM IST
  • Facebook
  • Twitter
  • Whatsapp

ಪಾಟ್ನಾ(ಮೇ.09): ದೇಶದಲ್ಲಿ ಕೊರೋನಾ ವೈರಸ್ ತಡೆಯುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್‌ಡೌನ್ ಹೇರಲಾಗಿದೆ. ಲಾಕ್‌ಡೌನ್ ಮೂರನೇ ಹಂತಕ್ಕೂ ಮೊದಲೇ ಕೇಂದ್ರ ಸರ್ಕಾರ ಅಲ್ಲಲ್ಲಿ ಸಿಲುಕಿಕೊಂಡಿದ್ದ ಕಾರ್ಮಿಕರಿಗೆ ತಮ್ಮ ತವರು ನಾಡಿಗೆ ತೆರಳುವ ಅವಕಾಶ ನೀಡಿತ್ತು. ಈ ನಿಟ್ಟಿನಲ್ಲಿ ಶ್ರಮಿಕ್ ಸ್ಪೆಷಲ್ ಹೆರಸಿನ ರೈಲು ಸೇವೆಯನ್ನೂ ಆರಂಭಿಸಲಾಗಿದೆ. ಹೀಗಿರುವಾಗ ಅನೇಕ ರಾಜ್ಯಗಳಲ್ಲಿ ಕಾರ್ಮಿಕರಿಂದ  ಹಣವನ್ನೂ ವಸೂಲಿ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಇತ್ತ ಕಾಂಗ್ರೆಸ್ ಕಾರ್ಮಿಕರ ರೈಲು ಪ್ರಯಾಣದ ಟಿಕೆಟ್‌ ಮೊತ್ತವನ್ನು ತಾನೇ ಭರಿಸುವುದಾಗಿ ಮುಂದೆ ಬಬಂದಿದೆ. ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಖುದ್ದು ಈ ಘೋಷಣೆ ಮಾಡಿದ್ದಾರೆ.  ಇದೀಗ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಈ ವಿಚಾರವಾಗಿ ಕೆಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಪ್ರಶ್ನೆ ಎಸೆದಿದ್ದಾರೆ.

ಈ ಸಂಬಂಧ ಪ್ರಶಾಂತ್ ಕಿಶೋರ್ ಟ್ವಿಟ್ ಮಾಡಿದ್ದು, 'ರೈಲ್ವೇ 85% ಸಬ್ಸಿಡಿ ನೀಡುತ್ತಿದೆ. ಕೇಂದ್ರ ಹಣ ಪಡೆಯುತ್ತಿಲ್ಲ ಹಾಗೂ ರಾಜಗ್ಯ ಟಿಕೆಟ್ ಜೊತೆ ಇನ್ನಿತರ ಸೌಲಭ್ಯಗಳನ್ನೂ ನೀಡುವುದಾಗಿ ಹೇಳಿಕೊಂಡಿದೆ. ಅತ್ತ ವಿಪಕ್ಷ ಕೂಡಾ ಕಾರ್ಮಿಕರ ಟಿಕೆಟ್‌ ವೆಚ್ಚ ಭರಿಸುವುದಾಗಿ ಹೇಳಿದೆ. ಹಾಗಾದ್ರೆ ಎಲ್ಲರೂ ಇಷ್ಟೊಂದು ಸಹಾಯ ಮಾಡುತ್ತಿದ್ದಾರೆಂದರೆ ಕಾರ್ಮಿಕರು ಯಾಕಿಷ್ಟು ಅಸಹಾಯಕರಾಗಿದ್ದಾರೆ? ಮತ್ತು ಅವರಿಂದ ಹಣ ಪಡೆಯುತ್ತಿರುವವರು ಯಾರು?' ಎಂದು ಪ್ರಶ್ನಿಸಿದ್ದಾರೆ.

ಇನ್ನು ಕಾರ್ಮಿಕರ ಟಿಕೆಟ್ ವಿಚಾರ ರಾಜಕೀಯ ಬಣ್ಣ ಪಡೆದಿದೆ. ಬಿಹಾರದ ಮಂತ್ರಿ ಸಂಜಯ್ ಕುಮಾರ್ ಝಾ ದೆಹಲಿ ಸರ್ಕಾರದ ಮೇಲೆ ಆರೋಪ ಮಾಡುತ್ತಾ, ನಾನು ದೆಹಲಿ ಸರ್ಕಾರದ ಮಂತ್ರಿಯೊಬ್ಬರ ಟ್ವೀಟ್ ನೋಡಿದೆ. ಅವರು ಇದರಲ್ಲಿ ದೆಹಹಲಿಯ ಮುಜಫ್ಫರ್‌ಪುರ್ಗೆ ತೆರಳುವ 1200 ಮಂದಿಯ ಟಿಕೆಟ್ ದರ ಎಹಲಿ ಸರ್ಕಾರ ನೀಡಿಎ ಎಂದಿದೆ. ಆದರೆ ನನ್ನ ಬಳಿ ದೆಹಲಿ ಸರ್ಕಾರದ ಪತ್ರವೊಂದಿದೆ. ಇದರಲ್ಲಿ ಅವರು ಬಿಹಾರ ಸರ್ಕಾರದಿಂದ ಈ ದರ ಭರಿಸುವಂತೆ ಮನವಿ ಮಾಡಿಕೊಂಡಿದೆ ಎಂದಿದ್ದಾರೆ.

Follow Us:
Download App:
  • android
  • ios