Asianet Suvarna News Asianet Suvarna News

ರಾಜಕೀಯ ಸಂಸ್ಕೃತಿ ಬದಲಾಯಿಸಿದ್ದು ಮೋದಿ ಹೆಗ್ಗಳಿಕೆ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಬಣ್ಣನೆ

ಪ್ರಧಾನಿ ನರೇಂದ್ರ ಮೋದಿ ರಾಜಕೀಯ ಸಂಸ್ಕೃತಿಯನ್ನು ಬದಲಾಯಿಸಿದ್ದು, ಸ್ಪಂದಿಸುವ ಹಾಗೂ ಸಕ್ರಿಯ ಸರ್ಕಾರವನ್ನು ಪರಿಚಯಿಸಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ.

PM Narenda Modi has changed culture of politics Says JP Nadda gvd
Author
Bangalore, First Published May 31, 2022, 3:00 AM IST

ನವದೆಹಲಿ (ಮೇ.31): ಪ್ರಧಾನಿ ನರೇಂದ್ರ ಮೋದಿ ರಾಜಕೀಯ ಸಂಸ್ಕೃತಿಯನ್ನು ಬದಲಾಯಿಸಿದ್ದು, ಸ್ಪಂದಿಸುವ ಹಾಗೂ ಸಕ್ರಿಯ ಸರ್ಕಾರವನ್ನು ಪರಿಚಯಿಸಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ. ಮೋದಿ ಸರ್ಕಾರದ 8 ವರ್ಷದ ಆಚರಣೆಯ ಹಿನ್ನೆಲೆಯಲ್ಲಿ ಆಯೋಜಿಸಿದ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ‘ಸೇವೆ, ಉತ್ತಮ ಆಡಳಿತ ಹಾಗೂ ಬಡವರ ಕಲ್ಯಾಣ ಮೋದಿ ಸರ್ಕಾರದ ಆತ್ಮವಾಗಿದೆ’ ಎಂದು ಹೇಳಿದ್ದಾರೆ.

ಸರ್ಕಾರ ವಿವಿಧ ಯೋಜನೆಗಳನ್ನು ಜನರಿಗೆ ನೇರವಾಗಿ ಮುಟ್ಟಿಸುವುದು ಮೋದಿ ಸರ್ಕಾರಕ್ಕೆ ಪ್ರಮುಖ ಸವಾಲಾಗಿತ್ತು. ಪ್ರಧಾನಿ ಸ್ವತಃ ಕಾಳಜಿ ವಹಿಸಿ ಯೋಜನೆಗಳು ಜನರ ಮನೆ ಬಾಗಿಲಿಗೆ ಮುಟ್ಟುವಂತೆ ಮಾಡಿದ್ದಾರೆ ಎಂದರು. ಈ ವೇಳೆ ನಡ್ಡಾ ‘ಸೇವೆ, ಉತ್ತಮ ಆಡಳಿತ ಹಾಗೂ ಬಡವರ ಕಲ್ಯಾಣದ 8 ವರ್ಷ’ ಎಂಬ ವಿಶೇಷ ಅಭಿಯಾನಕ್ಕೆ ನಮೋ ಆ್ಯಪ್‌ ಮುಖಾಂತರ ಚಾಲನೆ ನೀಡಿದ್ದಾರೆ. ಅಲ್ಲದೇ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಧರ್ಮೇಂದ್ರ ಪ್ರಧಾನ್‌ ಹಾಗೂ ಅನುರಾಗ್‌ ಠಾಕೂರ್‌ ಅವರೊಂದಿಗೆ ಮೋದಿ ಸರ್ಕಾರದ 8 ನೇ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ‘ಮೋದಿ: ಆಧುನಿಕ ಭಾರತದ ಶಿಲ್ಪಿ’ ಎಂಬ ಹಾಡನ್ನು ಬಿಡುಗಡೆಗೊಳಿಸಿದ್ದಾರೆ.

Mann Ki Baat: ಮೈಸೂರಿನ ಅಂಧ ವಿದ್ಯಾರ್ಥಿನಿಗೆ ಪ್ರಧಾನಿ ಮೋದಿ ಶಹಬ್ಬಾಸ್‌ಗಿರಿ!

ಮೋದಿ 2.0 ಸರ್ಕಾರಕ್ಕೆ ಮೂರರ ಹರ್ಷ: 2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಅಭೂತಪೂರ್ವ ಜಯ ದೊರಕಿಸಿಕೊಡುವುದರ ಮೂಲಕ 2ನೇ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ಮೋದಿ ಸರ್ಕಾರಕ್ಕೆ ಸೋಮವಾರ 3 ವರ್ಷ ತುಂಬಲಿದೆ. ಮೋದಿ ಪ್ರಧಾನಿ ಆಗಿ ಮೇ 26ಕ್ಕೆ 8 ವರ್ಷಗಳು ಸಂದಿವೆ. 

