ಕೊರೋನಾತಂಕ ನಡುವೆ ಪಿಎಂ ಮೋದಿ ಸರ್ಕಾರದ ಸಾಧನೆ ಪಟ್ಟಿ ಮಾಡಿದ ರಾಹುಲ್| ರಾಜಸ್ಥಾನ ಸರ್ಕಾರ ಉರುಳಿಸಲು ಯತ್ನಿಸಿದ ಆರೋಪ| ವೈರಲ್ ಆಗಿದೆ ರಾಹುಲ್ ಟ್ವೀಟ್

ನವದೆಹಲಿ(ಜು.21): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ಮೋದಿ ವಿರುದ್ಧ ಮತ್ತೆ ಕಿಡಿ ಕಾರಿದ್ದಾರೆ. ಈ ಬಾರಿ ಪಿಎಂ ಮೋದಿ ಸರ್ಕಾರ ಕಳೆದ ಆರು ತಿಂಗಳಲ್ಲಿ ಮಾಡಿದ ಆರು ಸಾಧನೆಗಳ ಪಟ್ಟಿಯನ್ನು ಟ್ವೀಟ್ ಮಾಡುವ ಮೂಲಕ ವಿನೂತನವಾಗಿ ರಾಹುಲ್ ಪಿಎಂ ಮೋದಿ ಕಾಲೆಳೆದಿದ್ದಾರೆ. 

ಹೌದು ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಒಟ್ಟು 11 ಲಕ್ಷ ದಾಟಿದೆ. ಹೀಗಿರುವಾಗ ಪ್ರಧಾನಿ ಮೋದಿ ಈ ಕೊರೋನಾತಂಕದ ಸಮಯದಲ್ಲಿ ಮಾಡಿದ ಸಾಧನೆಗಳು ಎಂದು ಆರು ಅಂಶಗಳ ಪಟ್ಟಿಯನ್ನು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಇದರಲ್ಲಿ ರಾಜಸ್ಥಾನ ಸರ್ಕಾರ ಉರುಳಿಸಲು ಯತ್ನಿಸಿದ ಆರೋಪವನ್ನೂ ಮಾಡಲಾಗಿದೆ.

Scroll to load tweet…

ರಾಹುಲ್ ಮಾಡಿದ ಪಟ್ಟಿಯಲ್ಲಿರುವ ಅಂಶಗಳು

ಫೆಬ್ರವರಿ- ನಮಸ್ತೇ ಟ್ರಂಪ್

ಮಾರ್ಚ್- ಮಧ್ಯಪ್ರದೇಶದಲ್ಲಿ ಸರ್ಕಾರ ಉರುಳಿಸಿದರು

ಏಪ್ರಿಲ್: ಮೇಣದ ಬತ್ತಿ ಹಚ್ಚಿಸಿದ್ರು

ಮೇ: ಸರ್ಕಾರದ ಆರನೇ ವಾರ್ಷಿಕೋತ್ಸವ

ಜೂನ್: ಬಿಹಾರದಲ್ಲಿ ವರ್ಚುವಲ್ Rally

ಜುಲೈ: ರಾಜಸ್ಥಾನ ಸರ್ಕಾರ ಉರುಳಿಸುವ ಯತ್ನ

ಇದೇ ಕಾರಣದಿಂದ ದೇಶ ಕೊರೋನಾ ಸಮರದಲ್ಲಿ 'ಆತ್ಮನಿರ್ಭರ'ವಾಗಿದೆ ಎಂದೂ ಟ್ವೀಟ್‌ನ ಅಂತ್ಯದಲ್ಲಿ ಬರೆದಿದ್ದಾರೆ.

ದೇಶದಲ್ಲಿ ಕೊರೋನಾ ಸೋಂಕು ಕಳೆದ ಕೆಲ ದಿನಗಳಿಂದ ಗಣನೀಯವಾಗಿ ಏರುತ್ತಿದೆ. ಸೋಂಕಿತರ ಒಟ್ಟು ಸಂಖ್ಯೆ 11 ಲಕ್ಷ ದಾಟಿದೆ. ಸೋಮವಾರ ಜಾರಿಗೊಳಿಸಲಾದ ಅಂಕಿ ಅಂಶಗಳ ಅನ್ವಯ ಕಳೆದ 24 ಗಂಟೆಯಲ್ಲಿ 40,425 ದಾಖಲೆಯ ಕೊರೋನಾ ಪ್ರಕರಣಗಳು ದಾಖಲಾಗಿವೆ. ಇದದು ಒಂದು ದಿನದಲ್ಲಿ ದಾಖಲಾದ ಅತಿ ಹೆಚ್ಚು ಪ್ರಕರಣಗಳಾಗಿವೆ. ಇನ್ನು 681 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 27,497ಕ್ಕೇರಿದೆ.