ಎಂ.ವಿ ಗಂಗಾ ವಿಲಾಸ್ ಹಡಗು 62 ಮೀಟರ್ ಉದ್ದ, 12 ಮೀಟರ್ ಅಗಲದ ಮೂಲಕ ಸಾಗುತ್ತದೆ. ಇದು ಮೂರು ಡೆಕ್‌ಗಳನ್ನು ಹೊಂದಿದ್ದು, 36 ಪ್ರವಾಸಿಗರ ಸಾಮರ್ಥ್ಯದೊಂದಿಗೆ 18 ಸೂಟ್‌ಗಳನ್ನೂ ಹೊಂದಿದೆ.

ಪ್ರಧಾನಿ ಮೋದಿ ಶುಕ್ರವಾರ ವಾರಾಣಸಿಯಲ್ಲಿ ಎಂ.ವಿ. ಗಂಗಾ ವಿಲಾಸ ವಿಹಾರವನ್ನು ಉದ್ಘಾಟನೆ ಮಾಡಿದ್ದಾರೆ. ಐಷಾರಾಮಿ ಸೌಲಭ್ಯಗಳನ್ನು ಒಳಗೊಂಡಿರುವ ಜಗತ್ತಿನ ಅತಿ ಉದ್ದದ ಎಂ.ವಿ. ವಿಲಾಸ್‌ ಗಂಗಾ ವಿಲಾಸ್‌ ಕ್ರೂಸ್‌ ವಾರಾಣಸಿಯಿಂದ ಬಾಮಗ್ಲಾ ಮೂಲಕ ಅಸ್ಸಾಂನ ದಿಬ್ರುಗಢ ತಲುಪಲಿದೆ. ಅಲ್ಲದೆ, ಬೆಳಗ್ಗೆ 10.30 ಕ್ಕೆ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಟೆಂಟ್‌ ಸಿಟಿಯನ್ನು ಉದ್ಘಾಟನೆ ಮಾಡಿದ್ದಾರೆ. ಹಾಗೂ, 1000 ಕೋಟಿ ರೂ. ಗಿಂತ ಹೆಚ್ಚಿನ ಮೊತ್ತದ ಇತರ ಹಲವು ಒಳನಾಡು ಜಲಮಾರ್ಗ ಯೋಜನೆಗಳಿಗೆ ಸಹ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಪ್ರಧಾನಿ ಮೋದಿ ಜತೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸಹ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು.

ಉತ್ತರ ಪ್ರದೇಶದ (Uttar Pradesh) ವಾರಾಣಸಿಯಿಂದ (Varanasi) ಗಂಗಾ ವಿಲಾಸ್ (Ganga Vilas) ಕ್ರೂಸ್‌ ತನ್ನ ಪ್ರಯಾಣವನ್ನು ಪ್ರಾರಂಭಿಸುತ್ತದೆ ಮತ್ತು 51 ದಿನಗಳಲ್ಲಿ ಸುಮಾರು 3,200 ಕಿಮೀ ಪ್ರಯಾಣಿಸಿ ಬಾಂಗ್ಲಾದೇಶದ (Bangladesh) ಮೂಲಕ ಅಸ್ಸಾಂನ ದಿಬ್ರುಗಢವನ್ನು ತಲುಪುತ್ತದೆ. ಭಾರತ ಮತ್ತು ಬಾಂಗ್ಲಾದೇಶದ 27 ನದಿ ವ್ಯವಸ್ಥೆಗಳ ಮೂಲಕ ಗಂಗಾ ವಿಲಾಸ್‌ ಸಾಗುತ್ತದೆ. ಎಂವಿ ಗಂಗಾ ವಿಲಾಸ್ 3 ಡೆಕ್‌ಗಳನ್ನು ಹೊಂದಿದ್ದು, ಜತೆಗೆ 36 ಪ್ರವಾಸಿಗರ (Tourists) ಸಾಮರ್ಥ್ಯದೊಂದಿಗೆ 18 ಸೂಟ್‌ ಸೇರಿ ಎಲ್ಲಾ ಐಷಾರಾಮಿ ಸೌಕರ್ಯಗಳನ್ನು (Luxurious Comfort)ಹೊಂದಿದೆ. ಮೊದಲ ಪ್ರಯಾಣದಲ್ಲಿ ಸ್ವಿಟ್ಜರ್ಲೆಂಡ್‌ನಿಂದ (Switzerland) 32 ಪ್ರವಾಸಿಗರು ಸಂಪೂರ್ಣ ಪ್ರಯಾಣಕ್ಕೆ ಹಣ ನೀಡಿದ್ದಾರೆ.

