Asianet Suvarna News Asianet Suvarna News

ಮಂಗರ್‌ ಧಾಮ್ ದೃಢತೆ, ತಪಸ್ಸು ಮತ್ತು ದೇಶಭಕ್ತಿಯ ಪ್ರತಿಬಿಂಬ: ಪ್ರಧಾನಿ ನರೇಂದ್ರ ಮೋದಿ!

PM Modi In Mangarh:   ಪ್ರಧಾನಿ ನರೇಂದ್ರ ಮೋದಿ ಅವರು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೇರಿದಂತೆ ಮೂರು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಂಗರ್ ಧಾಮ್‌ನ ಗೌರವ್ ಯಾತ್ರೆಯಲ್ಲಿ ಭಾಗವಹಿಸಿದರು.
 

PM Narendra Modi says Mangarh Dham is a reflection patriotism san all about tribal heroes san
Author
First Published Nov 1, 2022, 1:46 PM IST

ಜೈಪುರ (ನ. 1): ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ರಾಜಸ್ಥಾನಕ್ಕೆ ಆಗಮಿಸಿ ಮಂಗರ್‌ನಲ್ಲಿ ನಡೆದ ಗೌರವ ಗಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ದೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ನಾವೆಲ್ಲರೂ ಮಂಗರ್‌ ಧಾಮಕ್ಕೆ ಬಂದಿರುವುದು ಸ್ಪೂರ್ತಿ ಹಾಗೂ ಹೆಮ್ಮೆಯ ವಿಚಾರವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಮಂಗರ್‌ ಧಾಮ್ ಬುಡಕಟ್ಟು ವೀರರು ಮತ್ತು ಸ್ವಾತಂತ್ರ್ಯ ವೀರರ ದೃಢತೆ, ತ್ಯಾಗ, ತಪಸ್ಸು ಮತ್ತು ದೇಶಭಕ್ತಿಯ ಪ್ರತಿಬಿಂಬವಾಗಿದೆ. ಇದು ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ಸಾಮಾನ್ಯ ಪರಂಪರೆಯಾಗಿದೆ. 1913ರ ನವೆಂಬರ್‌ 17 ರಂದು ನಡೆದ ಈ ಹತ್ಯಾಕಾಂಡವನ್ನು ಇತಿಹಾಸದ ಪುಟಗಳಲ್ಲಿ 'ಆದಿವಾಸಿ ಜಲಿಯನ್‌ ವಾಲಾಭಾಗ್‌' ಎಂದೇ ಗುರುತಿಸಲಾಗುತ್ತಿದೆ. ಬ್ರಿಟಿಷರು ದೇಶದ ಆದಿವಾಸಿಗಳ ಮೇಲೆ ಮಾಡಿದ ದೌರ್ಜನ್ಯವನ್ನು ಈ ಘಟನೆ ಎತ್ತಿ ತೋರಿಸಿದೆ.  ಜಗತ್ತನ್ನು ಗುಲಾಮರನ್ನಾಗಿ ಮಾಡಲು ಯೋಚಿಸಿ, ಮಂಗರ್‌ನ ಈ ಬೆಟ್ಟದ ಮೇಲೆ, ಬ್ರಿಟಿಷ್ ಸರ್ಕಾರವು 1500 ಕ್ಕೂ ಹೆಚ್ಚು ಬುಟಕಟ್ಟು ಜನರನ್ನು ಸುತ್ತುವರೆದು ಅವರನ್ನು ಸಾವಿನ ದವಡೆಗೆ ನೂಕಿತ್ತು. ದುರದೃಷ್ಟವಶಾತ್, ಬುಡಕಟ್ಟು ಸಮಾಜದ ಈ ತ್ಯಾಗಕ್ಕೆ ಇತಿಹಾಸದಲ್ಲಿ ಸಿಗಬೇಕಾದ ಸ್ಥಾನ ಸಿಗಲಿಲ್ಲ. ಇಂದು ದೇಶ ಆ ಕೊರತೆಯನ್ನು ತುಂಬುತ್ತಿದೆ. ಬುಡಕಟ್ಟು ಸಮಾಜವಿಲ್ಲದೆ ಭಾರತದ ಭೂತ, ಇತಿಹಾಸ, ವರ್ತಮಾನ ಮತ್ತು ಭವಿಷ್ಯವು ಪೂರ್ಣಗೊಳ್ಳುವುದಿಲ್ಲ ಎಂದು ಪ್ರಧಾನಿ ಹೇಳಿದ್ದಾರೆ.

