ಕಾಂಗ್ರೆಸ್ ಕಾರ್ಯಕರ್ತರು ಹಾರಿಬಿಟ್ಟ ಬಲೂನ್ ಮೋದಿ ವಿರುದ್ಧ ಪ್ರತಿಭಟನೆ ವೇಳೆ ಹಾರಿಬಿಟ್ಟ ಬಲೂನ್ ಬಲೂನ್ ಹಾರಿಸಿದ ಪ್ರತಿಭಟನಾಕಾರರ ವಶಕ್ಕೆ ಪಡೆದ ಪೋಲಿಸ್
ವಿಜಯವಾಡ(ಜು.04): ಪ್ರಧಾನಿ ನರೇಂದ್ರ ಮೋದಿ ಭದ್ರತೆಯಲ್ಲಿ ಎರಡನೇ ಭಾರಿಗೆ ಲೋಪವಾಗಿದೆ. ಪಂಜಾಬ್‌ನಲ್ಲಿ ಭದ್ರತಾ ಲೋಪದ ಬಳಿಕ ಇದೀಗ ಆಂಧ್ರಪ್ರದೇಶದ ವಿಜಯವಾಡದಲ್ಲಿ ಇದೇ ರೀತಿ ಘಟನೆ ನಡೆದಿದೆ. ಪ್ರಧಾನಿ ಮೋದಿಯ ಹೆಲಿಕಾಪ್ಟರ್ ಸನಿಹದಲ್ಲಿ ಪ್ರತಿಭಟನಕಾರರ ಬಲೂನ್ ಹಾರಿ ಬಂದಿದೆ. ಈ ಮೂಲಕ ಆತಂಕದ ವಾತವಾರಣ ನಿರ್ಮಾಣವಾಗಿತ್ತು. ಇದು ಪ್ರಧಾನಿ ಮೋದಿ ಭದ್ರತೆ ವಿಚಾರದಲ್ಲಿ ನಡೆದ ಅತೀ ದೊಡ್ಡ ಲೋಪ ಎಂದು ಹೇಳಲಾಗುತ್ತಿದೆ.
ಮೋದಿ ಕಾರ್ಯಕ್ರಮದ ಹೊರಭಾಗದಲ್ಲಿ ಹಾಗೂ ಮೋದಿ ಹೆಲಿಕಾಪ್ಟರ್ ಮೂಲಕ ತೆರಳು ಮಾರ್ಗದಲ್ಲಿ ಪ್ರತಿಭಟನೆ ವೇಳೆ ಬಲೂನ್ ಹಾರಿಬಿಟ್ಟ ಭದ್ರತಾ ಲೋಪವೆಸಗಿದ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮುಂದಿನ 30 ರಿಂದ 40 ವರ್ಷ ಬಿಜೆಪಿ ಯುಗ, ಅಮಿತ್ ಶಾ ವಿಶ್ವಾಸ!
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಭಾರಿ ಪ್ರತಿಭಟನೆ ನಡೆಸಿದೆ. ಪ್ರತಿಭಟನೆ ವೇಳೆ ಕಪ್ಪು ಬಲೂನ್‌ಗಳನ್ನ ಹಾರಿ ಬಿಡಲಾಗಿದೆ.ಮೋದಿ ಕಾರ್ಯಕ್ರಮದ ಹೊರಭಾಗದಲ್ಲಿ ಈ ಬಲೂನ್‌ಗಳನ್ನು ಹಾರಿ ಬಿಡಲಾಗಿದೆ. ಹಾರಿಬಿಟ್ಟ ದೊಡ್ಡ ಗಾತ್ರದ ಬಲೂನ್‌ಗಳು ಆಗಸದಲ್ಲಿ ತೇಲಾಡಿದೆ. ಇತ್ತ ಕಾರ್ಯಕ್ರಮದ ಮುಗಿಸಿ ಮೋದಿ ಹೆಲಿಕಾಪ್ಟರ್ ಏರಿ ಪ್ರಯಾಣ ಆರಂಭಿಸಿದರು. ಹೆಲಿಕಾಪ್ಟರ್ ಟೇಕ್ ಆಫ್ ಆಗಿ ಮೇಲಕ್ಕೆ ಹಾರುತ್ತಿದ್ದಂತೆ ಪ್ರತಿಭಟನಾಕಾರರ ಬಲೂನ್ ಅಡ್ಡಬಂದಿದೆ. ಆದರೆ ಪೈಲೈಟ್ ಸಮಯಪ್ರಜ್ಞೆಯಿಂದ ಬಹುದೊಡ್ಡ ಅಪಾಯ ತಪ್ಪಿದೆ.
