Asianet Suvarna News Asianet Suvarna News

PM Modi Karnataka Visit: ಕರ್ನಾಟಕ ಮಹಾಯುದ್ಧಕ್ಕೆ ಮೋದಿ ಎಂಟ್ರಿ: ಕರಾವಳಿಯಿಂದಲೇ ರಣಕಹಳೆ!

PM Modi Karnataka Visit:  ರಾಜ್ಯ ವಿಧಾನಸಭಾ ಚುನಾವಣೆ ಗೆಲ್ಲಲು ಪ್ರಧಾನಿ ಮೋದಿಯವರೇ  ಬಿಜೆಪಿಗೆ ಟ್ರಂಪ್ ಕಾರ್ಡ್ ಯಾಕೆ ಗೊತ್ತಾ?  ಮೋದಿ ಬೂಸ್ಟರ್ ಬಿಜೆಪಿಗೆ ಕರ್ನಾಟಕ ಕುರುಕ್ಷೇತ್ರವನ್ನು ಗೆದ್ದು ಕೊಡಲಿದ್ಯಾ? ಇಲ್ಲಿದೆ ಕಂಪ್ಲೀಟ್‌ ರಿಪೋರ್ಟ್‌ 

PM Narendra Modi Mangaluru Karnataka Visit All You need to Know BJP Politics Assembly Elections 2023 mnj
Author
First Published Sep 3, 2022, 12:44 PM IST

ಮಂಗಳೂರು (ಸೆ. 03): ಗಜ ಮತ್ತು ಕೇಸರಿ ಅಂದರೆ ಆನೆ ಮತ್ತು ಸಿಂಹ, ಒಟ್ಟಿಗೇ ಸೇರಿದ್ರೆ ಗಜಕೇಸರಿ, ಅಂತಹ ಗಜಕೇಸರಿ ಬಲವನ್ನು ಮಟ್ಟ ಹಾಕೋದಂದ್ರೆ ಅದೊಂಥರಾ ಹಸಿದ ಹೆಬ್ಬುಲಿ ಬಾಯಿಗೆ ಕೈ ಇಟ್ಟಂತೆ. ಚುನಾವಣಾ ಅಖಾಡದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗಿರೋದು ಅದೇ ಶಕ್ತಿ. ಇಲ್ಲಾಂದ್ರೆ ಚರಿತ್ರೆಯೇ ಚಿಂದಿ ಚಿತ್ರಾನ್ನವಾಗೋ ರೀತಿಯಲ್ಲಿ ಎರಡೆರಡು ಬಾರಿ ದೇಶದ ಪ್ರಧಾನಿಯಾಗೋದಕ್ಕೆ ಸಾಧ್ಯವಿತ್ತಾ? ದೇಶ ಗೆದ್ದ ನರೇಂದ್ರ, ರಾಜ್ಯಗಳನ್ನು ಗೆಲ್ಲೋದಕ್ಕೆ ಕೇಸರಿ ಬತ್ತಳಿಕೆಯ ಬ್ರಹ್ಮಾಸ್ತ್ರವೂ ಹೌದು. ಬೆರಳೆಣಿಕೆಯ ಕೆಲ ರಾಜ್ಯಗಳನ್ನ ಬಿಟ್ರೆ ಮೋದಿ ಕಾಲಿಟ್ಟಲ್ಲೆಲ್ಲಾ ಬಿಜೆಪಿ ಜಯಭೇರಿ, ಜಯದ ನಗಾರಿ ಮೊಳಗುತ್ತಾ ಬಂದಿದೆ. ಈಗ ಮೋದಿ ಕಣ್ಣು ಬಿದ್ದಿರೋದು ಕರ್ನಾಟಕ ಕುರುಕ್ಷೇತ್ರದ ಮೇಲೆ.

ಮಂಗಳೂರಲ್ಲಿ ಬೃಹತ್‌ ಸಮಾವೇಶ: ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಕರ್ನಾಟಕಕ್ಕೆ ಬಂದಿದ್ರು. ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದ ಮಂಗಳೂರಿಗೆ ಭೇಟಿ ಕೊಟ್ಟ ಮೋದಿ, ನವಮಂಗಳೂರು ಬಂದರು ಪ್ರಾಧಿಕಾರದ 3,800 ಕೋಟಿ ರೂಪಾಯಿ ವೆಚ್ಚದ ವಿವಿಧ ಯೋಜನೆಗಳನ್ನು ಉದ್ಘಾಟಿಸಿದ್ರು. ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ರು. ನಂತ್ರ ಕೂಳೂರಿನಲ್ಲಿರೋ ಗೋಲ್ಡ್ ಪಿಂಚ್ ಮೈದಾನದಲ್ಲಿ ಸೇರಿದ್ದ ಜನಸ್ತೋಮವನ್ನುದ್ದೇಶಿಸಿ ಮೋದಿ ಮಾತನಾಡಿದ್ರು.