PM Narendra Modi says Mangarh Dham is a reflection patriotism san all about tribal heroes san
ಮಂಗರ್‌ ಧಾಮ್‌ ಕಿ ಗೌರವ ಯಾತ್ರಾ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜಸ್ಥಾನ ಸಿಎಂ ಅಶೋಕ್‌ ಗ್ಲೆಹೋಟ್‌, ಪ್ರಧಾನಿ ಮೋದಿ ವಿದೇಶಕ್ಕೆ ಹೋದಾಗ ದೊಡ್ಡ ಮಟ್ಟದ ಸ್ವಾಗತ ಪಡೆಯುತ್ತಾರೆ. ಯಾಕೆಂದರೆ ಅವರು ಗಾಂಧಿಯ ನಾಡಿನ ಪ್ರಧಾನಿ ಎನ್ನುವ ಕಾರಣಕ್ಕೆ ಈ ಗೌರವವನ್ನು ಸಂಪಾದಿಸಿದ್ದಾರೆ. ಇಲ್ಲಿ ಪ್ರಜಾಪ್ರಭುತ್ವ ಮೂಲಗಳಲ್ಲಿ ಇಳಿದಿದೆ' ಎಂದು ಪ್ರಧಾನಿ ಮೋದಿ, ಗುಜರಾತ್‌ ಸಿಎಂ ಭೂಪೇಂದ್ರ ಪಟೇಲ್‌ ಹಾಗೂ ಮಧ್ಯಪ್ರದೇಶ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ ಸಮ್ಮುಖದಲ್ಲಿ ಹೇಳಿದರು.

ಮಂಗರ್ ಧಾಮದ ಇತಿಹಾಸವನ್ನು ಸುವರ್ಣಾಕ್ಷರಗಳಲ್ಲಿ ಬರೆಯಲಾಗಿದೆ. ಇದನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಮಾಡುವಂತೆ ಪ್ರಧಾನಿಗೆ ಮನವಿ ಮಾಡಿದ್ದೇವೆ. ಸ್ವಾತಂತ್ರ್ಯ ಸಂಗ್ರಾಮದ ಹೋರಾಟದಲ್ಲಿ ಬುಡಕಟ್ಟು ಸಮಾಜವು ಯಾರಿಗೂ ಕಡಿಮೆಯಾಗಿರಲಿಲ್ಲ. ಮಂಗರ್‌ ಧಾಮವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸಬೇಕು ಎಂಬುದು ನಮ್ಮ ಮನವಿ ಎಂದರು.

ಏನಿದು ಮಂಗರ್‌ ಧಾಮ: ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕಳೆದ ವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ರಾಜಸ್ಥಾನದ ಬನ್ಸ್ವಾರಾ ಜಿಲ್ಲೆಯ ಮಂಗರ್ ಧಾಮ್ ಅನ್ನು "ರಾಷ್ಟ್ರೀಯ ಸ್ಮಾರಕ" ಎಂದು ಘೋಷಿಸಲು ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದ್ದಾರೆ. ನವೆಂಬರ್ 1 ರಂದು ಮಂಗರ್‌ಗೆ ಪ್ರಧಾನ ಮಂತ್ರಿಯವರ ನಿಗದಿತ ಭೇಟಿಗೆ ಮುಂಚಿತವಾಗಿ ಅವರು ಈ ಪತ್ರ ಬರೆದಿದ್ದರು.

ಜಲಿಯನ್‌ವಾಲಾ ಬಾಗ್‌ಗೆ ಆರು ವರ್ಷಗಳ ಮೊದಲು ನಡೆದ ಆದಿವಾಸಿಗಳ ಹತ್ಯಾಕಾಂಡಕ್ಕೆ ಮಂಗರ್ ಧಾಮ್ ಹೆಸರುವಾಸಿಯಾಗಿದೆ ಮತ್ತು ಇದನ್ನು ಕೆಲವೊಮ್ಮೆ "ಆದಿವಾಸಿ ಜಲಿಯನ್‌ವಾಲಾ" ಎಂದು ಕರೆಯಲಾಗುತ್ತದೆ. ರಾಜಸ್ಥಾನ ಮತ್ತು ಗುಜರಾತ್‌ನ ಗಡಿಯಲ್ಲಿರುವ ಮಂಗರ್‌ ಬೆಟ್ಟಗಳಲ್ಲಿ ಬ್ರಿಟಿಷ್ ಪಡೆಗಳು ನೂರಾರು ಭಿಲ್ ಆದಿವಾಸಿಗಳನ್ನು ಕೊಂದಿದ್ದವು. ಆಗಸ್ಟ್ 8 ರಂದು ಗೆಹ್ಲೋಟ್ ಅವರು ಮೋದಿಗೆ ಬರೆದ ಮತ್ತೊಂದು ಪತ್ರದ ಪ್ರಕಾರ, ಹತ್ಯಾಕಾಂಡದಲ್ಲಿ 1,500 ಆದಿವಾಸಿಗಳು ಕೊಲ್ಲಲ್ಪಟ್ಟರು ಎನ್ನಲಾಗಿದೆ. ಸಮಾಜ ಸುಧಾರಕ ಮತ್ತು ಬುಡಕಟ್ಟು ನಾಯಕ ಗೋವಿಂದ ಗುರು ಬ್ರಿಟಿಷರ ವಿರುದ್ಧ ಮಂಗರ್‌ನಲ್ಲಿ ಆದಿವಾಸಿಗಳ ಹೋರಾಟದ ನೇತೃತ್ವ ವಹಿಸಿದ್ದರು.

