ದೆಹಲಿ(ಮೇ.14): ಪ್ರಧಾನಿ ನರೇಂದ್ರ ಮೋದಿ ಬಸವಜಯಂತಿ ದಿನ ಶುಭಾಶಯಗಳನ್ನು ತಿಳಿಸಿದ್ದಾರೆ. ಟ್ವಿಟರ್‌ನಲ್ಲಿ ಶುಭಕೋರಿದ ಪ್ರಧಾನಿ ಮೋದಿ ಬಸವೇಶ್ವರಗೆ ನಮಿಸುತ್ತೇನೆ ಎಂದಿದ್ದಾರೆ.

ಬಸವ ಜಯಂತಿ ಅವರ ವಿಶೇಷ ಸಂದರ್ಭದಲ್ಲಿ ನಾನು ಜಗದ್ಗುರು ಬಸವೇಶ್ವರನಿಗೆ ನಮಸ್ಕರಿಸುತ್ತೇನೆ. ಅವರ ಉದಾತ್ತ ಬೋಧನೆಗಳು, ವಿಶೇಷವಾಗಿ ಸಾಮಾಜಿಕ ಸಬಲೀಕರಣ, ಸಾಮರಸ್ಯ, ಸಹೋದರತ್ವ ಮತ್ತು ಸಹಾನುಭೂತಿಗೆ ಒತ್ತು ನೀಡುವುದು ಹಲವಾರು ಜನರಿಗೆ ಸ್ಫೂರ್ತಿ ನೀಡುತ್ತಿದೆ ಎಂದು ಮೋದಿ ಟ್ವೀಟಿಸಿದ್ದಾರೆ.

ಕೊರೋನಾ ಒಂದು ಜೀವಿ, ನಮ್ಮಂತೆ ಅದಕ್ಕೂ ಬದುಕೋ ಹಕ್ಕಿದೆ: ಮಾಜಿ ಸಿಎಂ ಎಡವಟ್ಟು ಹೇಳಿಕೆ

ಸದ್ಯ ಪ್ರಧಾನಿ ಮೋದಿ ಕೊರೋನಾ ನಿರ್ವಹಣೆಗೆ ಸಂಬಂಧಿಸಿ ತೀವ್ರ ಟೀಕೆಯನ್ನು ಎದುರಿಸುತ್ತಿದ್ದಾರೆ. ಅದೇ ರೀತಿ ವಿಸ್ಟಾ ಪ್ರಾಜೆಕ್ಟ್‌ಗೆ ಸಂಬಂಧಿಸಿಯೂ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಹೆಚ್ಚಾಗಿದೆ.