ಕೇಂದ್ರ ಯೋಜನೆ ರಾಜ್ಯದ ಲೇಬಲ್ ಹಾಕಿ ವಿತರಣೆ ಮಾಡುವುದು, ಕೇರಳದಲ್ಲಿನ ಯಾವುದೇ ಸಮಸ್ಯೆಗೆ ಅದು ಕೇಂದ್ರದ ಸಮಸ್ಯೆ ಎಂದು ಬಿಂಬಿಸುವ ಪಿಣರಾಯಿ ವಿಜಯ್ ಸರ್ಕಾರದ ಕುತಂತ್ರ ಬಟಾ ಬಯಲಾಗಿದೆ. ರೇಶನ್ ಹಾಗೂ ಪೆನ್ಶನ್ ಸ್ಕೀಂನಲ್ಲಿ ಕೇರಳದ ಅಸಲಿಯತ್ತು ಬಯಲಾಗಿದೆ. 

ನವದೆಹಲಿ(ಏ.29): ಸಮಸ್ಯೆ ಬಂದಾಗ ಕೇಂದ್ರದತ್ತ ಕೈತೋರಿಸಿ, ಕೇಂದ್ರ ಯೋಜನೆಗಳನ್ನು ತಮ್ಮದೇ ಸರ್ಕಾರದ ಯೋಜನೆಗಳೆಂದು ಬಿಂಬಿಸುವ ಕೇರಳ ಸರ್ಕಾರದ ಅಸಲಿಯತ್ತು ಬಯಲಾಗಿದೆ. ಪಡಿತರ ಹಾಗೂ ಪಿಂಚಣಿ ಸಿಗದೆ ಕೇರಳ ಜನರು ಪರದಾಡುತ್ತಿದ್ದರೆ, ಇತ್ತ ಸರ್ಕಾರ ಅಪ್‌ಗ್ರೇಡ್ ಮಾಡದ ಹಳೇ ಸಿಸ್ಟಮ್ ಹಿಡಿದು ಕೇಂದ್ರದತ್ತ ಕೈತೋರಿಸಿದೆ. ಕೇರಳ ಸರ್ಕಾರದ ಅಸಲಿಯತ್ತನ್ನು ಬಿಜೆಪಿ ನಾಯಕ, ರಾಜ್ಯಸಭಾ ಸದಸ್ಯ ಪ್ರಕಾಶ್ ಜಾವೇಡಕರ್ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ತಮ್ಮ ವೈಫಲ್ಯಗಳನ್ನು ಕೇಂದ್ರದ ಮೇಲೆ ಹಾಕುವ ಕೇರಳದ ಚಾಳಿ ಮತ್ತೆ ಮುಂದುವರಿದಿದೆ. ಕೇಂದ್ರದ ಯೋಜನಗಳನ್ನು ರಾಜ್ಯ ಸರ್ಕಾರದ ಸ್ಕೀಂ ಎಂದು ಬಿಂಬಿಸುವ ಈ ಕುತಂತ್ರ ಜನರಿಗೆ ಅರ್ಥವಾಗಲಿದೆ ಎಂದು ಜಾವೇಡಕರ್ ಹೇಳಿದ್ದಾರೆ. ಇದಕ್ಕೆ ಇತ್ತೀಚೆಗೆನಿ ಉದಾಹರಣೆ ಎಂದರೆ ಪಡಿತರ ಹಾಗೂ ಪಿಂಚಿಣಿ ಸಮಸ್ಯೆ ಎಂದಿದ್ದಾರೆ.

ಕೇರಳದ ಫಲಾನುಭವಿಗಳಿಗೆ ರೇಶನ್ ಹಾಗೂ ಪಿಂಚಣಿ ಸಿಗದೆ ಪರದಾಡುವಂತಾಗಿದೆ. ಈ ಸಮಸ್ಯೆಗೆ ಕೇರಳ ಸರ್ಕಾರ ಮಾತ್ರ ಕೇಂದ್ರತ್ತ ಬೊಟ್ಟು ಮಾಡುತ್ತಿದೆ. ಫಲಾನುಭವಿಗಳಿಗೆ ರೇಶನ್ ಹಾಗೂ ಪೆನ್ಶನ್ ವಿತರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕೇಂದ್ರ ಸರ್ಕಾರದ NIC ಸರ್ವರ್ ಸಮಸ್ಯೆಯಾಗಿದೆ ಎಂದು ಕೇರಳ ಸರ್ಕಾರ ಹೇಳಿದೆ. ಆದರೆ ನಿಜವಾದ ಸಮಸ್ಯೆ ಇರುವುದು NIC ಸರ್ವರ್‌ನಲ್ಲಿ ಇಲ್ಲ.NIC ಕೇವಲ ಸಾಫ್ಟ್‌ವೇರ್ ನಿರ್ವಹಣೆ ಮಾಡುತ್ತದೆ. ಸಮಸ್ಯೆ ಇರುವುದು ಕೇರಳದ ಹಳೇ ಸಿಸ್ಟಮ್‌ನಿಂದ ಕೇರಳದ ಡೇಟಾ ಹಾಗೂ ಸರ್ವರ್ ಕೇಂದ್ರದಲ್ಲಿ ಸಮಸ್ಯೆ ಇದೆ. ಆದರೆ ಕೇರಳ ಸರ್ಕಾರ NIC ತೋರಿಸಿ ಜನರನ್ನು ಮೋಸ ಮಾಡುತ್ತಿದೆ ಎಂದು ಜಾವೇಡಕರ್ ದಾಖಲೆ ಸಮೇತ ಉತ್ತರಿಸಿದ್ದಾರೆ.

