Asianet Suvarna News Asianet Suvarna News

ಕಡಿಮೆ ಲಸಿಕೆ ನೀಡಿಕೆ ಜಿಲ್ಲೆಗಳ ಡಿಸಿ ಜತೆ ಪ್ರಧಾನಿ ನರೇಂದ್ರ ಮೋದಿ  ನೇರ ಮಾತು

* ಕಡಿಮೆ ಲಸಿಕೆ ಸಾಧನೆ ಮಾಡಿರುವ ಜಿಲ್ಲಾಧಿಕಾರಿಗಳ ಜತೆ ಮೋದಿ ಸಂವಾದ
* ವಿದೇಶ ಪ್ರವಾಸದಿಂದ ವಾಪಾಸಾದ ತಕ್ಷಣ ಸಭೆ
*   ಭಾರತದ ಅತಿದೊಡ್ಡ ಲಸಿಕಾ ಅಭಿಯಾನ 
* ಹಿಂದೆ ಉಳಿಯಲು ಕಾರಣವೇನು ಎಂಬುದರ ಮಾಹಿತಿ

PM Narendra Modi to hold review meeting with districts having low vaccination rate mah
Author
Bengaluru, First Published Oct 31, 2021, 9:03 PM IST

ನವದೆಹಲಿ( ಅ. 31) ಜಿ20 (G20)ಶೃಂಗಸಭೆ ಮತ್ತು COP26 ನಲ್ಲಿ ಭಾಗವಹಿಸಿ ಭಾರತಕ್ಕೆ ವಾಪಸ್ಸಾದ ತಕ್ಷಣ, ಪ್ರಧಾನಿ ನರೇಂದ್ರ ಮೋದಿ (Narendra Modi) ನವೆಂಬರ್ 3 ರಂದು ಮಧ್ಯಾಹ್ನ 12 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ  ಕಡಿಮೆ ಲಸಿಕೆ (Vaccine)ವಿತರಣೆಯಾಗಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳ (DC)ಜತೆ ಸಭೆ ನಡೆಸಲಿದ್ದಾರೆ.

ಮೊದಲ ಡೋಸ್‌(Corona Vaccine) ನೀಡಿಕೆಯಲ್ಲಿ ಶೇ. 50 ಕ್ಕಿಂತ ಕಡಿಮೆ ಸಾಧನೆ ಹೊಂದಿದ ಜಿಲ್ಲೆಗಳು ಮತ್ತು ಎರಡನೇ ಡೋಸ್ ಕಡಿಮೆ ನೀಡಿರುವ ಜಿಲ್ಲೆಗಳ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದುಕೊಳ್ಳಲಿದ್ದಾರೆ. 

ಜಾರ್ಖಂಡ್, ಮಣಿಪುರ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಮಹಾರಾಷ್ಟ್ರ, ಮೇಘಾಲಯ ಮತ್ತು ಕಡಿಮೆ ಲಸಿಕೆ ವ್ಯಾಪ್ತಿಯ ಜಿಲ್ಲೆಗಳನ್ನು ಹೊಂದಿರುವ ಇತರ ರಾಜ್ಯಗಳ 40 ಕ್ಕೂ ಹೆಚ್ಚು ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ  ಪ್ರಧಾನಿ ಮಾತನಾಡಲಿದ್ದು ಸಭೆಯಲ್ಲಿ  ಈ ರಾಜ್ಯಗಳ ಮುಖ್ಯಮಂತ್ರಿಗಳು ಉಪಸ್ಥಿತರಿರಲಿದ್ದಾರೆ.

ದೀಪಾವಳಿಗೆ ಕರ್ನಾಟಕ ರಾಜ್ಯದ ಮಾರ್ಗಸೂಚಿ... ಮಹತ್ವದ ಅಂಶಗಳು

ಭಾರತದ ದಾಖಲೆ: ಯಾರೂ ನಿರೀಕ್ಷೆ ಮಾಡಿರದ ರೀತಿ ಭಾರತ ಬಹುದೊಡ್ಡ ಲಸಿಕಾ ಅಭಿಯಾನವನ್ನು ಯಶಸ್ವಿಗೊಳಿಸಿದೆ. ನೂರು ಕೋಟಿ ಜನರಿಗೆ ಲಸಿಕೆ ನೀಡಿದ್ದ ಸಂದರ್ಭ ಪ್ರಧಾನಿ ನರೇಂದ್ರ ಮೋದಿ  ಈ ಸಾಧನೆಗೆ ಕಾರಣವಾದ ಎಲ್ಲರನ್ನು ಅಭಿನಂದಿಸಿದ್ದರು. ಕೋವಾಕ್ಸಿನ್ ಮತ್ತು ಕೋವಿಡ್ ಶೀಲ್ಡ್ ಲಸಿಕೆಯನ್ನು ಭಾರತ ನಮ್ಮದೇ ದೇಶದಲ್ಲಿ ತಯಾರಿಸಿ ಪ್ರತಿಯೊಬ್ಬ ನಾಗರಿಕನೂ ಕೊರೋನಾ ವಿರುದ್ಧ ಹೋರಾಟ ಮಾಡಲು ಸಜ್ಜುಮಾಡಿದೆ.

ಕೊರೋನಾ ಭಾರತದಲ್ಲಿ ಇಳಿಕೆ ಕಂಡಿದ್ದರೂ ಇಂಗ್ಲೆಂಡ್ ಮತ್ತು ಚೀನಾ  ಹಾಗೂ ರಷ್ಯಾ ರೂಪಾಂತರಿ ಕಾಟಕ್ಕೆ ತತ್ತರಿಸುತ್ತಿವೆ. ರಷ್ಯಾದಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾಗಿದ್ದು ವೇತನ ಸಹಿತ ರಜೆಗೆ  ತೀರ್ಮಾನ ಮಾಡಲಾಗಿದೆ.   ಯಾವ ಕಾರಣಕ್ಕೂ ಮಾಸ್ಕ್ ಮತ್ತು ಸಾಮಾಜಿಕ ಅಂತರ ಮರೆಯಬೇಡಿ. 

Follow Us:
Download App:
  • android
  • ios