Asianet Suvarna News Asianet Suvarna News

ದೇವಸ್ಥಾನದ ಬಳಿ ಅಗೆಯುತ್ತಿದ್ದಾಗ ಸಿಕ್ತು 1.7 ಕೆ. ಜಿ ಚಿನ್ನದ ನಾಣ್ಯ!

ದೇವಸ್ಥಾನದ ಬಳಿ ಸಿಕ್ತು 1.7 ಕೆ. ಜಿ ಚಿನ್ನದ ನಾಣ್ಯ!| 1 ಸಾವಿರದಿಂದ 1200 ವರ್ಷ ಹಳೆಯ ನಾಣ್ಯಗಳು

Pot of gold coins unearthed at Thiruvanaikovil temple
Author
Bangalore, First Published Feb 27, 2020, 3:11 PM IST

ಚೆನ್ನೈ[ಫೆ.27]: ತಿರುವನ್ನಾಲೈಕಾವಲ್ ನ ಜಂಬುಕೇಶ್ವರ ದೇವಸ್ಥಾನದ ಬಳಿ ಅಗೆಯುತ್ತಿದ್ದ ವೇಳೆ ತಾಮ್ರದ ಪಾತ್ರೆಯೊಂದರಲ್ಲಿ 1.7 ಕೆ. ಜಿಯ 505 ಚಿನ್ನದ ನಾಣ್ಯಗಳು ಪತ್ತೆಯಾಗಿವೆ. ಈ ಸುದ್ದಿ ಬಹಿರಂಗವಾಗುತ್ತಿದ್ದಂತೆಯೇ ಜನರೆಲ್ಲರೂ ಬಹುದೊಡ್ಡ ಸಂಖ್ಯೆಯಲ್ಲಿ ಮಣ್ಣು ಅಗೆಯುತ್ತಿದ್ದವ ಸ್ಥಳಕ್ಕೆ ಧಾವಿಸಿದ್ದಾರೆ.

ಇನ್ನು ದೇವಸ್ಾಥನದ ಆಡಳಿತಾಧಿಕಾರಿಗಳು ಈ ಕುರಿತಾಗಿ ಪ್ರತಿಕ್ರಿಯಿಸಿದ್ದು, 'ಭೂಮಿಯೊಳಗೆ ಹೂತಿಟ್ಟಿದ್ದ 504 ಸಣ್ಣ ಹಾಗೂ 1 ದೊಡ್ಡ ಚಿನ್ನದ ನಾಣ್ಯ ಸಿಕ್ಕಿದೆ. ಇವುಗಳ ಮೇಲೆ ಅರೇಬಿಯನ್ ಕ್ಷರಗಳಿವೆ. ಇವುಗಳು ಸುಮಾರು 1 ಸಾವಿರದಿಂದ 1200 ವರ್ಷ ಹಳೆಯ ನಾಣ್ಯಗಳಾಗಿರಬಹುದೆಂದು ಅಂದಾಜಿಸಲಾಗಿದೆ. ಇವು ಸುಮಾರು 7 ಅಡಿ ಆಳದಲ್ಲಿ ಸಿಕ್ಕಿವೆ' ಎಂದಿದ್ದಾರೆ.

ಇನ್ನು ಪತ್ತೆಯಾದ ತಾಮ್ರದ ಪಾತ್ರೆ ತೆರೆದು ನೋಡಿದಾಗ ಅದರಲ್ಲಿ ಚಿನ್ನದ ನಾಣ್ಯಗಳು ಪತ್ತೆಯಾಗಿವೆ. ಈ ನಾಣ್ಯಗಳನ್ನು ದೇವಸ್ಥಾನದ ಆಡಳಿತ ಮಂಡಳಿ ಪೊಲೀಸರಿಗೊಪ್ಪಿಸಿದ್ದಾರೆ. ಸದ್ಯ ನಾಣ್ಯದ ಮೌಲ್ಯ ಎಷ್ಟು ಎಂಬ ಮಾಹಿತಿ ಲಭ್ಯವಾಗಿಲ್ಲ.

ಪತ್ತೆಯಾದ ಈ ನಾಣ್ಯಗಳನ್ನು ಮುಂದಿನ ತನಿಖೆಗೆಂದು ಖಜಾನೆಯಲ್ಲಿ ಇರಿಸಲಾಗಿದೆ. ಸದ್ಯ ಸುದ್ದಿ ಸಂಸ್ಥೆ ANI ಈ ನಾಣ್ಯಗಳ ಫೋಟೋ ಟ್ವೀಟ್ ಮಾಡಿದೆ.

Follow Us:
Download App:
  • android
  • ios