Asianet Suvarna News Asianet Suvarna News

ಪ್ರಧಾನಿ ಮೋದಿಗೆ ವಿಶೇಷ ಸೀರೆ ಗಿಫ್ಟ್ ನೀಡಿದ ಪದ್ಮಶ್ರೀ ಪುರಸ್ಕೃತ!‌

*ಪ್ರಧಾನಿ ಮೋದಿಗೆ ವಿಶೇಷ ಸೀರೆ ಗಿಫ್ಟ!
*ಟ್ವೀಟ್‌ ಮಾಡಿ ಮೋದಿ ಧನ್ಯವಾದ
*ಹೆಸರಾಂತ ನೇಕಾರಾದ ಬಿರೇನ್ ಕುಮಾರ್ ಬಸಾಕ್
*2,000 ಮಹಿಳೆಯರಿಗೆ ಉದ್ಯೋಗ ನೀಡಿರುವ ಬಸಾಕ್‌

PM Modi was gifted special saree by Padmashri Awardee Biren Kumar Basak in Delhi mnj
Author
Bengaluru, First Published Nov 13, 2021, 8:15 PM IST

ನವದೆಹಲಿ(ನ.13): ಪದ್ಮಶ್ರೀ ಪುರಸ್ಕೃತ (Padma Shri Awardee) ಮತ್ತು ಬಂಗಾಳದ ಪೌರಾಣಿಕ ನೇಕಾರಾದ ಬಿರೇನ್ ಕುಮಾರ್ ಬಸಾಕ್ (Biren Kumar Basak) ಅವರು  ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷ ಸೀರೆಯನ್ನು (saree) ನೀಡಿದ್ದಾರೆ. ಸೀರೆಯಲ್ಲಿ ಪ್ರಧಾನಿಯವರು ನಾಗರಿಕರನ್ನು ಉದ್ದೇಶಿಸಿ ಮಾತನಾಡುತ್ತಿರುವ ಚಿತ್ರವಿದ್ದು ಪ್ರಧಾನಿ ಮೋದಿ (Narendra Modi) ತಮ್ಮ ಅಧಿಕೃತ ಖಾತೆಯಿಂದ ಈ ಬಗ್ಗೆ ಟ್ವೀಟ್‌ ಮಾಡಿದ್ದಾರೆ.

ಈ ವಿಶೇಷ ಉಡುಗೊರೆಯನ್ನು ಸ್ವೀಕರಿಸಿದ ಪ್ರಧಾನಿ, ಬಸಾಕ್ ಅವರಿಗೆ ಟ್ವೀಟರ್‌ (Twitter) ಮೂಲಕ ಧನ್ಯವಾದ ಅರ್ಪಿಸದ್ದಾರೆ. "ಶ್ರೀ ಬಿರೇನ್ ಕುಮಾರ್ ಬಸಕ್ ಪಶ್ಚಿಮ ಬಂಗಾಳದ (West Bengal) ನಾಡಿಯಾಕ್ಕೆ ಸೇರಿದವರು. ಅವರು ಹೆಸರಾಂತ ನೇಕಾರರು (Waiver) , ಅವರು ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಯ ವಿವಿಧ ಅಂಶಗಳನ್ನು ತಮ್ಮ ಸೀರೆಯಲ್ಲಿ ಚಿತ್ರಿಸುತ್ತಾರೆ. ಪದ್ಮ ಪ್ರಶಸ್ತಿ ಪುರಸ್ಕೃತರೊಂದಿಗಿನ ಸಂವಾದದ ಸಮಯದಲ್ಲಿ ಅವರು ನನಗೆ ಈ ಸೀರೆಯನ್ನು ನೀಡಿದ್ದಾರೆ, ನನಗೆ ಇದು ಖುಷಿ ನೀಡುವ ವಿಚಾರ." ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ.

 

 

ಸೀರೆಗಳ ಕಟ್ಟುಗಳನ್ನು ಹೊತ್ತು ಬೀದಿಗಳಲ್ಲಿ ಬಾಗಿಲು ಬಡಿಯುತ್ತಿದ್ದೆವು!

1970 ರ ದಶಕದಲ್ಲಿ, ಬಿರೇನ್ ಕುಮಾರ್ ಬಸಾಕ್ ತನ್ನ ಸಹೋದರನೊಂದಿಗೆ ಸೀರೆಗಳನ್ನು ಮಾರಾಟ ಮಾಡಲು ಕೋಲ್ಕತ್ತಾದಲ್ಲಿ (Kolkata) ಮನೆ-ಮನೆಗೆ ಹೋಗುತ್ತಿದ್ದರು. ಈಗ ಸುಮಾರು 25 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿರುವ ಬಸಕ್ ತಮ್ಮ ಹಳೆಯ ಜೀವನವನ್ನು ಮರೆತಿಲ್ಲ. 1 ರೂಪಾಯಿಯಿಂದ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದ್ದ ಬಸಾಕ ಅವರ ಬಳಿ ಈಗ ಕನಿಷ್ಠ 5,000 ನೇಕಾರರು ಕೆಲಸ ಮಾಡುತ್ತಾರೆ.

