ಪ್ರಣಬ್‌ ಪುಸ್ತಕ ಬಿಡುಗಡೆ: ಪುತ್ರ, ಪುತ್ರಿಯ ನಡುವೆ ನಡುವೆ ಟ್ವೀಟರ್‌ ವಾರ್‌!

ಮಾಜಿ ರಾಷ್ಟ್ರಪತಿ ದಿ. ಪ್ರಣಬ್‌ ಮುಖರ್ಜಿ ಅವರ ‘ದಿ ಪ್ರೆಸಿಡೆಂಶ್ಶಿಯಲ್‌ ಇಯರ್‌’ ಆತ್ಮಕಥನದ ಅಂತಿಮ ಭಾಗ| ಪುತ್ರ, ಮಾಜಿ ಸಂಸದ ಅಭಿಜಿತ್‌ ಮುಖರ್ಜಿ ಮತ್ತು ಪುತ್ರಿ ಶರ್ಮಿಷ್ಠ ಮುಖರ್ಜಿ ನಡುವೆ ಮಂಗಳವಾರ ವಾಗ್ವಾದ

Pranab Mukherjee son and daughter in spat over his memoir pod

 

ನವದೆಹಲಿ(ಡಿ.16): ಮಾಜಿ ರಾಷ್ಟ್ರಪತಿ ದಿ. ಪ್ರಣಬ್‌ ಮುಖರ್ಜಿ ಅವರ ‘ದಿ ಪ್ರೆಸಿಡೆಂಶ್ಶಿಯಲ್‌ ಇಯರ್‌’ ಆತ್ಮಕಥನದ ಅಂತಿಮ ಭಾಗ ಬಿಡುಗಡೆಗೆ ಸಂಬಂಧಿಸಿದಂತೆ ಪುತ್ರ, ಮಾಜಿ ಸಂಸದ ಅಭಿಜಿತ್‌ ಮುಖರ್ಜಿ ಮತ್ತು ಪುತ್ರಿ ಶರ್ಮಿಷ್ಠ ಮುಖರ್ಜಿ ನಡುವೆ ಮಂಗಳವಾರ ವಾಗ್ವಾದ ನಡೆದಿದೆ. ಅಭಿಜಿತ್‌ ಮುಖರ್ಜಿ, ‘ಪುಸ್ತಕದ ಆಯ್ದ ಭಾಗಗಳನ್ನು ಉದ್ದೇಶಪೂರ್ವಕವಾಗಿಯೇ ಬಿಡುಗಡೆ ಮಾಡಲಾಗಿದೆ.

ನಮ್ಮ ತಂದೆ ಬದುಕಿದ್ದರೆ ಇದಕ್ಕೆ ಅವಕಾಶ ನೀಡುತ್ತಿರಲಿಲ್ಲ. ಹಾಗಾಗಿ ಅವರ ಪುತ್ರನಾಗಿ ನನ್ನ ಲಿಖಿತ ಅನುಮತಿ ಇಲ್ಲದೆ ಪುಸ್ತಕ ಬಿಡುಗಡೆ ಮಾಡಬಾರದು’ ಎಂದು ಟ್ವೀಟ್‌ ಮೂಲಕ ಒತ್ತಾಯಿಸಿದ್ದರು. ಇದರ ಬೆನ್ನಲ್ಲೇ ಪುತ್ರಿ ಶರ್ಮಿಷ್ಠ ಮುಖರ್ಜಿ ಕೂಡ ಟ್ವೀಟ್‌ ಮಾಡಿ,‘ಸಹೋದರ ಅಭಿಜಿತ್‌, ಪುಸ್ತಕ ಬಿಡುಗಡೆಗೆ ಸಂಬಂಧಿಸಿದಂತೆ ಅನಗತ್ಯ ಅಡಚಣೆ ಬೇಡ. ಅವರು ಅನಾರೋಗ್ಯ ಪೀಡಿತರಾಗುವ ಮೊದಲೇ ಕೈ ಬರಹದ ಪ್ರತಿಯನ್ನು ಪರಿಶೀಲಿಸಿದ್ದರು. ಪುಸ್ತಕದಲ್ಲಿ ಬರೆದಿರುವುದು ಅವರ ಸ್ವಂತ ಅಭಿಪ್ರಾಯ. ಪ್ರಚಾರಕ್ಕಾಗಿ ಆ ಪುಸ್ತಕದ ಬಿಡುಗಡೆಯನ್ನು ತಡೆಯಲು ಯಾರೂ ಪ್ರಯತ್ನಿಸಬಾರದು’ ಎಂದಿದ್ದಾರೆ.

ರೂಪ ಪ್ರಕಾಶನ ಇತ್ತೀಚೆಗೆ ಪುಸ್ತಕದ ಆಯ್ದ ಭಾಗವನ್ನು ಬಿಡುಗಡೆ ಮಾಡಿತ್ತು. ಅದರಲ್ಲಿ 2014ರ ಕಾಂಗ್ರೆಸ್‌ ಪಕ್ಷದ ಸೋಲಿಗೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರೇ ಕಾರಣ ಎಂದು ಆಪಾದಿಸಲಾಗಿತ್ತು.

Latest Videos
Follow Us:
Download App:
  • android
  • ios