ಇದನ್ನು ಓದಿ: ವಿಶ್ವದ ಅತಿ ಉದ್ದದ ಐಷಾರಾಮಿ ನದಿಯಾನ ಗಂಗಾ ವಿಲಾಸ..! ಕ್ರೂಸ್‌ ಹಡಗು ಯಾನದ ವೈಶಿಷ್ಟ್ಯ ಹೀಗಿದೆ..

ಈ ಮಧ್ಯೆ, ಉದ್ಘಾಟನಾ ಕಾರ್ಯಕ್ರಮಕ್ಕೂ ಮುನ್ನ ಮಾತನಾಡಿದ್ದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌, ಕಳೆದ 3 ದಿನಗಳಿಂದ ಗಂಗಾ ವಿಲಾಸ್‌ ಕ್ರೂಸ್‌ನಲ್ಲಿ ಪ್ರಯಾಣಿಸುವ ಪ್ರವಾಸಿಗರು ವಾರಾಣಸಿ ಹಾಗೂ ಸುತ್ತಮುತ್ತಲಿನ ಸ್ಥಳಗಳಿಗೆ ಭೇಟಿ ನೀಡಿದ್ದು, ಇಲ್ಲಿನ ಸಂಸ್ಕೃತಿಯನ್ನು ಕಣ್ಣಾರೆ ಕಂಡಿದ್ದಾರೆ. ಇನ್ನು, ಪ್ರಧಾನಿ ಇಂದು 5 ಜೆಟ್ಟಿಗಳನ್ನು ಉದ್ಘಾಟಿಸಲಿದ್ದಾರೆ. ಕಾಶಿ ಇಂದು ಹೊಸ ಗುರುತಿನೊಂದಿಗೆ ಮುನ್ನಡೆಯುತ್ತಿದೆ ಎಂದು ಹೇಳಿದ್ದಾರೆ ಎಂದು ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ. 

51 ದಿನಗಳ ಕ್ರೂಸ್ ಭಾರತ ಮತ್ತು ಬಾಂಗ್ಲಾದೇಶದ ಐದು ರಾಜ್ಯಗಳಲ್ಲಿ 3,200 ಕಿ.ಮೀ.ಗೂ ಹೆಚ್ಚು ದೂರವನ್ನು ಕ್ರಮಿಸಲಿದೆ. ಈ ಪ್ರಯಾಣವು ಪ್ರವಾಸಿಗರಿಗೆ ಅದ್ಭುತ ಸಮುದ್ರಯಾನ ಕೈಗೊಳ್ಳಲು ಮತ್ತು ಭಾರತ ಹಾಗೂ ಬಾಂಗ್ಲಾದೇಶದ ಕಲೆ, ಸಂಸ್ಕೃತಿ, ಇತಿಹಾಸ ಮತ್ತು ಆಧ್ಯಾತ್ಮಿಕತೆಯಲ್ಲಿ ಪಾಲ್ಗೊಳ್ಳಲು ಅವಕಾಶವನ್ನು ನೀಡುತ್ತದೆ.

