Asianet Suvarna News Asianet Suvarna News

2035ರ ವೇಳೆ ಬಾಹ್ಯಾಕಾಶ ನಿಲ್ದಾಣ, 2040ಕ್ಕೆ ಚಂದ್ರನಲ್ಲಿ ಭಾರತೀಯ, ಇಸ್ರೋಗೆ ಮಹತ್ವದ ಗುರಿ ನೀಡಿದ ಪ್ರಧಾನಿ ಮೋದಿ!

ಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶ ಹಾರಾಟವು 2025 ರಲ್ಲಿ ಟೇಕ್ ಆಫ್ ಆಗುವ ನಿರೀಕ್ಷೆಯಿದೆ ಎಂದು ಸಭೆಯ ನಂತರ ಪ್ರಧಾನಮಂತ್ರಿ ಕಾರ್ಯಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

PM Narendra Modi set ambitious goals for ISRO Space Station By 2035 Indian On Moon By 2040 san
Author
First Published Oct 17, 2023, 9:05 PM IST

ನವದೆಹಲಿ (ಅ.17): ಚಂದ್ರಯಾನ ಮಿಷನ್‌ನ ಯಶಸ್ಸಿನಿಂದ ಉತ್ತೇಜಿತರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಇಸ್ರೋಗೆ ಮಹತ್ವಾಕಾಂಕ್ಷೆಯ ಗುರಿಗಳನ್ನು ನೀಡಿದ್ದಾರೆ. 2035 ರ ವೇಳೆಗೆ ಭಾರತೀಯ ತನ್ನದೇ ಆದ ಸ್ವಂತ ಬಾಹ್ಯಾಕಾಶ ನಿಲ್ದಾಣವನ್ನು ಸ್ಥಾಪಿಸಬೇಕು ಮತ್ತು 2040 ರ ವೇಳೆಗೆ ಮೊದಲ ಚಂದ್ರನ ನೆಲಕ್ಕೆ ಮೊದಲ ಭಾರತೀಯನನ್ನು ಕಳಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿಕೊಳ್ಳಿ ಎಂದು ಹೇಳಿದ್ದಾರೆ. ಅಕ್ಟೋಬರ್ 21 ರಂದು ಕ್ರ್ಯೂ ಎಸ್ಕೇಪ್ ಸಿಸ್ಟಮ್‌ನ ಮೊದಲ ಪರೀಕ್ಷಾರ್ಥ ಹಾರಾಟ ಮತ್ತು ಇತರ ಕಾರ್ಯಾಚರಣೆಗಳನ್ನು ಹೊಂದಲಿರುವ ಗಗನ್‌ಯಾನ್ ಮಿಷನ್‌ನ ಪ್ರಗತಿಯ ಕುರಿತು ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರು ಪ್ರಧಾನಮಂತ್ರಿಗೆ ಮಾಹಿತಿ ನೀಡಿದ್ದರು. ಈ ವೇಳೆ ಪ್ರಧಾನಿ ಮೋದಿ ಕೆಲವೊಂದು ಗುರುತರ ಟಾರ್ಗೆಟ್‌ಗಳನ್ನು ಇಸ್ರೋಗೆ ನೀಡಿದ್ದಾರೆ. ಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶ ಹಾರಾಟವು 2025 ರಲ್ಲಿ ಟೇಕ್ ಆಫ್ ಆಗುವ ನಿರೀಕ್ಷೆಯಿದೆ ಎಂದು ಸಭೆಯ ನಂತರ ಪಿಎಂಓ ತಿಳಿಸಿದೆ. ಸಭೆಯಲ್ಲಿ ಪ್ರಧಾನಿ, ಭಾರತದ ಬಾಹ್ಯಾಕಾಶ ಪರಿಶೋಧನೆಯ ಪ್ರಯತ್ನಗಳ ಭವಿಷ್ಯವನ್ನು ವಿವರಿಸಿದರು ಮತ್ತು ವೀನಸ್ ಆರ್ಬಿಟರ್ ಮಿಷನ್ ಮತ್ತು ಮಾರ್ಸ್ ಲ್ಯಾಂಡರ್ ಸೇರಿದಂತೆ ಅಂತರಗ್ರಹ ಕಾರ್ಯಾಚರಣೆಗಳ ಕಡೆಗೆ ಕೆಲಸ ಮಾಡಲು ವಿಜ್ಞಾನಿಗಳಿಗೆ ಹುರಿದುಂಬಿಸಿದ್ದಲ್ಲದೆ, ಚಂದ್ರನನ್ನು ಇನ್ನಷ್ಟು ಆಳವಾಗಿ ಅಧ್ಯಯನ ಮಾಡುವಂತೆ ತಿಳಿಸಿದ್ದಾರೆ.