ನರೇಂದ್ರ ಮೋದಿ ವಿದೇಶಾಂಗ ನೀತಿ ಹೊಗಳಿ, ಭವಿಷ್ಯದಲ್ಲಿ ಎಲ್ಲವೂ ಭಾರತ ಎಂದ ಪುಟಿನ್!

ರಾಜಸ್ಥಾನ, ಗುಜರಾತ್ ಮತ್ತು ಮಧ್ಯಪ್ರದೇಶದ ಆದಿವಾಸಿಗಳು ಈ ಸ್ಥಳವನ್ನು ಪವಿತ್ರ ಸ್ಥಳವೆಂದು ಗೌರವಿಸುತ್ತಾರೆ ಮತ್ತು ಇದು ಬುಡಕಟ್ಟು ಜನರ ಮಹತ್ವದ ಸ್ಥಳವಾಗಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ರಾಜಕೀಯ ನಿಟ್ಟಿನಲ್ಲಿ ಬಳಸಿಕೊಳ್ಳಲು ಯತ್ನಿಸಿವೆ. ಗುಜರಾತ್‌ನಲ್ಲಿ ಈ ವರ್ಷ ಚುನಾವಣೆ ನಡೆಯುತ್ತಿದ್ದರೆ, ಮುಂದಿನ ವರ್ಷ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಚುನಾವಣೆ ನಿಗದಿಯಾಗಿದೆ. ಈ ಪ್ರದೇಶದಲ್ಲಿ ಆದಿವಾಸಿಗಳ ವಿಶ್ವಾಸ ಪಡೆಯುವ ನಿಟ್ಟಿನಲ್ಲಿ ಪಕ್ಷಗಳು ಕೆಲಸ ಮಾಡುತ್ತಿವೆ.

ಬೆಂಗ್ಳೂರಿನ ಮೋದಿ ಶೋಗೆ ಭರ್ಜರಿ ಸಿದ್ಧತೆ: 3 ಲಕ್ಷ ಜನ ಭಾಗಿ ನಿರೀಕ್ಷೆ

ಪ್ರಧಾನಿ ಮೋದಿಯವರು ಗೋವಿಂದ ಗುರುಗಳ ಬಗ್ಗೆ ಆಳವಾದ ಗೌರವವನ್ನು ಹೊಂದಿದ್ದಾರೆ. 2012ರ ಜುಲೈ 30 ರಂದು, ಗುಜರಾತ್ ಮುಖ್ಯಮಂತ್ರಿಯಾಗಿ, ಅವರು 63 ನೇ ವನ  ಮಹೋತ್ಸವವನ್ನು ಮಂಗರ್ ಹಿಲ್‌ನಿಂದ 1507 ಮರಗಳನ್ನು ನೆಡುವ ಮೂಲಕ ಮಂಗರ್ ಧಾಮ್‌ನ ಬುಡಕಟ್ಟು ಹುತಾತ್ಮರಿಗೆ ಗೌರವ ಸೂಚಿಸಿದ್ದರು.  ಗೋವಿಂದ ಗುರು ಸ್ಮೃತಿ ವನ ಹೆಸರಿನ ಸಸ್ಯೋದ್ಯಾನವನ್ನು ಅವರು ಉದ್ಘಾಟನೆ ಮಾಡಿದ್ದರು. ಕಾರ್ಯಕ್ರಮದಲ್ಲಿ ಗೋವಿಂದ ಗುರುಗಳ ಮೊಮ್ಮಗ ಮಾನ್ ಸಿಂಗ್ ಅವರನ್ನು ಸನ್ಮಾನಿಸಿದರು. ಅವರು 30 ಸೆಪ್ಟೆಂಬರ್ 2012 ರಂದು ಗೋವಿಂದ ಗುರುಗಳ ಪ್ರತಿಮೆಯನ್ನು ಸಹ ಮೋದಿ ಉದ್ಘಾಟಿಸಿದ್ದರು.

Follow Us:
Download App:
  • android
  • ios