ಸಂದರ್ಶನದಲ್ಲಿ 2015ರಲ್ಲಿ ತಾವು ಪಾಕಿಸ್ತಾನಕ್ಕೆ ನೀಡಿದ್ದ ಭೇಟಿಯನ್ನು ಮೆಲುಕು ಹಾಕಿದ ಮೋದಿ, ‘ನಾನು ಪಾಕಿಸ್ತಾನಕ್ಕೆ ಹೋದಾಗ ಅನೇಕ ವರದಿಗಾರರು ಹಾಯ್‌ ಅಲ್ಲಾ, ನೀವು ವೀಸಾ ಇಲ್ಲದೆ ಬಂದುಬಿಟ್ಟಿದ್ದೀರಿ ಎಂದು ಕೇಳಿದ್ದರು. ಅದಕ್ಕೆ ನಾನು ಹಿಂದೊಮ್ಮೆ ಇದು ನನ್ನದೇ ದೇಶವಾಗಿತ್ತು ಎಂದು ಹೇಳಿದೆ ಎಂದೂ ತಿಳಿಸಿದ ಪ್ರಧಾನಿ ನರೇಂದ್ರ ಮೋದಿ  

ನವದೆಹಲಿ(ಮೇ.24):  ಪಾಕಿಸ್ತಾನದ ತಾಕತ್ತನ್ನು ನಾನೇ ಖುದ್ದಾಗಿ ಲಾಹೋರ್‌ಗೆ ಹೋಗಿ ಚೆಕ್‌ ಮಾಡಿಕೊಂಡು ಬಂದಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್‌ ನಾಯಕ ಮಣಿಶಂಕರ್‌ ಅಯ್ಯರ್‌ ಅವರ, ‘ಪಾಕ್‌ ಬಳಿ ಅಣುಬಾಂಬ್‌ ಇದೆ. ಹೀಗಾಗಿ ನಾವು ಅದರ ತಾಕತ್ತನ್ನು ಗೌರವಿಸಬೇಕು’ ಎಂಬ ಹೇಳಿಕೆಗೆ ತಿರುಗೇಟು ನೀಡಿರುವ ಅವರು, ‘ನಾನೇ ಖುದ್ದಾಗಿ ಹೋಗಿ ಆ ತಾಕತ್ತನ್ನು ಪರಿಶೀಲಿಸಿಕೊಂಡು ಬಂದಿದ್ದೇನೆ’ ಎಂದು ಹೇಳಿದ್ದಾರೆ.

ಇಂಡಿಯಾ ಟೀವಿಗೆ ನೀಡಿದ ಸಂದರ್ಶನದಲ್ಲಿ ಪಾಕಿಸ್ತಾನದ ತಾಕತ್ತಿನ ಪ್ರಶ್ನೆ ಬಂದಾಗ ಮೋದಿ ಈ ರೀತಿ ಉತ್ತರಿಸಿದ್ದಾರೆ.

ಕಾಂಗ್ರೆಸ್‌, ಎಸ್‌ಪಿಗೆ ಪಾಕಿಸ್ತಾನ ಪರ ಅನುಕಂಪ: ಮೋದಿ

ಸಂದರ್ಶನದಲ್ಲಿ 2015ರಲ್ಲಿ ತಾವು ಪಾಕಿಸ್ತಾನಕ್ಕೆ ನೀಡಿದ್ದ ಭೇಟಿಯನ್ನು ಮೆಲುಕು ಹಾಕಿದ ಮೋದಿ, ‘ನಾನು ಪಾಕಿಸ್ತಾನಕ್ಕೆ ಹೋದಾಗ ಅನೇಕ ವರದಿಗಾರರು ಹಾಯ್‌ ಅಲ್ಲಾ, ನೀವು ವೀಸಾ ಇಲ್ಲದೆ ಬಂದುಬಿಟ್ಟಿದ್ದೀರಿ ಎಂದು ಕೇಳಿದ್ದರು. ಅದಕ್ಕೆ ನಾನು ಹಿಂದೊಮ್ಮೆ ಇದು ನನ್ನದೇ ದೇಶವಾಗಿತ್ತು ಎಂದು ಹೇಳಿದೆ’ ಎಂದೂ ತಿಳಿಸಿದರು.