ಪುನೀತ್‌ ರಾಜ್‌ಕುಮಾರ್‌ ಅವರ ಗಂಧದ ಗುಡಿ ಟ್ರೈಲರ್‌ಗೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪುನೀತ್‌ ಅವರ ಎನರ್ಜಿಗೂ ಮೋದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. 

​ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಡಾ. ಪುನೀತ್ ರಾಜ್‌ಕುಮಾರ್ ಪ್ರೀತಿಯಿಂದ ಮಾಡಿರುವ ಕೊನೆಯ ಸಿನಿಮಾ ಗಂಧದ ಗುಡಿ ಟ್ರೈಲರ್ ಇಂದು ಅದ್ಧೂರಿಯಾಗಿ ಬಿಡುಗಡೆ ಮಾಡಲಾಗಿದೆ. ಅಭಿಮಾನಿಗಳ ಸಮ್ಮುಖದಲ್ಲಿ ಬಿಡುಗಡೆಯಾದ ಈ ಟ್ರೈಲರ್‌ಗೆ ಸ್ವತ: ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಪ್ಪು ಪ್ರಪಂಚದಾದ್ಯಂತ ಲಕ್ಷಾಂತರ ಜನರ ಹೃದಯದಲ್ಲಿ ಇನ್ನೂ ಜೀವಂತವಾಗಿದ್ದಾರೆ. ಅವರು ತೇಜಸ್ಸಿನ ವ್ಯಕ್ತಿಯಾಗಿದ್ದರು, ಎನರ್ಜಿಯನ್ನು ತುಂಬಿಕೊಂಡಿದ್ದರು ಮತ್ತು ಅಪ್ರತಿಮ ಪ್ರತಿಭೆಯ ಆಶೀರ್ವಾದ ಹೊಂದಿದ್ದರು. ಗಂಧದಗುಡಿ ಪ್ರಕೃತಿ ಮಾತೆಗೆ, ಕರ್ನಾಟಕದ ನೈಸರ್ಗಿಕ ಸೌಂದರ್ಯ ಮತ್ತು ಪರಿಸರ ಸಂರಕ್ಷಣೆಗೆ ನೀಡಿದ ಕೊಡುಗೆಯಾಗಿದೆ. ಈ ಪ್ರಯತ್ನಕ್ಕೆ ನನ್ನ ಶುಭಾಶಯಗಳು ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ ಮಾಡಿದ್ದಾರೆ.

ಗಂಧದ ಗುಡಿ ಟ್ರೈಲರ್‌ ಬಿಡುಗಡೆಯ ನಂತರ ಪ್ರಧಾನಿ ಮೋದಿ ಅವರಿಗೆ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಟ್ವೀಟ್‌ ಮಾಡಿದ್ದರು. ಈ ಟ್ವೀಟ್‌ಗೆ ಪ್ರಧಾನಿ ಮೋದಿ ಪ್ರತ್ಯುತ್ತರ ನೀಡಿದ್ದಾರೆ. ಹಾಗೂ, ಗಂಧದ ಗುಡಿ ಟ್ರೈಲರ್‌ಗೆ ಹಾಗೂ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಇದನ್ನು ಓದಿ: Gandhada Gudi Trailer: ಪುನೀತ್ ರಾಜ್‌ಕುಮಾರ್ ಗಂಧದ ಗುಡಿ ಟ್ರೈಲರ್, ಹೇಗಿದೆ ನೋಡಿ

Scroll to load tweet…

ನಮಸ್ತೆ, ಪ್ರಧಾನಿ ಮೋದಿ ಅವರೇ, ಅಪ್ಪು ಅವರ ಹೃದಯಕ್ಕೆ ಹತ್ತಿರವಾದ ಪ್ರಾಜೆಕ್ಟ್ #ಗಂಧದಗುಡಿ ಚಿತ್ರದ ಟ್ರೈಲರ್ ಬಿಡುಗಡೆ ಮಾಡುತ್ತಿರುವ ನಮಗೆ ಇಂದು ಭಾವನಾತ್ಮಕ ದಿನ. ಅಪ್ಪು ಯಾವಾಗಲೂ ನಿಮ್ಮೊಂದಿಗಿನ ಸಂವಾದಗಳನ್ನು ಸ್ಮರಿಸುತ್ತಿದ್ದರು ಮತ್ತು ನಿಮ್ಮೊಂದಿಗೆ ವೈಯಕ್ತಿಕವಾಗಿ ಹಂಚಿಕೊಳ್ಳಲು ಇಷ್ಟಪಡುತ್ತಿದ್ದರು ಎಂದು ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಟ್ವೀಟ್‌ ಮಾಡಿದ್ದರು. 

ಅಲ್ಲದೆ, ಅಪ್ಪು ಬಗ್ಗೆ ಪ್ರಧಾನಿ ಮೋದಿ ಅವರು ಈ ಹಿಂದೆ ಮಾಡಿದ್ದ ಟ್ವೀಟ್ ಅನ್ನು ಸಹ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ರೀಟ್ವೀಟ್‌ ಮಾಡಿದ್ದಾರೆ. ಹಾಗೂ, ಪ್ರಧಾನಿ ಮೋದಿ ಅವರೊಂದಿಗೆ ಪುನೀತ್‌ ರಾಜ್‌ಕುಮಾರ್ ಹಾಗೂ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರು ಜತೆಯಾಗಿ ತೆಗೆಸಿಕೊಂಡಿರುವ ಫೋಟೋವನ್ನೂ ಹಾಕಿಕೊಂಡಿದ್ದಾರೆ.