"ಇತ್ತೀಚಿನ ಚಂದ್ರಯಾನ-3 ಮತ್ತು ಆದಿತ್ಯ L1 ಮಿಷನ್‌ಗಳು ಸೇರಿದಂತೆ ಭಾರತೀಯ ಬಾಹ್ಯಾಕಾಶ ಕಾರ್ಯಾಚರಣೆಗಳ ಯಶಸ್ಸಿನ ಮೇಲೆ ನಿರ್ಮಿಸಲು, ಪ್ರಧಾನಮಂತ್ರಿಯವರು ಭಾರತವು ಈಗ 2035ರ ವೇಳೆಗೆ 'ಭಾರತೀಯ ಅಂತರಿಕ್ಷಾ ನಿಲ್ದಾಣ' (ಭಾರತೀಯ ಬಾಹ್ಯಾಕಾಶ ನಿಲ್ದಾಣ) ಸ್ಥಾಪನೆ ಸೇರಿದಂತೆ ಹೊಸ ಮತ್ತು ಮಹತ್ವಾಕಾಂಕ್ಷೆಯ ಗುರಿಗಳನ್ನು ಗುರಿಯಾಗಿಸಿಕೊಳ್ಳಬೇಕು ಎಂದು ನಿರ್ದೇಶಿಸಿದರು. 2040ರ ವೇಳೆಗೆ ಮೊದಲ ಭಾರತೀಯರನ್ನು ಚಂದ್ರನತ್ತ ಕಳಿಸುವ ನಿಟ್ಟಿನಲ್ಲಿ ಇಸ್ರೋ ಪ್ರಯತ್ನ ನಡೆಸಲಿದೆ ಎಂದು ಮಾಹಿತಿ ನೀಡಿದೆ. ಈ ಗುರಿಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಬಾಹ್ಯಾಕಾಶ ಇಲಾಖೆಯು ಚಂದ್ರನ ಅನ್ವೇಷಣೆಗಾಗಿ ಮಾರ್ಗಸೂಚಿಯನ್ನು ಅಭಿವೃದ್ಧಿ ಮಾಡಲಿದೆ ಎಂದು ತಿಳಿಸಿದೆ.

ಇಸ್ರೋದ ಚಂದ್ರನ ಪರಿಶೋಧನಾ ಯೋಜನೆಗಳು ಚಂದ್ರಯಾನ ಕಾರ್ಯಾಚರಣೆಗಳ ಸರಣಿಯನ್ನು ಒಳಗೊಂಡಿರುತ್ತದೆ, ಹೊಸ ರಾಕೆಟ್ ಅನ್ನು ಅಭಿವೃದ್ಧಿಪಡಿಸುವುದು, ನೆಕ್ಸ್ಟ್ ಜನರೇಷನ್ ಲಾಂಚ್ ವೆಹಿಕಲ್ (NGLV), ಹೊಸ ಉಡಾವಣಾ ಪ್ಯಾಡ್ ಅನ್ನು ನಿರ್ಮಿಸುವುದು ಮತ್ತು ಮಾನವ ಕೇಂದ್ರಿತ ಪ್ರಯೋಗಾಲಯಗಳು ಮತ್ತು ಸಂಬಂಧಿತ ತಂತ್ರಜ್ಞಾನಗಳನ್ನು ಸ್ಥಾಪಿಸುವುದು ಸೇರಿದಂತೆ ಹಲವು ಯೋಜನೆಗಳನ್ನು ಒಳಗೊಂಡಿರಲಿದೆ. ಬಾಹ್ಯಾಕಾಶ ಇಲಾಖೆಯು ಗಗನಯಾನ ಮಿಷನ್‌ನ ಸಮಗ್ರ ಅವಲೋಕನವನ್ನು ಪ್ರಸ್ತುತಪಡಿಸಿದೆ, ಇದುವರೆಗೆ ಅಭಿವೃದ್ಧಿಪಡಿಸಲಾದ ಮಾನವ-ರೇಟೆಡ್ ಉಡಾವಣಾ ವಾಹನಗಳು ಮತ್ತು ಸಿಸ್ಟಮ್ ಅರ್ಹತೆಯಂತಹ ವಿವಿಧ ತಂತ್ರಜ್ಞಾನಗಳನ್ನು ಒಳಗೊಂಡಿದೆ. ಮಾನವ ರೇಟೆಡ್ ಲಾಂಚ್ ವೆಹಿಕಲ್‌ನ (HLVM3) ಮೂರು ಸಿಬ್ಬಂದಿರಹಿತ ಮಿಷನ್‌ಗಳನ್ನು ಒಳಗೊಂಡಂತೆ ಸುಮಾರು 20 ಪ್ರಮುಖ ಪರೀಕ್ಷೆಗಳನ್ನು ಯೋಜಿಸಲಾಗಿದೆ ಎಂದು ತಿಳಿಸಿದೆ.

