ಇಷ್ಟೊಂದು ಬಿಗಿಯಾದ ಸಮಯ ಹೊಂದಾಣಿಕೆಯೊಂದಿಗೆ ಪ್ರಯಾಣಿಸಿ, ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಸಾಮಾನ್ಯ ವ್ಯಕ್ತಿಗಳು ಅಷ್ಟೇ ಏಕೆ ಯುವಕರಿಗೂ ಕಷ್ಟ. ಅಂಥದ್ದರಲ್ಲಿ 72ನೇ ವಯಸ್ಸಿನಲ್ಲಿ ಮೋದಿ ಅವರು ತೋರುತ್ತಿರುವ ಈ ಚೈತನ್ಯ ಹಾಗೂ ಉತ್ಸಾಹ ಮತ್ತೊಮ್ಮೆ ನಾಗರಿಕರ ಅಚ್ಚರಿಗೆ ಕಾರಣವಾಗಿದೆ.

ನವದೆಹಲಿ(ಏ.23): ದೇಶ- ವಿದೇಶಗಳ ಪ್ರವಾಸದ ಸಂದರ್ಭದಲ್ಲಿ ಬಿಡುವಿಲ್ಲದೆ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಮೂಲಕ ಈಗಾಗಲೇ ಗಮನಸೆಳೆದಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಂತಹ ಮತ್ತೊಂದು ಕಾರ್ಯಕ್ರಮಕ್ಕೆ ಸಜ್ಜಾಗಿದ್ದಾರೆ. ಮೋದಿ ಅವರು ಸೋಮವಾರದಿಂದ ಎರಡು ದಿನಗಳ ಕಾಲ ಒಟ್ಟು 36 ಗಂಟೆ ಅವಧಿಯಲ್ಲಿ 8 ನಗರಗಳಿಗೆ ತೆರಳಿ 7 ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಎರಡು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಸಲುವಾಗಿ ಒಟ್ಟು 5300 ಕಿ.ಮೀ. ದೂರವನ್ನು ಕ್ರಮಿಸಲಿದ್ದಾರೆ.

ಇಷ್ಟೊಂದು ಬಿಗಿಯಾದ ಸಮಯ ಹೊಂದಾಣಿಕೆಯೊಂದಿಗೆ ಪ್ರಯಾಣಿಸಿ, ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಸಾಮಾನ್ಯ ವ್ಯಕ್ತಿಗಳು ಅಷ್ಟೇ ಏಕೆ ಯುವಕರಿಗೂ ಕಷ್ಟ. ಅಂಥದ್ದರಲ್ಲಿ 72ನೇ ವಯಸ್ಸಿನಲ್ಲಿ ಮೋದಿ ಅವರು ತೋರುತ್ತಿರುವ ಈ ಚೈತನ್ಯ ಹಾಗೂ ಉತ್ಸಾಹ ಮತ್ತೊಮ್ಮೆ ನಾಗರಿಕರ ಅಚ್ಚರಿಗೆ ಕಾರಣವಾಗಿದೆ.

ಮೋದಿ ರಂಗಪ್ರವೇಶ ಮಾಡಿದ್ರೆ ಬಿಜೆಪಿಗೆ 130 ಸ್ಥಾನ ಖಚಿತ: ಬಿ.ಎಲ್‌.ಸಂತೋಷ್‌

ಸೋಮವಾರ ದೆಹಲಿಯಿಂದ ಕೇಂದ್ರ ಭಾರತದಲ್ಲಿರುವ ಮಧ್ಯಪ್ರದೇಶಕ್ಕೆ ತೆರಳಿ, ಅಲ್ಲಿಂದ ದಕ್ಷಿಣ ಭಾರತದಲ್ಲಿರುವ ಕೇರಳಕ್ಕೆ ಭೇಟಿ ನೀಡಿ, ನಂತರ ಪಶ್ಚಿಮ ಭಾರತದ ದಾದ್ರಾ- ನಗರ ಹವೇಲಿ ಮತ್ತು ದಮನ್‌- ದಿಯುನಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಂಗಳವಾರ ದೆಹಲಿಗೆ ವಾಪಸಾಗುವುದು ಮೋದಿ ಅವರ ಒಟ್ಟಾರೆ ಪ್ರವಾಸದ ಸಂಕ್ಷಿಪ್ತ ಚಿತ್ರಣ.

ಯಾವ್ಯಾವ ರಾಜ್ಯ

ಮಧ್ಯಪ್ರದೇಶ, ಕೇರಳ, ಗುಜರಾತ್‌

ಯಾವ್ಯಾವ ನಗರಗಳು

ಖುಜುರಾಹೋ, ರೇವಾ, ಕೊಚ್ಚಿ, ತಿರುವನಂತಪುರ, ಸೂರತ್‌, ಸಿಲ್ವಾಸಾ, ದಮನ್‌, ದೆಹಲಿ