Asianet Suvarna News Asianet Suvarna News

'2ಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರ್ಕಾರಿ ಸೌಲಭ್ಯವಿಲ್ಲ' ಯುಪಿಯಲ್ಲಿ ಹೊಸ ಕಾನೂನು!

* ಎರಡಕ್ಕಿಂತ ಹೆಚ್ಚಿನ ಮಕ್ಕಳನ್ನು ಹೊಂದಿದ್ದರೆ ಸರ್ಕಾರಿ ಸೌಲಭ್ಯ ಇಲ್ಲ
* ಜನಸಂಖ್ಯಾ ನಿಯಂತ್ರಣಕ್ಕೆ ಉತ್ತರ ಪ್ರದೇಶ ಸರ್ಕಾರದ ಯೋಜನೆ
* ಯೋಜನೆ ಕರಡು ತಯಾರಿಕೆಗೆ ಸೂಚನೆ
* ಹಿಂದೆ ಸರಿಯುವ ಮಾತೇ ಇಲ್ಲ ಎಂದ ಮಿತ್ತಲ್

Population control Uttar Pradesh working on law to limit sops to those with 2 children or less mah
Author
Bengaluru, First Published Jun 21, 2021, 7:45 PM IST

ಲಕ್ನೋ(ಜೂ.  21)  ಜನಸಂಖ್ಯಾ ನಿಯಂತ್ರಣಕ್ಕೆ ಸಂಬಂಧಿಸಿ ಉತ್ತರ ಪ್ರದೇಶ ಸರ್ಕಾರ ದಿಟ್ಟ ತೀರ್ಮಾನವೊಂದನ್ನು ಕೈಗೊಳ್ಳಲು ಮುಂದಾಗಿದೆ.  ರಾಜ್ಯ ಸರ್ಕಾರದ ಸೌಲಭ್ಯಗಳು ಎರಡು ಅಥವಾ ಅದಕ್ಕಿಂತ ಕಡಿಮೆ ಮಕ್ಕಳನ್ನುನ ಹೊಂದಿರುವವರಿಗೆ ಮಾತ್ರ ಸಿಗಬೇಕು ಎಂಬ ನಿಯಮ ಸಿದ್ಧಮಾಡಲು ಕೆಲಸ ಆರಂಭಿಸಿದೆ. ದೇಶದ ಲೆಕ್ಕದಲ್ಲಿ ಹೇಳುವುದಾದರೆ ಉತ್ತರ ಪ್ರದೇಶ ಜನಸಂಖ್ಯೆಯಲ್ಲಿ ಮೊದಲ ಸ್ಥಾನ.

ಮಾಧ್ಯಮದೊಂದಿಗೆ ಮಾತನಾಡಿದ ಉತ್ತರ ಪ್ರದೇಶ ಕಾನೂನು ಆಯೋಗದ ಎಎನ್ ಮಿತ್ತಲ್,  ಸರಿಯಾದ ಪ್ರಸ್ತಾವನೆ ಇನ್ನು ಎರಡು ತಿಂಗಳಿನಲ್ಲಿ ಸಿದ್ಧವಾಗಲಿದೆ. ಸಾರ್ವಜನಿಕ ಅಭಿಪ್ರಾಯವನ್ನು ಪಡೆದುಕೊಳ್ಳಲಾಗುವುದು. ಪಡಿತರ, ರಾಜ್ಯ ಸರ್ಕಾರದ ಇಲಾಖೆಗಳಲ್ಲಿ ಉದ್ಯೋಗ ಜತೆಗೆ ರಾಜ್ಯದ ಇನ್ನುಳಿದ ಕಲ್ಯಾಣ ಯೋಜನೆಗಳನ್ನು ಸೀಮಿತ ಮಾಡುವ ಇರಾದೆ  ಇದೆ ಎಂದು ತಿಳಿಸಿದ್ದಾರೆ.

ಯೋಗಿ ಬದಲಾವಣೆ ಬಗ್ಗೆ ಸುದ್ದಿ ಹುಟ್ಟಿಕೊಳ್ಳಲು ಮೂಲ ಏನು? 

ಕಾನೂನು ಅನುಷ್ಠಾನಕ್ಕೆ ಅಂತಿಮ ದಿನಾಂಕವನ್ನು ನಿರ್ಧರಿಸಲಾಗುತ್ತದೆ. ಇದರ ಬಗ್ಗೆ ಮರುಪರಿಶೀಲನೆ ಮಾತಿಲ್ಲ. ಆದರೆ ಹೇಗೆ ಜಾರಿ ಮಾಡಬೇಕು ಎಂಬುದನ್ನು ಚರ್ಚೆ ಮಾಡಲಾಗುತ್ತಿದೆ.  ಈಗಾಗಲೇ ಗರ್ಭಿಣಿಯಾಗಿದ್ದವರಿಗೆ ಹೊಟ್ಟೆಯಲ್ಲಿ ಇರುವ ಮಗು ಲೆಕ್ಕಕ್ಕೆ ಸೇರಿಕೊಳ್ಳುತ್ತವೆ ಎಂದು ತಿಳಿಸಿದರು.

ಎರಡಕ್ಕಿಂತ ಜಾಸ್ತಿ ಮಕ್ಕಳನ್ನು ಹೊಂದುವುದು ಶಿಕ್ಷಾರ್ಹ ಅಪರಾಧವಲ್ಲ. ಆದರೆ ಮಕ್ಕಳನ್ನು ಹೆಚ್ಚು ಪಡೆಯುವ ಕುಟುಂಬ ಸರ್ಕಾರದ ಯೋಜನೆಗಳನ್ನು ತ್ಯಾಗ ಮಾಡಬೇಕಾಗುತ್ತದೆ. ಚೀನಾ ಮತ್ತು ಕೆನಡಾ ಸಹ  ಇಂಥ ಯೋಚನೆಯನ್ನು ಮಾಡಿದ್ದವು ಎಂದು ತಿಳಿಸಿದ್ದಾರೆ.

ಕಾನೂನುಬಾಹಿರ ಮತಾಂತರ ನಿಷೇಧ ಕಾಯ್ದೆ ಈಗಾಗಲೇ ಉತ್ತರ ಪ್ರದೇಶದಲ್ಲಿ ಜಾರಿಯಾಗಿದೆ.  ಎರಡಕ್ಕಿಂತ ಹೆಚ್ಚಿನ ಮಕ್ಕಳು ಇದ್ದರೆ ಅವರು ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತೆ ಇಲ್ಲ.  ಮೂಲನಿವಾಸಿಗಳ ಮೇಲೆ ದೌರ್ಜನ್ಯ ನಡೆಯುತ್ತಿರುವ ಪ್ರಕರಣಗಳು ಕಂಡುಬಂದಿದ್ದು ಈಗಾಗಲೇ ಇರುವ ಕಾನೂನುಗಳನ್ನು ಇನ್ನಷ್ಟು ಬಿಗಿ ಮಾಡಲಾಗುವುದು ಎಂದು ತಿಳಿಸಿದರು.

Follow Us:
Download App:
  • android
  • ios