ಇದನ್ನೂ ಓದಿ: ವಿಶ್ವದ ಅತೀ ಉದ್ದದ ನದಿ ಹಡಗು ಯಾನಕ್ಕೆ ಜ.13ಕ್ಕೆ ಪ್ರಧಾನಿ ಚಾಲನೆ

ರಿವರ್ ಕ್ರೂಸ್ ಪ್ರವಾಸೋದ್ಯಮವನ್ನು ಉತ್ತೇಜಿಸುವ ಪಿಎಂ ಮೋದಿಯವರ ಪ್ರಯತ್ನಕ್ಕೆ ಅನುಗುಣವಾಗಿ, ಈ ಸೇವೆ ಪ್ರಾರಂಭವಾಗಿದ್ದು, ಈ ಮೂಲಕ ರಿವರ್ ಕ್ರೂಸ್‌ನ ದೊಡ್ಡ ಬಳಕೆಯಾಗದ ಸಾಮರ್ಥ್ಯವು ಈಗ ತೆರೆದಿದೆ ಮತ್ತು ಇದು ಭಾರತಕ್ಕೆ ನದಿ ಕ್ರೂಸ್ ಪ್ರವಾಸೋದ್ಯಮದ ಹೊಸ ಯುಗಕ್ಕೆ ನಾಂದಿ ಹಾಡುತ್ತದೆ. ವಿಶ್ವ ಪರಂಪರೆಯ ತಾಣಗಳು, ರಾಷ್ಟ್ರೀಯ ಉದ್ಯಾನವನಗಳು, ನದಿ ಘಟ್ಟಗಳು ಮತ್ತು ಬಿಹಾರದ ಪಾಟ್ನಾ, ಜಾರ್ಖಂಡ್‌ನ ಸಾಹಿಬ್‌ಗಂಜ್, ಪಶ್ಚಿಮ ಬಂಗಾಳದ ಕೋಲ್ಕತ್ತಾ, ಬಾಂಗ್ಲಾದೇಶದ ಢಾಕಾ ಮತ್ತು ಅಸ್ಸಾಂನ ಗುವಾಹಟಿಯಂತಹ ಪ್ರಮುಖ ನಗರಗಳು ಸೇರಿದಂತೆ 50 ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಯೋಜಿಸಲಾಗಿದೆ. ವರದಿಗಳ ಪ್ರಕಾರ, ಪ್ರತಿ ವ್ಯಕ್ತಿಗೆ ಒಂದು ರಾತ್ರಿ ಪ್ರವಾಸಕ್ಕೆ ಸುಮಾರು 25,000 ರೂ. ಇದೆ. 

ಎಂ.ವಿ ಗಂಗಾ ವಿಲಾಸ್ ಹಡಗು 62 ಮೀಟರ್ ಉದ್ದ, 12 ಮೀಟರ್ ಅಗಲದ ಮೂಲಕ ಆರಾಮವಾಗಿ ಸಾಗುತ್ತದೆ. ಇದು ಮೂರು ಡೆಕ್‌ಗಳನ್ನು ಹೊಂದಿದ್ದು, 36 ಪ್ರವಾಸಿಗರ ಸಾಮರ್ಥ್ಯದೊಂದಿಗೆ 18 ಸೂಟ್‌ಗಳನ್ನೂ ಹೊಂದಿದೆ. ಪ್ರವಾಸಿಗರಿಗೆ ಸ್ಮರಣೀಯ ಮತ್ತು ಐಷಾರಾಮಿ ಅನುಭವವನ್ನು ಒದಗಿಸಲು ಎಲ್ಲಾ ಸೌಕರ್ಯಗಳನ್ನು ಹೊಂದಿದೆ. ಎಂ.ವಿ ಗಂಗಾ ವಿಲಾಸ್‌ನ ಮೊದಲ ಪ್ರಯಾಣಕ್ಕೆ ಸ್ವಿಟ್ಜರ್ಲೆಂಡ್‌ನ 32 ಪ್ರವಾಸಿಗರು ಈಗಾಗಲೇ ಬುಕ್‌ ಮಾಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಇದನ್ನು ಓದಿ: ನಾಳೆ ವಿಶ್ವದ ಅತಿ ಉದ್ದದ ನದಿ ವಿಹಾರ ಎಂವಿ ಗಂಗಾ ವಿಲಾಸ್‌ಗೆ ಪ್ರಧಾನಿ ಮೋದಿ ಚಾಲನೆ: ಐಷಾರಾಮಿ ಕ್ರೂಸ್‌ ಒಳನೋಟ ಹೀಗಿದೆ..

ದಿಬ್ರುಗಢ್‌ಗೆ MV ಗಂಗಾ ವಿಲಾಸ್ ಕ್ರೂಸ್‌ ಮಾರ್ಚ್ 1, 2023 ಕ್ಕೆ ತೆರಳಲಿದೆ ಎಂದು ತಿಳಿದುಬಂದಿದೆ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌, ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ, ಕೇಂದ್ರ ಬಂದರು, ಶಿಪ್ಪಿಂಗ್ ಹಾಗೂ ಜಲಮಾರ್ಗ ಸಚಿವ ಸರ್ಬಾನಂದ ಸೋನೋವಾಲ್‌ ಹಾಗೂ ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌ ಸಹ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.