ವಿಧಾನಸಭಾ ಚುನಾವಣೆಗೆ ರಣಕಹಳೆ: ಮುಂದಿನ ವರ್ಷ ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಪ್ರಧಾನಿ ಮೋದಿಯವರು ಮೊಳಗಿಸಿದ ಮೊದಲ ರಣಕಹಳೆಯಿದು. ಅದೂ ಎಲ್ಲಿಂದ? ಬಿಜೆಪಿ ಭದ್ರಕೋಟೆ ಕರಾವಳಿಯಿಂದ. ಚುನಾವಣೆಗೆ 7 ತಿಂಗಳಿರೋವಾಗ್ಲೇ ಅಭಿವೃದ್ಧಿಯ ಯೋಜನೆಗಳ ಉದ್ಘಾಟನೆಯ ನೆಪದಲ್ಲಿ ರಾಜ್ಯಕ್ಕೆ ನುಗ್ಗಿದ್ದಾರೆ ಕೇಸರಿ ಪಡೆಯ ಮಹಾವೀರ ಮೋದಿ.  ಮೋದಿ ಎಂಟ್ರಿಗೆ ರಾಜ್ಯ ಕೇಸರಿ ಪಾಳೆಯದಲ್ಲಿ ಥೌಸಂಡ್ ವೋಲ್ಟ್ ಕರೆಂಟ್‌ನ ಮಿಂಚಿನ ಸಂಚಲನವೇ ಎದ್ದು ಬಿಟ್ಟಿದೆ.

ಮೋದಿ-ಯೋಗಿ ಎಂಟ್ರಿ: ರಾಜ್ಯ ಕೇಸರಿ ಪಡೆಯಲ್ಲಿ ಸಮರೋತ್ಸಾಹ!

ಮೋದಿ ಮುಂದಿನ ಟಾರ್ಗೆಟ್ ಕರ್ನಾಟಕ: ದೇಶದ ಮೂಲೆ ಮೂಲೆಗಳಲ್ಲಿ ಇವತ್ತು ಕೇಸರಿ ಬಾವುಟ ಹಾರ್ತಾ ಇದೆ ಅಂದ್ರೆ ಅದಕ್ಕೆ ಮೂಲ ಕಾರಣ ಮೋದಿ. ರಾಜ್ಯಗಳ ಮೇಲೆ ರಾಜ್ಯಗಳನ್ನು ಗೆಲ್ಲುತ್ತಾ ದಂಡಯಾತ್ರೆ ನಡೆಸುತ್ತಿರೋ ಮೋದಿ, ಬಹುತೇಕ ರಾಜ್ಯಗಳಲ್ಲಿ ಬಿಜೆಪಿಯನ್ನು ಅಧಿಕಾರದ ಗದ್ದುಗೆ ಏರಿಸಿದ್ದಾರೆ. ದೇಶದ ಅತೀ ದೊಡ್ಡ ರಾಜ್ಯ ಉತ್ತರ ಪ್ರದೇಶದಿಂದ ಹಿಡಿದು ಅತೀ ಚಿಕ್ಕ ರಾಜ್ಯ ಮಣಿಪುರದವರೆಗೆ ಮೋದಿ ಮ್ಯಾಜಿಕ್ ಮಾಡಿದ್ದಾರೆ. ರಣಬೇಟೆಗಾರನ ಮುಂದಿನ ಟಾರ್ಗೆಟ್ ಕರ್ನಾಟಕ.

ಕರ್ನಾಟಕದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಮೋದಿ ಸೇರಿದಂತೆ ಹೈಕಮಾಂಡ್ ನಾಯಕರು ಪಣ ತೊಟ್ಟಿದ್ದಾರೆ. ಬಿಜೆಪಿ ವರಿಷ್ಠರಿಗೆ ಕರ್ನಾಟಕವನ್ನು ಗೆಲ್ಲೋದು ಯಾಕೆ ಅಷ್ಟೊಂದು ಇಂಪಾರ್ಟೆಂಟ್ ಗೊತ್ತಾ? ಅದಕ್ಕೊಂದು ಬಲವಾದ ಕಾರಣವಿದೆ.

