Asianet Suvarna News Asianet Suvarna News

ಆಯೋಧ್ಯೆಯಲ್ಲಿ SFJ ಉಗ್ರ ಸಂಘಟನೆಯ ಮೂವರು ಅರೆಸ್ಟ್, ಹೈ ಅಲರ್ಟ್ ಘೋಷಣೆ!

ಆಯೋಧ್ಯೆ ರಾಮ ಮಂದಿರದಿಂದ ಉರಿದು ಬಿದ್ದಿರುವ ಉಗ್ರ ಸಂಘಟನೆಗಳು ವಿಧ್ವಂಸಕ ಕೃತ್ಯಕ್ಕೆ ಪ್ಲಾನ್ ಮಾಡುತ್ತಿದ್ದಾರೆ. ಆಯೋಧ್ಯೆಗೆ ನುಸುಳಿದ ಖಲಿಸ್ತಾನಿ ಉಗ್ರ ಸಂಘಟನೆ SFJ ಮೂವರು ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ. ಇದರ ಪರಿಣಾಮ ಆಯೋಧ್ಯೆಯಲ್ಲಿ ಹೈ ಅಲರ್ಟ್ ಘೋಷಿಸಿದ್ದಾರೆ. 
 

Police issues High Alert after Arrest 3 from Pro Khalistani SFJ wing in Ayodhya ckm
Author
First Published Jan 23, 2024, 4:37 PM IST

ಆಯೋಧ್ಯೆ(ಜ.23) ಆಯೋಧ್ಯೆಯಲ್ಲಿ ರಾಮ ಮಂದಿರ ಲೋಕಾಲಪರ್ಣೆಯಾಗಿದೆ. ಭಗವಾನ್ ಶ್ರೀ ರಾಮಲಲ್ಲಾ ಪ್ರಾಣಪ್ರತಿಷ್ಠೆಯಾಗಿದೆ. ಇಂದಿನಿಂದ ಭವ್ಯ ಶ್ರೀರಾಮ ಮಂದಿರ ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾಗಿದೆ. ಲಕ್ಷಾಂತರ ಭಕ್ತರು ಆಯೋಧ್ಯೆಗೆ ಧಾವಿಸುತ್ತಿದ್ದಾರೆ. ಇದರ ನಡುವೆ ಉಗ್ರರು ನಸುಳುವ ಪ್ರಯತ್ನ ಮಾಡಿದ್ದಾರೆ. ಪ್ರೊ ಖಲಿಸ್ತಾನ್ ಚಳುವಳಿಯ SFJ ಉಗ್ರ ಸಂಘಟನೆಯ ಮೂವರು ಸದಸ್ಯರನ್ನು ಆಯೋಧ್ಯೆ ಪೊಲೀಸರು ಬಂಧಿಸಿದ್ದಾರೆ. ಈ ಬಂಧನದ ಬೆನ್ನಲ್ಲೇ ಆಯೋಧ್ಯೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಆಯೋಧ್ಯೆಗೆ ಪ್ರವೇಶಿಸುವ ಎಲ್ಲಾ ರಸ್ತೆಗಳಲ್ಲಿ ಪೊಲೀಸ್ ನಾಕಾಬಂಧಿ ಹಾಕಲಾಗಿದೆ. ಎಲ್ಲಾ ವಾಹನಗಳನ್ನು ಪೊಲೀಸರು ತಪಾಸವಣೆ ಮಾಡುತ್ತಿದ್ದಾರೆ.

