ಡೆಹ್ರಾಡೂನ್(ಏ.29): ಉತ್ತರಾಖಂಡ್‌ನ ಎತ್ತರದ ಪರ್ವತ ಶ್ರೇಣಿ ಹಿಮಾಲಯರುವ ವಿಶ್ವ ಪ್ರಸಿದ್ಧ ಬಾಬಾ ಕೇದಾರನಾಥನ ದೇಗುಲದ ಬಾಗಿಲು ಬರೋಬ್ಬರಿ ಆರು ತಿಂಗಳ ಬಳಿಕ ಬುಧವಾರ ಮುಂಜಾನೆ ತೆರೆಯಲಾಗಿದೆ. ಹೀಗಿರುವಾಗ ಪ್ರಧಾನಿ ಮೋದಿ ಹೆಸರಿನಲ್ಲಿ ಮೊದಲ ಪೂಜೆ ನಡೆದಿದೆ. 

11ನೇ ಜ್ಯೋತಿರ್ಲಿಂಗ ಕೇದಾರನಾಥ ದೇಗುಲದ ದ್ವಾರ ಮೇಷ ಲಗ್ನನ, ಪುನರ್ವಸು ನಕ್ಷತ್ರ ಬೆಳಗ್ಗೆ 6 ಗಂಟೆ 10 ನಿಮಿಷಕ್ಕೆ ವಿಧಿ ವಿಧಾನಗಳೊಂದಿಗೆ ಪೂಜೆ, ಅರ್ಚನೆ ಬಳಿಕ ತೆರೆಯಲಾಗಿದೆ. ಈ ಸಂದರ್ಭದಲ್ಲಿ ದೇಗುಲವನ್ನು ಹತ್ತು ಕ್ವಿಂಟಾಲ್ ಹೂವಿನಿಂದ ಸಿಂಗರಿಸಲಾಗಿದೆ.

ಕೇದಾರನಾಥಕ್ಕೆ ತೆರಳಲು ಮೋದಿ ನೆರವು ಕೋರಿದ ಭೀಮಾಶಂಕರ ಸ್ವಾಮೀಜಿ!

ಕೊರೋನಾ ವೈರಸ್‌ ಅಟ್ಟಹಾಸದ ನಡುವೆ ರುದ್ರಪ್ರಯಾಗ ಜಿಲ್ಲೆಯಲ್ಲಿರುವ ಈ ದೇಗುಲದ ಮುಖ್ಯದ್ವಾರ ತೆರೆಯುವ ವೇಳೆ ಕೇವಲ ಇಲ್ಲಿನ ಮುಖ್ಯ ಅರ್ಚಕರು, ದೇಗುಲ ಸಮಿತಿಯ ಪದಾಧಿಕಾರಿಗಳು ಹಾಗೂ ಆಡಳಿತ ಅಧಿಕಾರಿಗಳಷ್ಟೇ ಹಾಜರಿದ್ದರು. ಈ ವೇಳೆ ಸಾಮಾಜಿಕ ಅಂತರ ಸೇರಿ ಎಲ್ಲಾ ರೀತಿಯ ನಿಯಮಗಳನ್ನು ಪಾಲಿಸಲಾಗಿದೆ.

ಮಹಾಮಾರಿಯಿಂದಾಗಿ ಜಹಹನ ಸಾಮಾನ್ಯರನ್ನು ಹಹಾಗೂ ಭಕ್ತರನ್ನು ಮುಖ್ಯ ದ್ವಾರ ತೆರೆಯುವ ಕಾರ್ಯಕ್ರಮದ ವೇಳೆ ದೂರವಿಡಲಾಗಿದೆ. ಸದ್ಯ ಚಾರ್‌ ಧಾಮ್ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ. ದೇಗುಲದ ಅರ್ಚಕ ತಮ್ಮ ನಿತ್ಯ ಪೂಜೆಯನ್ನು ಸಲ್ಲಿಸುವ ನಿಟ್ಟಿನಲ್ಲಿ ಸದ್ಯ ಈ ಮುಖ್ಯ ದ್ವಾರವನ್ನು ತೆರೆಯಲಾಗಿದೆ. 

"