ಇದು ಪ್ರಧಾನಿ ನರೇಂದ್ರ ಮೋದಿ ಭದ್ರತೆಯಲ್ಲಿ ನಡೆದ ಎರಡನೇ ಲೋಪವಾಗಿದೆ. ಮೋದಿ ಸಂಚರಿಸುವ ವಾಯು ಮಾರ್ಗದಲ್ಲಿ ಯಾವುದೇ ಅಡೇ ಇರದಂತೆ ನೋಡಿಕೊಳ್ಳಲಾಗುತ್ತದೆ. ಮೋದಿ ಪ್ರಯಾಣಕ್ಕೂ ಮುನ್ನ ಹಮಾಮಾನ ಕೂಡ ಪರಿಶೀಲನೆ ನಡೆಯಲಾಗುತ್ತದೆ. ಆದರೆ ಈ ಎಲ್ಲಾ ನಿಯಮಗಳ ಮೀರಿ ಬಲೂನ್‌ಗಗಳು ಮೋದಿ ಹೆಲಿಕಾಪ್ಟರ್ ಸನಿದಲ್ಲಿ ಹಾರಿದೆ.
ಹುಲಿ ಬರುತ್ತಿದ್ದಂತೆಯೇ ನರಿಗಳು ಓಡಿ ಹೋಗ್ತವೆ: ಮೋದಿ ಸ್ವಾಗತಿಸದ ಕೆಸಿಆರ್‌ಗೆ ಬಿಜೆಪಿ ಲೇವಡಿ!
ಪಂಜಾಬ್ ಭೇಟಿಯಲ್ಲಿ ನಡೆದಿತ್ತು ಭದ್ರತಾ ಲೋಪ
ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪಂಜಾಬ್‌ಗೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ರೈತರ ತಂಡವೊಂದು ಫ್ಲೈಓವರ್‌ವೊಂದರ ಮೇಲೆ ತಡೆಗಟ್ಟಿದ ಆತಂಕಕಾರಿ ಘಟನೆ ಬುಧವಾರ ನಡೆದಿದೆ. ಪರಿಣಾಮ, ಅತ್ಯಂತ ಬಿಗಿಭದ್ರತೆ ವ್ಯವಸ್ಥೆ ಹೊಂದಿರುವ ಪ್ರಧಾನಿ, ಫ್ಲೈಓವರ್ ಮೇಲೇ 20 ನಿಮಿಷಗಳನ್ನು ಅತಂತ್ರರಾಗಿ ಕಳೆದಿದ್ದಾರೆ. ಇದು ಪ್ರಧಾನಿಯಂತಹ ಅತಿಗಣ್ಯರ ವಿಷಯದಲ್ಲಿ ಕಂಡು ಕೇಳರಿಯದ ಭದ್ರತಾ ಲೋಪ ಎನ್ನಿಸಿಕೊಂಡಿದೆ.
ಇದರ ಬೆನ್ನಲ್ಲೇ ಮೋದಿ ಅವರು ತಮ್ಮ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ದೆಹಲಿಗೆ ಮರಳಿದ್ದಾರೆ. ಘಟನೆಯನ್ನು ಅತ್ಯಂತ ಗಂಭೀರ ಎಂದಿರುವ ಕೇಂದ್ರ ಗೃಹ ಸಚಿವಾಲಯ, ಈ ಕುರಿತು ಪಂಜಾಬ್ ಸರ್ಕಾರದಿಂದ ವಿಸ್ತೃತ ವರದಿ ಕೇಳಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ತಾಕೀತು ಮಾಡಿದೆ. ಈ ನಡುವೆ, ಭಾರತೀಯ ಕಿಸಾನ್ ಯೂನಿಯನ್ (ಕ್ರಾಂತಿಕಾರಿ) ಎಂಬ ಸಂಘಟನೆ ಈ ಘಟನೆಯ ಹೊಣೆ ಹೊತ್ತಿದೆ.
ಈ ನಡುವೆ, ಪ್ರಧಾನಿಗೆ ಸೂಕ್ತ ಭದ್ರತೆ ಕಲ್ಪಿಸುವಲ್ಲಿ ವಿಫಲವಾದ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಆದರೆ, ‘ಕೊನೆಯ ಕ್ಷಣದಲ್ಲಿ ಪ್ರಧಾನಿ ಸಂಚಾರವು ವಾಯು ಮಾರ್ಗದಿಂದ ರಸ್ತೆ ಮಾರ್ಗಕ್ಕೆ ಬದಲಾಯಿತು. ಆದರೂ ಪ್ರಧಾನಿಗಳ ಭದ್ರತೆಯಲ್ಲಿ ಲೋಪವಾಗಿಲ್ಲ. ಪ್ರತಿಭಟನಾಕಾರರು ಧರಣಿ ಕುಳಿತಿದ್ದ ಸ್ಥಳಕ್ಕಿಂತ ದೂರವೇ ಪ್ರಧಾನಿ ಬೆಂಗಾವಲು ವಾಹನ ನಿಲ್ಲಿಸಲಾಗಿತ್ತು’ ಎಂದು ಚನ್ನಿ ಸ್ಪಷ್ಟನೆ ನೀಡಿದ್ದಾರೆ.
