ಪೂಂಚ್ ಅಟ್ಯಾಕ್ ಹೊಣೆ ಹೊತ್ತ ಜೈಷ್ ಸಹವರ್ತಿ ಸಂಘಟನೆ: ಸೈನಿಕರ ಮೇಲಿನ ದಾಳಿ ವಿಡಿಯೋ ಮಾಡಿದ್ದ ಉಗ್ರರು!
ವಿಡಿಯೋದಲ್ಲಿನ ದೃಶ್ಯಗಳನ್ನು ಸ್ಕ್ರೀನ್ ಗ್ರಾಬ್ ಮಾಡಿರುವ ಉಗ್ರರು, ಫೋಟೋಗಳನ್ನು ಮಂಗಳವಾರವೇ ಬಿಡುಗಡೆ ಮಾಡಿದ್ದಾರೆ. ಒಂದು ಚಿತ್ರದಲ್ಲಿ ಉಗ್ರನೊಬ್ಬ ಬಂದೂಕು ಹಿಡಿದ ಕೈ ಕಾಣುತ್ತದೆ.
ಪೂಂಚ್ (ಏಪ್ರಿಲ್ 26, 2023): ಇತ್ತೀಚೆಗೆ ಐವರು ಸೈನಿಕರನ್ನು ಬಲಿ ಪಡೆದ ಜಮ್ಮು - ಕಾಶ್ಮೀರದ ಪೂಂಚ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿಯ ಹೊಣೆಯನ್ನು ಜೈಷ್ ಎ ಮೊಹಮ್ಮದ್‌ನ ಸಹವರ್ತಿ ಸಂಘಟನೆ ಪೀಪಲ್ಸ್ ಫ್ಯಾಸಿಸ್ಟ್ ಫ್ರಂಟ್ (ಪಿಎಎಫ್‌ಎಫ್) ಹೊತ್ತಿದೆ. ಅಲ್ಲದೆ, ದಾಳಿ ಮಾಡಿದ ದೃಶ್ಯವನ್ನು ಉಗ್ರರು ಬಾಡಿ ಕ್ಯಾಮರಾ ಮೂಲಕ ಚಿತ್ರೀಕರಿಸಿದ್ದು, ವಿಡಿಯೋವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.
ವಿಡಿಯೋದಲ್ಲಿನ ದೃಶ್ಯಗಳನ್ನು ಸ್ಕ್ರೀನ್ ಗ್ರಾಬ್ ಮಾಡಿರುವ ಉಗ್ರರು, ಫೋಟೋಗಳನ್ನು ಮಂಗಳವಾರವೇ ಬಿಡುಗಡೆ ಮಾಡಿದ್ದಾರೆ. ಒಂದು ಚಿತ್ರದಲ್ಲಿ ಉಗ್ರನೊಬ್ಬ ಬಂದೂಕು ಹಿಡಿದ ಕೈ ಕಾಣುತ್ತದೆ.
ಇದನ್ನು ಓದಿ: ಪೂಂಚ್ ದಾಳಿಗೆ ಸ್ಟಿಕ್ಕಿ ಬಾಂಬ್, ಚೀನಾ ನಿರ್ಮಿತ ಉಕ್ಕಿನ ಗುಂಡು ಬಳಕೆ: ಉಗ್ರರ ಶೋಧಕ್ಕೆ 2,000 ಕಮಾಂಡೋ ನಿಯೋಜನೆ
ಇನ್ನೊಂದು ಚಿತ್ರದಲ್ಲಿ ಉಗ್ರರು ಗುರಿಯಾಗಿಸಿದ ವಾಹನ ಕಂಡುಬರುತ್ತದೆ. ಚಿತ್ರಗಳ ಮೇಲೆ ‘ಬ್ರೈಟ್ ಡೇ - ಸ್ಟ್ರೈ ಕಿಂಗ್ ದ ಪ್ರೇ’ (ಪ್ರಕಾಶಮಾನವಾದ ದಿನ - ಬೇಟೆಗಾಗಿ ಕಾಯುತ್ತಿದ್ದೇವೆ) ಹಾಗೂ ‘ದೇರ್ ಇಟ್ ಇಸ್’ (ದಾಳಿಗೊಳಗಾಗುವ ವಾಹನ) ಎಂದು ಬರೆದಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಪಿಎಎಫ್‌ಎಫ್, ದಾಳಿಯ ವಿಡಿಯೋವನ್ನೂ ಶೀಘ್ರ ಬಿಡುಗಡೆ ಮಾಡುತ್ತೇವೆ ಎಂದಿದೆ.
50 ಜನರ ವಿಚಾರಣೆ:
ಇದೇ ವೇಳೆ, ಈ ದಾಳಿಯ ಐದನೇ ದಿನ ತನಿಖೆ ಮುಂದುವರಿಸಿರುವ ಎನ್‌ಐಎ ಹಾಗೂ ಎನ್‌ಎಸ್‌ಜಿ, ಈವರೆಗೂ 14 ಮಂದಿ ಸ್ಥಳೀಯ ಕಾರ್ಮಿಕರು ಸೇರಿ 50 ಜನರನ್ನು ವಿಚಾರಣೆ ನಡೆಸಿವೆ. ಅದರಲ್ಲಿ ಕೆಲವರನ್ನು ವಿಚಾರಣೆ ನಂತರ ಬಿಡುಗಡೆ ಮಾಡಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿದೆ. ಎನ್‌ಎಸ್‌ಜಿ ಪಡೆಗಳು ಉಗ್ರರಿಗೆ ದಟ್ಟ ಅರಣ್ಯಗಳಲ್ಲಿ ಶೋಧ ಮುಂದುವರಿಸಿವೆ.
