ನವ​ದೆ​ಹ​ಲಿ(ಫೆ.24): ಕೇಂದ್ರದ 3 ಕೃಷಿ ಕಾಯ್ದೆ​ಗಳ ವಿರುದ್ಧ ತಾವು ಪ್ರತಿ​ನಿ​ಧಿ​ಸುವ ಕೇರ​ಳದ ವಯ​ನಾ​ಡ್‌ ಲೋಕ​ಸಭಾ ಕ್ಷೇತ್ರ​ದಲ್ಲಿ ಟ್ರ್ಯಾಕ್ಟರ್‌ ರಾರ‍ಯಲಿ ನಡೆ​ಸಿದ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ವಿರುದ್ಧ ಕೇಂದ್ರ ಸಂಸ​ದೀಯ ಸಚಿವ ಪ್ರಹ್ಲಾದ್‌ ಜೋಶಿ ಕಿಡಿ​ಕಾ​ರಿ​ದ್ದಾರೆ.

ಮಂಗ​ಳ​ವಾರ ಈ ಬಗ್ಗೆ ಸುದ್ದಿ​ಗೋ​ಷ್ಠಿ​ಯ​ನ್ನು​ದ್ದೇ​ಶಿಸಿ ಪ್ರಹ್ಲಾದ್‌ ಜೋಶಿ ಅವರು, ‘ರಾಹುಲ್‌ ಗಾಂಧಿ ಅವರು ಟ್ರ್ಯಾಕ್ಟ​ರ್‌​ನಲ್ಲಿ ನಟ​ನಾ​ಗಲು ಯತ್ನಿ​ಸು​ತ್ತಿ​ದ್ದಾರೆ. ನೀವು​(​ರಾಹು​ಲ್‌​ಗಾಂಧಿ) ಎಪಿ​ಎಂಸಿ ಪರ​ವಾ​ಗಿ​ದ್ದರೆ, ಕೇರ​ಳ​ದಲ್ಲಿ ಒಂದೇ ಒಂದು ಎಪಿ​ಎಂಸಿ​ಗ​ಳಿಲ್ಲ ಏಕೆ?’ ಎಂದು ಪ್ರಶ್ನಿ​ಸಿ​ದರು. ಅಲ್ಲದೆ ನಿಮ್ಮದೇ ಕಾಂಗ್ರೆಸ್‌ ಸರ್ಕಾ​ರ​ ಪಂಜಾ​ಬ್‌​ನಲ್ಲಿ ಒಪ್ಪಂದ​ವನ್ನು ಉಲ್ಲಂಘಿ​ಸುವ ರೈತ​ರನ್ನು ಜೈಲಿಗೆ ಕಳಿ​ಸುವ ಕಾನೂನನ್ನು ಜಾರಿಗೆ ತಂದಿದೆ ಎಂದು ರಾಹು​ಲ್‌​ರನ್ನು ತರಾ​ಟೆಗೆ ತೆಗೆ​ದು​ಕೊಂಡರು.

ಕೇರ​ಳದ ಆಡ​ಳಿ​ತಾ​ರೂಢ ಎಡ​ಪಂಥೀಯ ಎಲ್‌​ಡಿ​ಎಫ್‌ ಮೈತ್ರಿ ಹಾಗೂ ಕಾಂಗ್ರೆಸ್‌ ನೇತೃ​ತ್ವದ ಯುಡಿ​ಎಫ್‌ ಮೈತ್ರಿ ಕುರಿ​ತಾಗಿ ಪ್ರತಿ​ಕ್ರಿ​ಯಿ​ಸಿದ ಜೋಶಿ ಅವರು, ಕೇರ​ಳ​ದಲ್ಲಿ ಮಾತ್ರ ಕುಸ್ತಿ​ಯಾ​ಡು​ತ್ತಿ​ರುವ ಎಡ​ಪಕ್ಷ ಮತ್ತು ಕಾಂಗ್ರೆಸ್‌ ಪಕ್ಷ​ಗಳು ದಿಲ್ಲಿ​ಯಲ್ಲಿ ದೋಸ್ತಿ​ಗ​ಳಾ​ಗಿವೆ. ಈ ಪಕ್ಷಗಳ ಬೂಟಾ​ಟಿ​ಕೆ​ಯನ್ನು ನೀವೇ ನೋಡಿ. ಅದೇ ರೀತಿ ಪಶ್ಚಿಮ ಬಂಗಾಳ ಮುಖ್ಯ​ಮಂತ್ರಿ ಮಮತಾ ಬ್ಯಾನರ್ಜಿ ದಿಲ್ಲಿ​ಯಲ್ಲಿ ಕಾಂಗ್ರೆಸ್‌ ಅನ್ನು ಬೆಂಬ​ಲಿ​ಸು​ತ್ತಾರೆ. ಆದರೆ ಅವರ ರಾಜ್ಯ​ದಲ್ಲಿ ಕಾಂಗ್ರೆಸ್‌ ಅನ್ನು ವಿರೋ​ಧಿ​ಸು​ತ್ತಾರೆ ಎಂದು ವಿಪ​ಕ್ಷ​ಗಳ ನಾಟ​ಕ​ಗಳ ಕುರಿ​ತಾಗಿ ವ್ಯಂಗ್ಯ​ವಾ​ಡಿ​ದ​ರು.

 ಅಲ್ಲದೆ ರಾಹುಲ್‌ ಗಾಂಧಿ ಅವರು ಪ್ರಜಾ​ಪ್ರ​ಭು​ತ್ವ​ದಲ್ಲಿ ನಂಬಿ​ಕೆ​ಯಿ​ರಿ​ಸಿ​ದ್ದಾ​ರೆಯೇ ಅಥವಾ ಇಂಥ ಬೂಟಾ​ಟಿ​ಕೆ​ಯಲ್ಲಿ ವಿಶ್ವಾ​ಸ​ವಿ​ಟ್ಟಿ​ದ್ದಾ​ರೆಯೇ ಎಂಬು​ದನ್ನು ಬಹಿ​ರಂಗಪಡಿ​ಸ​ಬೇ​ಕೆಂದು ಜೋಶಿ ಅವರು ಒತ್ತಾ​ಯಿ​ಸಿ​ದರು.