Asianet Suvarna News Asianet Suvarna News

Drone Mahotsav 2022 ಬೆಂಗಳೂರಿನ ಡ್ರೋನ್ ಹಾರಿಸಿ ಕಾರ್ಯಕ್ರಮ ಉದ್ಘಾಟಿಸಿದ ಪ್ರಧಾನಿ ಮೋದಿ!

  • ಭಾರತ್ ಡ್ರೋನ್ ಮಹೋತ್ಸವಕ್ಕೆ ಪ್ರಧಾನಿ ಮೋದಿ ಚಾಲನೆ
  • ದೇಶದಲ್ಲಿ ತಯಾರಾದ ವಿವಿಧ ಡ್ರೋನ್‌ಗಳ ಪ್ರದರ್ಶನ
  • ಕಣ್ಗಾವಲು ಡ್ರೋನ್ ಹಾರಿಸಿ ಮಹೋತ್ಸವಕ್ಕೆ ಚಾಲನೆ
     
PM Narendra Modi inaugurate Drone Festival of India 2022 flies Bengaluru based startup drone ckm
Author
Bengaluru, First Published May 27, 2022, 4:47 PM IST | Last Updated May 27, 2022, 4:52 PM IST

ನವದೆಹಲಿ(ಮೇ.27): ಪ್ರಧಾನಿ ನರೇಂದ್ರ ಮೋದಿ ಇಂದು ಭಾರತ್ ಡ್ರೋನ್ ಮಹತ್ಸೋವಕ್ಕೆ ಚಾಲನೆ ನೀಡಿದ್ದಾಾರೆ. ನವದೆಹಲಿಯ ಪ್ರಗತಿ ಮೈದಾನದಲ್ಲಿ ನಡೆಯುತ್ತಿರುವ ಡ್ರೋನ್‌ ಫೆಸ್ಟಿವಲ್‌ನಲ್ಲಿ ಮೋದಿ, ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ಕಂಪನಿಯ ಕಣ್ಗಾವಲು ಡ್ರೋನ್ ಹಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಲು ಮೋದಿ, ಕಣ್ಗಾವಲು ಡ್ರೋನ್ ಹಾರಿಸಿದರು. ಈ ಡ್ರೋನ್ ಬೆಂಗಳೂರಿನ ಸ್ಟಾರ್ಟ್ ಅಪ್ ಕಂಪನಿ ಆ್ಯಸ್ಟರಿಯಾ ಏರೋಸ್ಪೇಸ್ ತಯಾರಿಸಿದೆ.ಈ ಡ್ರೋನ್, ವಿಶ್ವಾಸಾರ್ಹ ಹಾಗೂ ಕಾರ್ಯಕ್ಷಮತೆ ಚಾಲಿತ ಡ್ರೋನ್‌ಗಳಾಗಿವೆ. ಭದ್ರತಾ ವಲಯಗಳಲ್ಲಿ ಹೆಚ್ಚಾಗಳಿ ಬಳಕೆ ಮಾಡಲಾಗುತ್ತದೆ. ಕಣ್ಗಾವಲು ವಹಿಸಲು, ಕಾರ್ಯಕ್ರಮಗಳಲ್ಲಿ ಹಂತ ಹಂತದ ಭದ್ರತೆ ನಿರ್ವಹಿಸಲು ಈ ಡ್ರೋನ್ ಬಳಕೆ ಮಾಡಲಾಗುತ್ತದೆ.

ಡ್ರೋನ್ ಮೂಲಕ ದಿನಸಿ ಮನೆ ಬಾಗಿಲಿಗೆ ತಲುಪಿಸಲಿದೆ ಸ್ವಿಗ್ಗಿ, ಬೆಂಗಳೂರಿನಲ್ಲಿ ನಡೆಯಲಿದೆ ಮೊದಲ ಪ್ರಯೋಗ

ಡ್ರೋನ್ ಫೆಡರೇಶನ್ ಆಫ್ ಇಂಡಿಯಾ ಹಾಗೂ ನಾಗರೀಕಾ ವಿಮಾನಾಯ ಸಚಿವಾಲಯ ಜಂಟಿಯಾಗಿ ಭಾರತ್ ಡ್ರೋನ್ ಮಹೋತ್ಸವ ಆಯೋಜಿಸಿದೆ. ಕಾರ್ಯಕ್ರಮದ ಉದ್ಘಾಟನೆ ವೇಳೆ ಮೋದಿ ಬೆಂಗಳೂರಿನ ಆಸ್ಟರಿಯಾ ಡ್ರೋನ್ ಹಾರಿಸಿ ಚಾಲನೆ ನೀಡಿದ್ದಾರೆ. 

ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿದ ಮೋದಿ, ಭಾರತವನ್ನು ಡ್ರೋನ್ ತಂತ್ರಜ್ಞಾನದ ಕೇಂದ್ರವನ್ನಾಗಿ ಮಾಡಲು ಕೇಂದ್ರ ಸರ್ಕಾರ ಎಲ್ಲಾ ನೆರವು ನೀಡಲಿದೆ ಎಂದರು. ಡ್ರೋನ್ ಉದ್ಯಮಕ್ಕೆ ಕೇಂದ್ರ ಸರ್ಕಾರ ಸಂಪೂರ್ಣ ಬೆಂಬಲ ನೀಡುತ್ತದೆ. ದೇಶದಲ್ಲಿ ಡ್ರೋನ್ ಬಳಕೆಗೆ ಇದ್ದ ಅಡೆ ತಡೆಗಳನ್ನು ನಿವಾರಿಸಿದ್ದೇವೆ. ಇದರಿಂದ ಕೃಷಿ ಕ್ಷೇತ್ರದಲ್ಲೂ ಡ್ರೋನ್ ಬಳಕೆ ಮಾಡಲು ಸಾಧ್ಯವಾಗುತ್ತಿದೆ. ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಂಡರೆ ದೇಶದ ಅಭಿವೃದ್ಧಿಯ ವೇಗ ಮತ್ತಷ್ಟು ಹೆಚ್ಚಾಗಲಿದೆ ಎಂದು ಮೋದಿ ಹೇಳಿದ್ದಾರೆ. 

ಡ್ರೋನ್ ಮಹೋತ್ಸವ ಎರಡು ದಿನಗಳ ಕಾಲ ನಡೆಯಲಿದೆ. ಇದು ದೇಶ ಆಯೋಜಿಸಿದ ಅತೀ ದೊಡ್ಡ ಡ್ರೋನ್ ಮಹೋತ್ಸವವಾಗಿದೆ. ಕಾರ್ಯಕ್ರಮದಲ್ಲಿ ಮೋದಿ ಡ್ರೋನ್‌ಗಳ ಹಾರಾಟದ ಪ್ರಾತ್ಯಕ್ಷಿಕೆ ವೀಕ್ಷಣೆ ಜೊತೆಗೆ, ಕಿಸಾನ್‌ ಡ್ರೋನ್‌ ಪೈಲಟ್‌ಗಳ ಜೊತೆಗೆ ಪ್ರಧಾನಿ ಮಾತುಕತೆ ನಡೆಸಿದ್ದಾರೆ.

ಹರಿಯಾಣದಲ್ಲಿ ಡ್ರೋನ್ ಪೈಲಟ್ ತರಬೇತಿ ಕೇಂದ್ರ!

ಬೆಂಗಳೂರು ಮೂಲದ ಫುಲ್‌ ಸ್ಟಾಕ್‌ ಡ್ರೋನ್‌ ಟೆಕ್ನಾಲಜಿ ಕಂಪನಿ ಆಸ್ಟೆರಿಯಾ ಏರೋಸ್ಪೇಸ್‌ ಲಿಮಿಟೆಡ್‌ ಡ್ರೋನ್ ಫೆಸ್ಟಿವಲ್‌ನಲ್ಲಿ ಭಾಗವಸಿದೆ. ನಾಗರಿಕ ವಿಮಾನಯಾನ ಸಚಿವಾಲಯವು, ಭಾರತೀಯ ಡ್ರೋನ್‌ ಫೆಡರೇಶನ್ (ಡಿಎಫ್‌ಐ) ಈವೆಂಟ್‌ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿರುವ ಡ್ರೋನ್‌ ಫೆಸ್ಟಿವಲ್‌ 2022 ನವದೆಹಲಿಯ ಪ್ರಗತಿ ಮೈದಾನದಲ್ಲಿ ಮೇ 27 ರಿಂದ ನಡೆಯುತ್ತಿದ್ದು, ಮೇ 28 ಕ್ಕೆ ಮುಕ್ತಾಯವಾಗಲಿದೆ.