ಈ ದಾಳಿ ವೇಳೆ ಉಗ್ರರು ರಸ್ತೆ ಬದಿಯ ಕಣಿವೆ ಪೊಟರೆಗಳಲ್ಲಿ ಅವಿತುಕೊಂಡು ದಾಳಿ ನಡೆಸಿರಬಹುದು. ಇಲ್ಲದೇ ಐಇಡಿ ಮೂಲಕ ಸ್ಫೋಟ ಮಾಡಿರಬಹುದು ಎಂದು ತನಿಖಾ ದಳಗಳು ಶಂಕೆ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಜಿ20 ಶೃಂಗಸಭೆಗೆ ಭೀತಿ ಸೃಷ್ಟಿಗೆ ಪೂಂಚ್‌ನಲ್ಲಿ ಉಗ್ರ ದಾಳಿ? ಪಾಕ್ ಕೈವಾಡ ಶಂಕೆ
ಭಾರಿ ಕಾರ್ಯಾಚರಣೆ:
ದಾಳಿ ನಡೆಸಿ ಪರಾರಿಯಾಗಿರುವ ಉಗ್ರರು ಸಮೀಪದ ಅರಣ್ಯ ಅಥವಾ ಕಂದಕ ಪ್ರದೇಶದಲ್ಲಿ ಆಡಗಿರುವ ಶಂಕೆ ಇದೆ. ಈ ಹಿನ್ನೆಲೆಯಲ್ಲಿ ಡ್ರೋನ್, ಶ್ವಾನಗಳನ್ನು ಬಳಸಿ ಬೃಹತ್ ಕಾರ್ಯಾಚರಣೆ ಆರಂಭಿಸಲಾಗಿದೆ.
ಸ್ಫೋಟದ ಹಿಂದೆ 7 ಲಷ್ಕರ್ ಉಗ್ರರ ಕೃತ್ಯ?
ಗುರುವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ ಲಷ್ಕರ್ ಎ ತೊಯ್ಬಾ ಸಂಘಟನೆಯ ಕನಿಷ್ಠ 7 ಉಗ್ರರು ಭಾಗಿಯಾಗಿರುವ ಸಾಧ್ಯತೆ ಇದೆ ಎಂದು ತನಿಖಾಧಿಕಾರಿಗಳು ಈ ಹಿಂದೆ ತಿಳಿಸಿದ್ದರು. ದಾಳಿ ನಡೆದಿರುವ ಸ್ಥಳ ಗಡಿ ನಿಯಂತ್ರಣ ರೇಖೆಯಲ್ಲಿನ ಭೀಮ್‌ಬೇರ್ ಗಾಲಿಯಿಂದ 7 ಕಿ.ಮೀ. ದೂರದಲ್ಲಿರುವ ದಟ್ಟಾರಣ್ಯದಲ್ಲಿ ನಡೆದಿದೆ. ಜಿಹಾದಿಗಳು ಅರಣ್ಯದಲ್ಲಿ ಅಡಗಿ ಕುಳಿತು ರಾಷ್ಟ್ರೀಯ ರೈಫಲ್ಸ್‌ನ ವಾಹನ ಬರುತ್ತಿದ್ದಂತೆ ಎರಗಿದ್ದಾರೆ. ದಾಳಿಗೆ ರಾಕೆಟ್ ಪ್ರೊಪೆಲ್ಡ್ ಗ್ರೆನೇಡ್‌ಗಳು ಹಾಗೂ ರೈಫಲ್‌ಗಳನ್ನು ಬಳಸಲಾಗಿದೆ. ಮೂರು ಬದಿಯಿಂದ ಈ ದಾಳಿಯನ್ನು ನಡೆಸಲಾಗಿದೆ. ಗ್ರೆನೇಡ್‌ನಿಂದಾಗಿ ಯೋಧರಿದ್ದ ವಾಹನಕ್ಕೆ ಬೆಂಕಿ ಹೊತ್ತಿಕೊಂಡಿತೋ ಅಥವಾ ದಾಳಿ ಬಳಿಕ ಉಗ್ರರೇ ಬೆಂಕಿ ಹಚ್ಚಿದರೋ ಎಂಬುದು ತಿಳಿದುಬಂದಿಲ್ಲ.
ಇದನ್ನೂ ಓದಿ: ಚೀನಾ, ಪಾಕ್‌ನಿಂದ ತರಬೇತಿ ಪಡೆದ ಡೇಂಜರಸ್ ವ್ಯಕ್ತಿ ದೇಶಕ್ಕೆ ಎಂಟ್ರಿ; ಮುಂಬೈನಲ್ಲಿ ಉಗ್ರ ದಾಳಿ ಸಂಭವ: NIA ಎಚ್ಚರಿಕೆ
ಸ್ಟಿಕ್ಕಿ ಬಾಂಬ್: ಈ ನಡುವೆ ಗ್ರೆನೇಡ್ ಜೊತೆಗೆ ಸ್ಟಿಕ್ಕಿ ಬಾಂಬ್ ಹಚ್ಚಿ ಸ್ಫೋಟ ನಡೆಸಿರುವ ಸಾಧ್ಯತೆಯೂ ಇದೆ. ಈ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ: ಮತ್ತೊಂದು ಕಾಶ್ಮೀರ್ ಫೈಲ್ಸ್..? ಹಿಂದೂಗಳನ್ನು ಗುರಿಯಾಗಿಸಿ ಉಗ್ರರಿಂದ ಗುಂಡಿನ ದಾಳಿ..!