ಈ ಎಲ್ಲಾ ಹಿನ್ನೆಲೆಯಲ್ಲಿ ಸೋಮವಾರದಿಂದ 15 ದಿನಗಳ ಕಾಲ ಸಾರ್ವಜನಿಕ ಸಂಪರ್ಕ ಅಭಿಯಾನದ ಮೂಲಕ ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳ ಕುರಿತ ಮಾಹಿತಿಯನ್ನು ಜನರಿಗೆ ತಲುಪಿಸುವ ಕಾರ್ಯಕ್ರಮವನ್ನು ಭಾರತೀಯ ಜನತಾ ಪಕ್ಷ ಹಮ್ಮಿಕೊಂಡಿದೆ. ಮತ್ತೊಂದೆಡೆ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರು, ‘ಪಿಎಂ ಕೇ​ರ್‍ಸ್ ಫಾರ್‌ ಚಿಲ್ಡ್ರನ್‌’ ನಿಧಿಯ ಮೂಲಕ ಕೋವಿಡ್‌ಗೆ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ವಿವಿಧ ಯೋಜನೆಗಳ ಲಾಭವನ್ನು ಹಸ್ತಾಂತರಿಸಲಿದ್ದಾರೆ.

ಸಂಭ್ರಮಾಚರಣೆ: ಮೋದಿ ಸರ್ಕಾರದ ವರ್ಷಾಚರಣೆ ಈ ಹಿನ್ನೆಲೆಯಲ್ಲಿ 15 ದಿನಗಳ ಕಾಲ ದೇಶಾದ್ಯಂತ ಸಂಭ್ರಮಾಚರಣೆ ನಡೆಸಲು ಬಿಜೆಪಿ ಉದ್ದೇಶಿಸಿದೆ. ಈ ಸಂಭ್ರಮಾಚರಣೆ ಭಾಗವಾಗಿ ಮೇ 30ರಿಂದ ಜೂ.14ರವರೆಗೆ ಪಕ್ಷ ಸಾರ್ವಜನಿಕ ಸಂಪರ್ಕ ಅಭಿಯಾನ ಹಮ್ಮಿಕೊಂಡಿದೆ. ಈ ಅವಧಿಯಲ್ಲಿ ಕೇಂದ್ರದ ಎಲ್ಲ ಸಚಿವರು, ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳು, ಸಚಿವರು ಹಾಗೂ ಜನಪ್ರತಿನಿಧಿಗಳು ಬೃಹತ್‌ ಸಾರ್ವಜನಿಕ ಸಂಪರ್ಕ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ. 

ನೀವು ನಾಚಿಕೆಯಿಂದ ತಲೆತಗ್ಗಿಸುವಂಥ ಒಂದೇ ಒಂದು ಕಾರಣವನ್ನೂ ಈ 8 ವರ್ಷದಲ್ಲಿ ನೀಡಿಲ್ಲ!

ಈ ನಾಯಕರು 2ನೇ ಅವಧಿಯ 3 ವರ್ಷ ಮತ್ತು ಮೊದಲ 5 ವರ್ಷದಲ್ಲಿ ಮೋದಿ ಸರ್ಕಾರ ಜಾರಿಗೊಳಿಸಿದ ಪ್ರಮುಖ ಯೋಜನೆಗಳು ಮತ್ತು ಅದರಿಂದ ಜನ ಸಮುದಾಯಕ್ಕೆ ಆದ ಲಾಭಗಳನ್ನು ವಿವರಿಸಲಿದ್ದಾರೆ. ಅದರಲ್ಲೂ ಪ್ರಮುಖವಾಗಿ ಸೇವೆ, ಉತ್ತಮ ಆಡಳಿತ ಮತ್ತು ಬಡವರ ಕಲ್ಯಾಣದ ಧ್ಯೇಯವನ್ನಿಟ್ಟುಕೊಂಡು ಅಭಿಯಾನಕ್ಕೆ ಪಕ್ಷ ಉದ್ದೇಶಿಸಿದೆ. ಇದಲ್ಲದೆ 15 ದಿನಗಳ ಅವಧಿಯಲ್ಲಿ ರೈತರು, ಮಹಿಳೆಯರು, ಪರಿಶಿಷ್ಟಜಾತಿ, ಪರಿಶಿಷ್ಟಪಂಗಡ, ಇತರೆ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರನ್ನು ಭೇಟಿ ಮಾಡಲು ಒಂದೊಂದು ದಿನವನ್ನು ಮೀಸಲಿಡಲಾಗಿದೆ.

Follow Us:
Download App:
  • android
  • ios