ನವದೆಹಲಿ(ಜು.09): ಜಮ್ಮು ಕಾಶ್ಮೀರದ ಬಿಜೆಪಿ ಮುಖಂಡ ವಾಸಿಂ ಬಾರಿ ಕೊಲೆಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ವಾಸಿಂ ಬಾರಿ ಕೊಲೆ ಬಗ್ಗೆ ಪ್ರಧಾನಿ ಫೋನ್ ಕಾಲ್ ಮುಖಾಂತರ ವಿಚಾರಿಸಿದ್ದಾರೆ. ವಾಸಿಂ ಕುಟುಂಬಕ್ಕೆ ಅವರು ಸಾಂತ್ವನ ಹೇಳಿದ್ದಾರೆ ಎಂದು ರಾಜ್ಯ ಗೃಹ ಸಚಿವ ಡಾ. ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.

ಗುರಿ ಮಾಡಿ ಕ್ರೂರವಾಗಿ ದಾಳಿ ಮಾಡಲಾಗುತ್ತಿದೆ. ಬಂಡೀಪುರದ ಬಿಜೆಪಿ ಮುಖಂಡ ವಾಸಿಂ ಬಾರಿ ಹಾಗೂ ಅವರ ಸಹೋದರ ಮತ್ತು ತಂದೆ ಇನ್ನಿಲ್ಲ ಎಂದು ಅವರು ಹೇಳಿದ್ದಾರೆ.

ಜಮ್ಮು ಕಾಶ್ಮೀರ BJP ಮುಖಂಡರ ಕೊಲೆ ಪ್ರೀ ಪ್ಲಾನ್..? 10 ಜನ ಪೊಲೀಸರ ಬಂಧನ

ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ವಾಸಿಂ ಕುಟುಂಬ ಇನ್ನಿಲ್ಲವಾಗಿರುವುದುಬಿಜೆಪಿಗೆ ದೊಡ್ಡ ನಷ್ಟ. ಅವರ ತ್ಯಾಗ ವ್ಯರ್ಥವಾಗುವುದಿಲ್ಲ ಎಂದಿದ್ದಾರೆ. ಜಮ್ಮು ಕಾಶ್ಮೀರದ ಪ್ರದೇಶಿಕ ಕಾಂಗ್ರೆಸ್ ಸಮಿತಿ ಬಿಜೆಪಿ ಮುಖಂಡರ ಮೇಲಿನ ದಾಳಿಯನ್ನು ತೀವ್ರವಾಗಿ ಖಂಡಿಸಿದೆ. ಕೊಲೆ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದಿರುವ ಕಾಂಗ್ರೆಸ್ ಘಟನೆಯ ಬಗ್ಗೆ  ಸಂತಾಪ ವ್ಯಕ್ತಪಡಿಸಿದೆ.

ಗಾಳಿಯಲ್ಲಿ ಕೊರೋನಾ..! ಮನೆಯಲ್ಲೇ ಇದ್ರೂ ಹರಡುತ್ತಾ ಸೋಂಕು..? ವಿಶ್ವಸಂಸ್ಥೆ ಹೇಳಿದ್ದಿಷ್ಟು..!

ಜಮ್ಮು ಕಾಶ್ಮೀರದ ಬಿಜೆಪಿ ಮುಖಂಡ ಶೇಖ್ ವಾಸಿಂ ಬಾರಿ ಹಾಗೂ ಅವರ ಕುಟುಂಬದ ಇನ್ನಿಬ್ಬರು ಕುಟುಂಬ ಸದಸ್ಯರು ಕೊಲೆಯಾದ ಬೆನ್ನಲ್ಲೇ ಅವರ ಭದ್ರತೆ ಕರ್ತವ್ಯಕ್ಕೆ ನಿಯೋಜಿತರಾಗಿದ್ದ 10 ಜನ ಪೊಲೀಸರನ್ನು ಬಂಧಿಸಲಾಗಿದೆ.