ಜನವರಿ 26ರ ವರೆಗೆ ಆಯೋಧ್ಯೆಯಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದೆ. ಹಲವು ಸ್ತರದ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಹೆಚ್ಚುವರಿ ಪೊಲೀಸ್ ಚೆಕ್‌ಪೋಸ್ಟ್ ಹಾಕಲಾಗಿದೆ. ಆಯೋಧ್ಯೆ ಸುತ್ತ ಹೆಚ್ಚುವರಿ ಪೊಲೀಸ್ ಭದ್ರತೆ ಮುಂದುವರಿಸಲಾಗಿದೆ. ಪ್ರಾಣಪ್ರತಿಷ್ಠೆ ಹಿನ್ನಲೆಯಲ್ಲಿ ದೇಶ ವಿದೇಶಗಳ ಗಣ್ಯರು ಆಯೋಧ್ಯೆಗೆ ಆಗಮಿಸಿದ್ದರು. ಹೀಗಾಗಿ ಭಾರಿ ಭದ್ರತೆ ಕೈಗೊಳ್ಳಲಾಗಿತ್ತು. ಇದೀಗ ಉಗ್ರ ಸಂಘಟನೆಯ ಮೂವರ ಬಂಧನದಿಂದ ಅಯೋಧ್ಯೆಯಲ್ಲಿ ಭದ್ರತೆ ಮುಂದುವರಿಸಲಾಗಿದೆ. 

 

ಟೆಂಟ್ ಅಲ್ಲ, ಭವ್ಯ ಮಂದಿರದಲ್ಲಿ ಶ್ರೀರಾಮನ ದರ್ಶನ, ಮಂದಿರ ಲೋಕಾರ್ಪಣೆಗೊಳಿಸಿ ಮೋದಿ ಭಾಷಣ!

ಆಯೋಧ್ಯೆ ರಾಮ ಮಂದಿರದ ಭದ್ರತಾ ಜವಾಬ್ದಾರಿ ವಹಿಸಿಕೊಂಡಿರುವ ಲಾ ಅ್ಯಂಡ್ ಆರ್ಡರ್ ಡಿಜಿ ಪ್ರಶಾಂತ್ ಕುಮಾರ್ ಹಾಗೂ ಎಡಿಜಿ ಪಿಯುಷ್ ಮೊರ್ದಿಯಾ ಈ ಕುರಿತು ಪ್ರತಿಕ್ಕಿಯೆ ನೀಡಿದ್ದಾರೆ. ದೇವಸ್ಥಾನಕ್ಕೆ ಆಗಮಿಸುವ ಭಕ್ತರು ಪೊಲೀಸರ ತಪಾಸಣೆಗೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ. ಇದೇ ವೇಳೆ ಆಯೋಧ್ಯೆಗೆ ಆಗಮಿಸುವ ವೇಳೆ ಕೆಲ ಹೊತ್ತು ಪೊಲೀಸ್ ಚೆಕ್‌ಪೋಸ್ಟ್‌ನಲ್ಲಿ ಸಮಯ ಹಿಡಿಯಲಿದೆ. ಎಲ್ಲಾ ಭಕ್ತರಿಗೆ ಗರಿಷ್ಠ ಮಟ್ಟದ ಭದ್ರತ ಒದಗಿಸುತ್ತೇವೆ. ನಿರಾಂತಕವಾಗಿ ಶ್ರೀರಾಮನದರ್ಶನ ಪಡೆಯಲು ಎಲ್ಲಾ ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ರಾಮ ಮಂದಿರ ಪ್ರಾಣಪ್ರತಿಷ್ಠೆಗೆ ಬರೋಬ್ಬರಿ 13,000 ಪೊಲೀಸ್ ನಿಯೋಜಿಸಲಾಗಿತ್ತು. ರಾಮಜನ್ಮಭೂಮಿ ಆವರಣ, ಆಯೋಧ್ಯೆ ಸೇರಿದಂತೆ 10,000 ಸಿಸಿಟಿವಿ ಅಳವಡಿಸಲಾಗಿತ್ತು. ಇದೀಗ ಅದೆ ರೀತಿಯ ಭದ್ರತೆಯನ್ನು ಮುಂದುವರಿಸಲಾಗಿದೆ.   

 

ಮಂದಿರ್ ವಹೀ ಬನಾಯೇಂಗೆ, 33 ವರ್ಷಗಳ ಬಿಜೆಪಿ ಭರವಸೆ ಈಡೇರಿಸಿದ ಪ್ರಧಾನಿ ಮೋದಿ!

Follow Us:
Download App:
  • android
  • ios