ಇಸ್ರೋದ ಸಾಮರ್ಥ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಬಾಹ್ಯಾಕಾಶ ಪರಿಶೋಧನೆಯಲ್ಲಿ ಖಂಡಿತಾ ಇಸ್ರೋ ದೇಶವನ್ನು ಇನ್ನಷ್ಟು ಎತ್ತರಕ್ಕೆ ಏರಿಸಲಿದೆ ಎಂದು ಹೇಳಿದ್ದಾರೆ. ಇಬ್ಬರು ಗಗನಯಾತ್ರಿಗಳನ್ನು ಕಡಿಮೆ ಭೂಮಿಯ ಕಕ್ಷೆಗೆ ಕಳುಹಿಸುವ ಗಗನಯಾನ ಮಿಷನ್ ಅನ್ನು ಮೂಲತಃ 2022 ರಲ್ಲಿ ಉಡಾವಣೆ ಮಾಡಲು ಯೋಜಿಸಲಾಗಿತ್ತು. ಆದಾಗ್ಯೂ, ಕೋವಿಡ್ ಸಾಂಕ್ರಾಮಿಕ ಮತ್ತು ಕಾರ್ಯಾಚರಣೆಯ ಸಂಕೀರ್ಣತೆಯು ವಿಳಂಬಕ್ಕೆ ಕಾರಣವಾಯಿತು.

ಬೆಂಗಳೂರು ವಿವಿ 58ನೇ ಘಟಿಕೋತ್ಸವ: ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ, ಇಸ್ರೋ ಅಧ್ಯಕ್ಷ ಸೋಮನಾಥ್‌ಗೆ ಗೌರವ ಡಾಕ್ಟರೇಟ್

ಈಗಿರುವ ಮಾಹಿತಿಗಳ ಪ್ರಕಾರ 2024ರ ಕೊನೆಯ ಅವಧಿಯಲ್ಲಿ ಗಗನಯಾನ ಮಿಷನ್‌  ಆರಂಭವಾಗುವ ನಿರೀಕ್ಷೆ ಇತ್ತು.ಆದರೆ, ಮಂಗಳವಾರದ ಸಭೆಯ ಬಳಿಕ ಇದು ಗಗನಯಾನ ಯೋಜನೆಯು 2025ರಲ್ಲಿ ನಡೆಯುವ ಸಾಧ್ಯತೆ ಇದೆ. ಸೋಮನಾಥ್ ಅವರಲ್ಲದೆ, ಪ್ರಧಾನಿ ಕಾರ್ಯಾಲಯದ ರಾಜ್ಯ ಸಚಿವ ಜಿತೇಂದ್ರ ಸಿಂಗ್, ಪ್ರಧಾನ ಮಂತ್ರಿ ಪ್ರಧಾನ ಕಾರ್ಯದರ್ಶಿ ಪಿಕೆ ಮಿಶ್ರಾ ಮತ್ತು ಇತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Gaganyaan: ಮೊದಲ ಪರೀಕ್ಷಾರ್ಥ ಉಡಾವಣೆಗೆ ದಿನಾಂಕ ಫಿಕ್ಸ್‌ ಮಾಡಿದ ಇಸ್ರೋ!

Follow Us:
Download App:
  • android
  • ios