ಜಗತ್ತಿನ ಮೊದಲ ಡಬಲ್‌ ಡೆಕ್ಕರ್‌ ಕಂಟೇನರ್‌ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಚಂಡೀಗಢ(ಜ.08): ಹರಾರ‍ಯಣದ ಅಟೇಲಿ ಮತ್ತು ರಾಜಸ್ಥಾನದ ಕಿಶಾನ್‌ಗಢಕ್ಕೆ ಸಂಪರ್ಕಿಸುವ ವಿದ್ಯುತ್‌ ಚಾಲಿತ 1.5 ಕಿ.ಮೀ ಉದ್ದದ ವಿಶ್ವದ ಮೊದಲ ಡಬಲ್‌ ಡೆಕ್ಕರ್‌ ಕಂಟೇನರ್‌ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಚಾಲನೆ ನೀಡಿದರು. 

ಅಲ್ಲದೆ ಹರಾರ‍ಯಣದ ರೇವಾರಿ ಮತ್ತು ರಾಜಸ್ಥಾನದ ಮಾದರ್‌ಗೆ ಸಂಪರ್ಕ ಒದಗಿಸುವ ಸರಕು ಸಾಗಣೆ ರೈಲು(ಡಬ್ಲುಡಿಎಫ್‌ಸಿ) ಮಾರ್ಗಕ್ಕೂ ಮೋದಿ ಅವರು ವಿಡಿಯೋ ಕಾನ್ಫರೆನ್ಸ್‌ ಮೂಲಕ ಉದ್ಘಾಟನೆ ನೆರವೇರಿಸಿದ್ದಾರೆ. 

Scroll to load tweet…
Scroll to load tweet…

ವಾಷಿಂಗ್ಟನ್ ಹಿಂಸಾಚಾರದಿಂದ ದುಃಖವಾಯ್ತು, ಶಾಂತಿಯುತವಾಗಿ ಅಧಿಕಾರ ಹಸ್ತಾಂತರವಾಗಲಿ: ಮೋದಿ!

ಬಳಿಕ ಮಾತನಾಡಿದ ಪ್ರಧಾನಿ ಮೋದಿ ಅವರು, ‘ದೇಶದ ಮೂಲಭೂತ ಸೌಕರ್ಯಗಳನ್ನು ಆಧುನೀಕರಿಸುವ ಮಹಾಯಜ್ಞವು ಇಂದು ಅತೀ ವೇಗ ಪಡೆದಿದೆ. ಕಳೆದ 5-6 ವರ್ಷಗಳ ಕಠಿಣ ಪರಿಶ್ರಮದಿಂದಾಗಿ ಈ ಮಹತ್ವದ ಯೋಜನೆಯು ಸಾಕಾರಗೊಂಡಿದೆ. ಫ್ರೈಟ್‌ ಕಾರಿಡಾರ್‌ ಯೋಜನೆಯು 21ನೇ ಶತಮಾನದಲ್ಲಿ ಭಾರತದ ಗೇಮ್‌ಚೇಂಜರ್‌ ಆಗಲಿದೆ’ ಎಂದರು.