ಉಗ್ರ ದಾಳಿಗೆ ಕರ್ನಲ್ ಕುಟುಂಬ, 4 ಯೋಧರು ಹುತಾತ್ಮ, ಘಟನೆ ಖಂಡಿಸಿದ ಮೋದಿ!

ಅವರು ಪ್ರತಿದಿನ ಬೆಳಿಗ್ಗೆ ಕೋಲ್ಕತ್ತಾಗೆ ರೈಲಿನಲ್ಲಿ ಹೋಗುತಿದ್ದರು ಎಂದು ನೆನಪಿಸಿಕೊಂಡ ಬಸಾಕ್ "ನಾವು ಪ್ರತಿದಿನ ಬೆಳಗ್ಗೆ ಕೋಲ್ಕತ್ತಾಗೆ ರೈಲಿನಲ್ಲಿ ಹೋಗುತ್ತಿದ್ದೆವು. ನಗರದಲ್ಲಿ ನಾನು ಮತ್ತು ನನ್ನ ಸಹೋದರ ಸೀರೆಗಳ ಕಟ್ಟುಗಳನ್ನು ಹೊತ್ತು ಬೀದಿಗಳಲ್ಲಿ ಬಾಗಿಲು ಬಡಿಯುತ್ತಿದ್ದೆವು. ಕ್ರಮೇಣ ನಾವು ದೊಡ್ಡ ಗ್ರಾಹಕರನ್ನು ಪಡೆದಿದ್ದೇವೆ. ಆ ಕಾಲದಲ್ಲಿ ಸೀರೆಗಳ ಬೆಲೆ 15 ರಿಂದ 35 ರೂ. ಇತ್ತು" ಎಂದು ಹೇಳಿದ್ದಾರೆ.

2,000 ಮಹಿಳೆಯರಿಗೆ ಜೀವನೋಪಾಯ!

ಪ್ರಸ್ತುತ, ನಾನು ಸುಮಾರು 5,000 ಕುಶಲಕರ್ಮಿಗಳೊಂದಿಗೆ ಕೆಲಸ ಮಾಡುತ್ತಿದ್ದೇನೆ, ಅದರಲ್ಲಿ ಸುಮಾರು 2,000 ಮಹಿಳೆಯರಿದ್ದಾರೆ (Women) ಮತ್ತು ಅವರು ತಮ್ಮ ಜೀವನೋಪಾಯಕ್ಕೆ ದಾರಿ ಕಂಡುಕೊಂಡಿದ್ದಾರೆ ಹಾಗೂ ಸ್ವಾವಲಂಬಿಗಳಾಗಿದ್ದಾರೆ. ಈ ಪ್ರಶಸ್ತಿಯ ನಿಜವಾದ ಪುರಸ್ಕೃತರು ಈ ಕುಶಲಕರ್ಮಿಗಳು. ಹಾಗಾಗಿ ನಾನು ಅವರಿಗೂ ಧನ್ಯವಾದ ಹೇಳುತ್ತೇನೆ ಎಂದು ಖಾಸಗಿ ಪತ್ರಿಕೆಯೊಂದಕ್ಕೆ ಬಿರೇನ್ ಕುಮಾರ್ ಬಸಕ್ ಹೇಳಿದ್ದಾರೆ.

ಪದ್ಮ ಪ್ರಶಸ್ತಿ ಪ್ರಧಾನ ಸಮಾರಂಭ: ಹರೇಕಳ ಹಾಜಬ್ಬ, ಕಂಬಾರ, ತುಳಸಿ ಗೌಡಗೆ ಗೌರವ!

ಅವರ ಕೆಲವು ವಿಶೇಷ ಗ್ರಾಹಕರಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee), ಸೌರವ್ ಗಂಗೂಲಿ (Sourav Ganguly), ಆಶಾ ಭೋಂಸ್ಲೆ (Asha Bhosle) ಮತ್ತು ಲತಾ ಮಂಗೇಶ್ಕರ್ (Lata Mangeshkar) ಸೇರಿದ್ದಾರೆ. ಸತ್ಯಜಿತ್ ರೇ ಮತ್ತು ಹೇಮಂತ ಮುಖೋಪಾಧ್ಯಾಯ ಕೂಡ ಅವರ ಬಳಿ ಖರೀದಿ ಮಾಡಿದ್ದಾರೆ. 2013 ರಲ್ಲಿ, ಅವರು ತಮ್ಮ ಕೌಶಲ್ಯ ಮತ್ತು ಕರಕುಶಲತೆಗೆ ರಾಷ್ಟ್ರೀಯ ಪ್ರಶಸ್ತಿಯನ್ನು (National Award) ಪಡೆದರು. ಕೈಮಗ್ಗ ನೇಯ್ದ ಸೀರೆಯಲ್ಲಿ ರಾಮಾಯಣವನ್ನು (Ramayana) ಚಿತ್ರಿಸಿದ್ದಕ್ಕಾಗಿ ಅವರು ಯುಕೆ ಮೂಲದ ವರ್ಲ್ಡ್ ರೆಕಾರ್ಡ್ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಅನ್ನು ಸಹ ಹೊಂದಿದ್ದಾರೆ

Follow Us:
Download App:
  • android
  • ios