ಕರ್ನಾಟಕವೇ ಬಿಜೆಪಿಗೆ ಹೆಬ್ಬಾಗಿಲು: ಇಡೀ ದಕ್ಷಿಣ ಭಾರತದ ಮೇಲೊಮ್ಮೆ ಕಣ್ಣು ಹಾಯಿಸಿ ನೋಡಿ. ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ. ಹೀಗೆ ದಕ್ಷಿಣ ಭಾರತದ ದೊಡ್ಡ ರಾಜ್ಯಗಳ ಪೈಕಿ ಬಿಜೆಪಿಯ ಸರ್ಕಾರದ ಆಡಳಿತವಿರೋದು ಒಂದೇ ರಾಜ್ಯದಲ್ಲಿ. ಅದು ಕರ್ನಾಟಕ ಮಾತ್ರ. ಗೋವಾ ಮತ್ತು ಪುದುಚೇರಿಯಲ್ಲಿ ಬಿಜೆಪಿ ಅಧಿಕಾರದಲ್ಲಿದೆಯಾದ್ರೂ, ಅವೆರಡೂ ಆಟಕ್ಕುಂಟು ಲೆಕ್ಕಕ್ಕಿಲ್ಲ ರಾಜ್ಯಗಳು. ಹೀಗಾಗಿ ದಕ್ಷಿಣ ಭಾರತದಲ್ಲಿ ಕರ್ನಾಟಕವೇ ಬಿಜೆಪಿಗೆ ಹೆಬ್ಬಾಗಿಲು. ಆ ಹೆಬ್ಬಾಗಿಲ ಮೂಲಕವೇ ತೆಲಂಗಾಣ, ಆಂಧ್ರ, ಕೇರಳ, ತಮಿಳುನಾಡಿನಲ್ಲಿ ನೆಲೆಯೂರಲು ಬಿಜೆಪಿ ಹರಸಾಹಸ ಮಾಡ್ತಾ ಇದೆ. 

ಭರ್ಜರಿ ಭಾಷಣಗಳು, ಭರಪೂರ ಭರವಸೆಗಳು ಏನಾದವು? ಮಂಗಳೂರಿಗೆ ಬರುತ್ತಿರುವ ಮೋದಿಗೆ ಕೈ ಪ್ರಶ್ನೆ

ಕರ್ನಾಟಕದಲ್ಲಿ ಸೋತ್ರೆ ಬಿಜೆಪಿಗೆ ಪಾಲಿಗೆ ದಕ್ಷಿಣ ಭಾರತದ ಹೆಬ್ಬಾಗಿಲೇ ಕ್ಲೋಸ್. ಹೀಗಾಗಿ ಕರ್ನಾಟಕ ಕುರುಕ್ಷೇತ್ರಕ್ಕೆ ಇನ್ನಿಲ್ಲದ ಮಹತ್ವ. ಇದೇ ಕಾರಣದಿಂದ ಪ್ರಧಾನಿ ಮೋದಿ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ನೆಪದಲ್ಲಿ ಚುನಾವಣೆಗೆ ಆರೇಳು ತಿಂಗಳು ಮೊದಲೇ ಅಖಾಡಕ್ಕಿಳಿದಿದ್ದಾರೆ.  

ಕೇಸರಿ ಕಲಿಗಳಿಗೆ ಒಂದಷ್ಟು ಸಲಹೆ: ಮಂಗಳೂರಿನ ಕೂಳೂರಿನಲ್ಲಿ ಬೃಹತ್ ಸಮಾವೇಶನ್ನುದ್ದೇಶಿಸಿ ಮಾತನಾಡಿದ ಮೋದಿ ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರ ಮುಂದೆ ತೆರೆದಿಟ್ರು. ಡಬಲ್ ಇಂಜಿನ್ ಸರ್ಕಾರ ಯಾಕೆ ಮುಕ್ಯ ಅನ್ನೋದನ್ನು ಜನರಿಗೆ ಮನದಟ್ಟು ಮಾಡಿಸಿದ್ರು. ನಂತ್ರ ರಾಜ್ಯ ಬಿಜೆಪಿ ನಾಯಕರೊಂದಿಗೆ ಕೋರ್ ಕಮಿಟಿ ಸಭೆ ನಡೆಸಿದ ಮೋದಿ, ಮುಂದಿನ ವಿಧಾನಸಭಾ ಚುನಾವಣೆಗೆ ರಣತಂತ್ರಗಳನ್ನು ಹೆಣೆದ್ರು. 

ರಾಜ್ಯ ಕೇಸರಿ ಕಲಿಗಳಿಗೆ ಒಂದಷ್ಟು ಸಲಹೆ ಸೂಚನೆಗಳನ್ನು ನೀಡಿ, ಚುನಾವಣೆಗೆ ಹೇಗೆ ಸಜ್ಜಾಗ್ಬೇಕು ಅನ್ನೋದ್ರ ಬಗ್ಗೆ ಕಿವಿ ಮಾತು ಹೇಳಿದ್ದಾರೆ. ಅಷ್ಟಕ್ಕೂ ರಾಜ್ಯ ವಿಧಾನಸಭಾ ಚುನಾವಣೆ ಗೆಲ್ಲಲು ಪ್ರಧಾನಿ ಮೋದಿಯವರೇ  ಬಿಜೆಪಿಗೆ ಟ್ರಂಪ್ ಕಾರ್ಡ್ ಯಾಕೆ ಗೊತ್ತಾ?  ಮೋದಿ ಬೂಸ್ಟರ್ ಬಿಜೆಪಿಗೆ ಕರ್ನಾಟಕ ಕುರುಕ್ಷೇತ್ರವನ್ನು ಗೆದ್ದು ಕೊಡಲಿದ್ಯಾ? ಇಲ್ಲಿದೆ ಕಂಪ್ಲೀಟ್‌ ರಿಪೋರ್ಟ್‌ 

Follow Us:
Download App:
  • android
  • ios