ಕೇರಳದ ಮೊದಲ ವಂದೇ ಭಾರತ್‌ ರೈಲಿಗೆ ಕಾಂಗ್ರೆಸ್‌ ಸಂಸದನ ಪೋಸ್ಟರ್‌: ನೆಟ್ಟಿಗರ ಕಿಡಿ

ಕೇರಳ ಪಿಡಿಎಸ್ ಆ್ಯಪ್ಲೇಕೇಶನ್ ಅಪ್‌ಗ್ರೇಡ್ ಆಗಬೇಕಿದೆ. ಕೇರಳ ಸರ್ಕಾರ ಬಳಸುತ್ತಿರುವುದು 7 ವರ್ಷ ಹಳೇ ಸಾಫ್ಟ್‌ವೇರ್. NIC ಅಭಿವೃದ್ಧಿಪಡಿಸಿ ಹೊಚ್ಚ ಹೊಸ ಸಾಫ್ಟ್‌ವೇರನ್ನು 22 ರಾಜ್ಯಗಳು ಬಳಸುತ್ತಿದೆ. ಕೇರಳದಲ್ಲಿ ನೂತನ ಸಾಫ್ಟ್‌ವೇರ್ ಬಳಸಲು ಸೂಚನೆ ನೀಡಲಾಗಿತ್ತು. ಹಳೇ ಸಾಫ್ಟ್‌ವೇರ್‌ನಿಂದ ಎಲ್ಲಾ ಮಾಹಿತಿಗಳನ್ನು ನೂತನ ಸಾಫ್ಟ್‌ವೇರ್ ಸ್ಥಳಾಂತರ ಮಾಡಲು ಸೂಚಿಸಲಾಗಿತ್ತು. ಆದರೆ ಕೇರಳ ಸರ್ಕಾರ 7 ವರ್ಷ ಹಳೇ ಸಿಸ್ಟಮ್ ಹಿಡಿದು ಇದೀಗ ಕೇಂದ್ರದ ಮೇಲೆ ಬೊಟ್ಟು ಮಾಡುತ್ತಿದೆ ಎಂದು ಜಾವಡೇಕರ್ ಹೇಳಿದ್ದಾರೆ.

ಪ್ರಧಾನಿ ಮೋದಿ ಮೇಲೆ ಆತ್ಮಾಹುತಿ ದಾಳಿಗೆ ಸಂಚು: ಬೆದರಿಕೆ ಪತ್ರ ಬರೆದಿದ್ದ ಆರೋಪಿ ಅರೆಸ್ಟ್‌

ಆಧಾರ್ ದೃಢೀಕರಣ ಮಾಡಿಸುವುದು ರಾಜ್ಯದ ಜವಾಬ್ದಾರಿಯಾಗಿದೆ. ಆದರೆ ಕೇರಳ ಈ ಕುರಿತು ಅಸಡ್ಡೆ ತೋರಿದೆ. ಇದರಿಂದ ಜನರು ಪಡಿತರ ಸಿಗದೆ ಪರದಾಡುತ್ತಿದ್ದಾರೆ. ಇದೀಗ nic ಮೂಲಕ ಆಧಾರ್ ದೃಢೀಕರಿಸುವಂತೆ UIDAIಗೆ ಕೇರಳ ಸರ್ಕಾರ ಮನವಿ ಮಾಡಿದೆ. ಆದರೆ ಇದು ರಾಜ್ಯದ ಕೆಲಸ ಅನ್ನೋದನ್ನು ಕೇರಳ ಜನರಿಂದ ಮುಚ್ಚಿಟ್ಟಿದೆ. ಪಿಂಚಣಿ ಪಡೆಯಲು ಕೇರಳ ರಾಜ್ಯ ಸರ್ಕಾರ ಅಕ್ಷಯ ಕೇಂದ್ರದಕ್ಕೆ ಜವಾಬ್ದಾರಿ ನೀಡಿದೆ. ಆದರೆ ಅಕ್ಷಯ್ ಕೇಂದ್ರ ಪಿಂಚಣಿ ಜವಾಬ್ದಾರಿಯನ್ನು ಹೇಗೆ ವಹಿಸಲಾಗಿದೆ ಎಂದು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಹೀಗಾಗಿ ಅಕ್ಷಯ್ ಕೇಂದ್ರ ಸ್ಥಗಿತಗೊಂಡಿದೆ. ಈ ಸಮಸ್ಯಗಳಿಂದ ಪಿಂಚಣಿದಾರರಿಗೆ ಪಿಂಚಣಿ ಸಿಗದೆ ಸಮಸ್ಯೆಯಾಗುತ್ತಿದೆ. ಆದರೆ ಕೇರಳ ಸರ್ಕಾರ ಇವೆಲ್ಲವೂ ಕೇಂದ್ರದ ಸಮಸ್ಯೆ ಎಂದು ಬಿಂಬಿಸಲು ಹೊರಟಿದೆ ಎಂದು ಪ್ರಕಾಶ್ ಜಾವೇಡಕರ್ ಹೇಳಿದ್ದಾರೆ.