ಪ್ರಧಾನಿ ನರೇಂದ್ರ ಮೋದಿ ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ್ದಾರೆ ಮತ್ತು ಈ ದಶಕದ ಅಂತ್ಯದೊಳಗೆ ಭಾರತವನ್ನು ಜಾಗತಿಕ ಡ್ರೋನ್‌ ಹಬ್ ಆಗಿಸುವ ಮಹತ್ವಾಕಾಂಕ್ಷೆಯನ್ನು ಹಂಚಿಕೊಂಡಿದ್ದಾರೆ. ಈ ಮಹತ್ವಾಕಾಂಕ್ಷೆಯನ್ನು ಪೂರೈಸುವುದಕ್ಕೆ ಭಾರತ ಸರ್ಕಾರ ಎಲ್ಲ ಬೆಂಬಲವನ್ನೂ ನೀಡುತ್ತದೆ ಎಂದು ಅವರು ಹೇಳಿದ್ದಾರೆ. ಆಸ್ಟೆರಿಯಾದ ಒಂದು ಡ್ರೋನ್ ಅನ್ನೂ ಪ್ರಧಾನಿ ನರೇಂದ್ರ ಮೋದಿ ಹಾರಿಸಿದ್ದಾರೆ ಮತ್ತು ಆಸ್ಟೆರಿಯಾ ಬೂತ್‌ಗೆ ಭೇಟಿ ನೀಡಿ, ಕಂಪನಿಯ ಡ್ರೋನ್‌ಗಳ ಬಗ್ಗೆ ತಿಳಿದುಕೊಂಡರು.

ಆಸ್ಟೆರಿಯಾ ಏರೋಸ್ಪೇಸ್‌ ಲಿಮಿಟೆಡ್‌ನ ಸಹಸಂಸ್ಥಾಪಕ ನಿಹಾರ್‌ ವರ್ತಕ್‌ ಹೇಳುವಂತೆ “ನಮ್ಮ ಸುಧಾರಿತ ಡ್ರೋನ್‌ಗಳು ಮತ್ತು ಸ್ಕೈಡೆಕ್‌, ನಮ್ಮ ಡ್ರೋನ್ ಆಪರೇಶನ್‌ ಪ್ಲಾಟ್‌ಫಾರಂ ಅನ್ನು ನೀತಿ ನಿರೂಪಕರಿಗೆ ಮತ್ತು ಸರ್ಕಾರ ಹಾಗೂ ಸಂಸ್ಥೆಗಳಿಗೆ ಪ್ರದರ್ಶಿಸಲು ಈ ಕಾರ್ಯಕ್ರಮ ಉತ್ತಮ ಅವಕಾಶವಾಗಿತ್ತು. ಹತ್ತು ವರ್ಷಗಳ ಹಿಂದೆ, ಭಾರತದಲ್ಲಿ ಡ್ರೋನ್‌ ವಲಯಕ್ಕೆ ಕಾಲಿಟ್ಟ ಕೆಲವೇ ಸಂಸ್ಥೆಗಳಲ್ಲಿ ನಾವೂ ಒಬ್ಬರಾಗಿದ್ದೆವು ಮತ್ತು ಅಂದಿನಿಂದ ಬೇಡಿಕೆ ವಿಚಾರದಲ್ಲಿ ಮಹತ್ವದ ಸುಧಾರಣೆಯಾಗಿದೆ. ಹಲವು ಉದ್ಯಮಗಳಲ್ಲಿ ಈ ತಂತ್ರಜ್ಞಾನ ಬಳಕೆಯಾಗುತ್ತಿದೆ” ಎಂದಿದ್ದಾರೆ.

ಕಾರ್ಯಕ್ರಮದಲ್ಲಿ ಆಸ್ಟೆರಿಯಾ ತನ್ನ ಗಟ್ಟಿಮುಟ್ಟಾದ, ವಿಶ್ವಾಸಾರ್ಹ ಮತ್ತು ಕಾರ್ಯಕ್ಷಮತೆ ಆಧರಿತ ಡ್ರೋನ್‌ಗಳನ್ನು ಪ್ರದರ್ಶಿಸಿದೆ. ಭದ್ರತೆ, ನಿಗಾವಣೆ, ಮೇಲ್ವಿಚಾರಣೆ ಮತ್ತು ತಪಾಸಣೆಗಾಗಿ ಈ ವಿವಿಧ ಉದ್ಯಮಗಳಲ್ಲಿ ಈ ಡ್ರೋನ್‌ಗಳನ್ನು ಬಳಸಬಹುದಾಗಿದೆ. ತನ್ನ ಕ್ಲೌಡ್ ಆಧರಿತ ಡ್ರೋನ್ ಆಪರೇಶನ್‌ಗಳ ಪ್ಲಾಟ್‌ಫಾರಂ ಸ್ಕೈಡೆಕ್‌ ಅನ್ನೂ ಪ್ರದರ್ಶಿಸಿದೆ. ಡ್ರೋನ್‌ ಅನ್ನು ಸೇವೆಯಾಗಿ ಬಳಸಲು ಈ ಪ್ಲಾಟ್‌ಫಾರಂ ಅನುವು ಮಾಡುತ್ತದೆ.

Latest Videos
Follow Us:
Download App:
  • android
  • ios