Scroll to load tweet…

ಈ ಮಧ್ಯೆ, ಸಿಎಂ ಬೊಮ್ಮಾಯಿಗೂ ಸಹ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಟ್ವೀಟ್‌ ಮಾಡಿದ್ದು, ಟ್ರೈಲರ್‌ ನೋಡುವಂತೆ ಮನಿ ಮಾಡಿಕೊಂಡಿದ್ದಾರೆ. ಹಾಗೂ, ಟ್ರೈಲರ್‌ ಲಿಂಕ್ ಅನ್ನೂ ಸಹ ಕಳಿಸಿದ್ದಾರೆ. 

ಇದನ್ನೂ ಓದಿ: PUNEETH RAJKUMAR ಓಹ್ ಜುರಾಸಿಕ್‌ ಪಾರ್ಕ್‌; ಗಂಧದ ಗುಡಿಯಲ್ಲಿ ಅಪ್ಪು ಮಾತುಗಳು ವೈರಲ್!

ಕನ್ನಡ ಚಿತ್ರರಂಗದ ಮುತ್ತು ರತ್ನ ಪವರ್ ಸ್ಟಾರ್ ಡಾ. ಪುನೀತ್ ರಾಜ್‌ಕುಮಾರ್ ತುಂಬಾ ಇಷ್ಟ ಪಟ್ಟು ಪ್ರೀತಿಯಿಂದ ಮಾಡಿರುವ ಕೊನೆಯ ಸಿನಿಮಾ ಗಂಧದ ಗುಡಿ ಟ್ರೈಲರ್ ಇಂದು ಅದ್ಧೂರಿಯಾಗಿ ಅಭಿಮಾನಿಗಳ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಯ್ತು. ಬೆಂಗಳೂರಿನ ನರ್ತಕಿ ಚಿತ್ರಮಂದಿರಗಳಲ್ಲಿ ಡಾ. ರಾಜ್‌ಕುಮಾರ್ ಕುಟುಂಬದ ಪ್ರತಿಯೊಬ್ಬ ಸದಸ್ಯರು ಅಭಿಮಾನಿಗಳ ಜೊತೆ ಸೇರಿಕೊಂಡು ರಿಲೀಸ್ ಮಾಡಿದ್ದಾರೆ. 

ಅಪ್ಪು ಸ್ಥಾಪಿಸಿದ ಸಂಸ್ಥೆ ಪಿಆರ್‌ಕೆ ಗಂಧದ ಗುಡಿ ನಿರ್ಮಾಣ ಉಸ್ತುವಾರಿ ಹೊತ್ತಿಕೊಂಡಿದೆ. ಇಂದು ಬೆಳಗ್ಗೆ ಅಭಿಮಾನಿಗಳ ಜೊತೆ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿದೆ, ಹಾಗೂ 10 ಗಂಟೆಗೆ ಪಿಆರ್‌ಕೆ ಯೂಟ್ಯೂಬ್‌ ಚಾನಲ್‌ನಲ್ಲಿ ಬಿಡುಗಡೆ ಆಗಿದೆ. ಅಮೋಘವರ್ಷ ನಿರ್ದೇಶನದ ಈ ಚಿತ್ರವು ರಾಜ್ಯದ ವನ್ಯ-ಜೀವಿ ಸಂಪತ್ತು ಹಾಗೂ ಪ್ರಕೃತಿ ಸೌಂದರ್ಯವನ್ನು ತೆರೆ ಮೇಲೆ ತರಲಿದೆ. ಸದ್ಯಕ್ಕೆ ಚಿತ್ರದ ಹೊಸ ಪೋಸ್ಟರ್‌ ಜತೆಗೆ ಟ್ರೈಲರ್‌ ಬಿಡುಗಡೆ ದಿನಾಂಕ ಘೋಷಣೆ ಮಾಡಲಾಗಿದ್ದು, ಪುನೀತ್‌ ಅವರ ಅಭಿಮಾನಿಗಳಲ್ಲಿ ಸಂಭ್ರಮ ಹೆಚ್ಚಾಗಿದೆ. ​

ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಸಂಸ್ಥೆ ಮತ್ತು mudsipper ಜಂಟಿ ನಿರ್ಮಾಣದಲ್ಲಿ ಮೂಡಿ ಬಂದಿರುವ ಟ್ರೈಲರ್ ನೋಡಿ ಅಭಿಮಾನಿಗಳು ಭಾವುಕರಾಗಿದ್ದಾರೆ. ಕಾಡನ್ನು ಇಷ್ಟೊಂದು ಅದ್ಭುತವಾಗಿ ತೋರಿಸಬಹುದು ಎಂದು ಎಂದೂ ಅಂದುಕೊಂಡಿರಲಲ್ಲ ಎನ್ನುತ್ತಾರೆ ಸಿನಿ ರಸಿಕರು. ಕಾಡಿನ ಜನರು ಹೇಗೆ ಜೀವನ ಮಾಡುತ್ತಾರೆ, ಯಾವ ರೀತಿ ಪ್ರಾಣಿ ಪಕ್ಷಿಗಳನ್ನು ದಿನ ನೋಡುತ್ತಾರೆ ಎಂದು ಮಕ್ಕಳ ರೀತಿ ಪದೇ ಪದೇ ಪ್ರಶ್ನೆ ಕೇಳಿದ್ದಾರೆ. ಅಪ್ಪು innocenceಗೆ ಎಲ್ಲರೂ ಮನಸೋತಿದ್ದಾರೆ.