ನವದೆಹಲಿ(ಡಿ.20): ಪಿಎಂ ಮೋದಿ ಭಾನುವಾರ ಬೆಳಗ್ಗೆ ಅಚಾನಕ್ಕಾಗಿ ದೆಹಲಿಯ ಗುರುದ್ವಾರ ರಕಾಬ್‌ಗಂಜ್ ಸಾಹಿಬ್ ತಲುಪಿದ್ದಾರೆ. ಹೀಗಿರುವಾಗ ಸಾಮಾನ್ಯ ಜನರನ್ನು ತಡೆಯಲು ಟ್ರಾಫಿಕ್ ಕೂಡಾ ತಡೆದಿಲ್ಲ, ವಿಐಪಿ ಮೂವ್ಮೆಂಟ್ ಕೂಡಾ ಇರಲಿಲ್ಲ. 

ಗುರುದ್ವಾರ ತಲುಪಿದ ಪಿಎಂ ಮೋದಿ ತಲೆ ಬಾಗಿದ್ದಾರೆ. ಅವರು ಸರ್ವೋಚ್ಛ ಬಲಿದಾನ ನೀಡಿದ ತೇಗ್‌ಬಹದ್ದೂರ್‌ಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಈ ಗುರುದ್ವಾರ ದೆಹಲಿಯಲ್ಲಿರುವ ಸಂಸತ್‌ ಭವನದ ಬಳಿ ಇದೆ.

 15-20 ನಿಮಿಷ ಗುರುದ್ವಾರದಲ್ಲಿ ಕಳೆದ ಮೋದಿ

ದೇಶದಲ್ಲಿ ಜಾರಿಗೊಳಿಸಿರುವ ಕೃಷಿ ಕಾನೂನು ಕಳೆದ ಇಪ್ಪತ್ತೈದು ದಿನಗಳಿಂದ ಆಂದೋಲನ ನಡೆಯುತ್ತಿದೆ. ಆಂದೋಲನದಲ್ಲಿ ಪಂಜಾಬ್ ಹಾಗೂ ಹರ್ಯಾಣದ ಬಹುತೇಕ ರೈತರು ಶಾಮೀಲಾಗಿದ್ದಾರೆ. ಈ ಆಂದೋಲನದಲ್ಲಿ ಭಾಗಿಯಾದವರ್ಲಿ ಸಿಖ್ಖರ ಸಂಖ್ಯೆ ಜಾಸ್ತಿ ಇದೆ. ಹೀಗಿರುವಾಗ ಬೆಳ್ಳಂ ಬೆಳಗ್ಗೆ ಪಿಎಂ ಮೋದಿ ಗುರುದ್ವಾರಕ್ಕೆ ತೆರಳಿರುವುದು ರೈತರಿಗೂ ಸಂದೇಶ ನೀಡಿದಂತಿದೆ. ಮೋದಿ ಇಲ್ಲಿ ಸುಮಾರು 15-20 ನಿಮಿಷ ಕಳೆದಿದ್ದಾರೆ. 

ಇದಾದ ಬಳಿಕ ಮಾತನಾಡಿದ ಪಿಎಂ ಮೋದಿ ಇಂದು ಬೆಳಗ್ಗೆ ನಾನು ಐತಿಹಾಸಿಕ ಗುರುದ್ವಾರ ರಕಾಬ್ ಗಂಜ್ ಸಾಹಿಬ್‌ನಲ್ಲಿ ಪ್ರಾರ್ಥನೆ ಸಲ್ಲಿಸಿದೆ. ಇಲ್ಲಿ ಶ್ರೀ ಗುರು ತೇಗ್ ಬಹದ್ದೂರ್‌ರವರ ಅಂತಿಮ ಸಂಸ್ಕಾರ ನಡೆದಿತ್ತು. ನಾನಿಂದು ಧನ್ಯವಾಗಿದ್ದೇನೆ. ನಾನು ಅವರ ದಯೆಯಿಂದ ಪ್ರೇರಣೆಗೊಂಡಿದ್ದೇನೆ ಎಂದಿದ್ದಾರೆ.