- ಊರಿನ ಎಲ್ಲ 340 ಮನೆಗಳಿಗೂ ಸೌರ ವಿದ್ಯುತ್‌- 500 ಕಿ.ವ್ಯಾ. ಸಾಮರ್ಥ್ಯದ ಸೋಲಾರ್‌ ಪ್ಯಾನೆಲ್‌ ಸ್ಥಾಪನೆ- ಪ್ರಧಾನಿ ಮೋದಿಯಿಂದ ಸೋಲಾರ್‌ ಘಟಕದ ಉದ್ಘಾಟನೆ 

ಪಲ್ಲಿ (ಜಮ್ಮು-ಕಾಶ್ಮೀರ)(ಏ.25): ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಜಮ್ಮು-ಕಾಶ್ಮೀರದ ಗಡಿ ಜಿಲ್ಲೆ ಸಾಂಬಾದ ಪಲ್ಲಿಯಲ್ಲಿ 500 ಕಿಲೋ ವ್ಯಾಟ್‌ ಸಾಮರ್ಥ್ಯದ ಸೌರಶಕ್ತಿ ಘಟಕವನ್ನು ಉದ್ಘಾಟಿಸಿದರು. ಈ ಮೂಲಕ ಪಾಲಿ ‘ದೇಶದ ಮೊದಲ ಇಂಗಾಲ ತಟಸ್ಥ ಪಂಚಾಯಿತಿ’ ಎಂಬ ಹಿರಿಮೆಗೆ ಈ ಗ್ರಾಮ ಪಾತ್ರವಾಗಿದೆ.

ಕೇಂದ್ರ ಸರ್ಕಾರದ ಗ್ರಾಮ ಸ್ವರಾಜ್ಯ ಕಾರ‍್ಯಕ್ರಮ ಯೋಜನೆಯಡಿಯಲ್ಲಿ ಪಾಲಿಯಲ್ಲಿ 6,408 ಚದರ ಕಿ.ಮೀ ವ್ಯಾಪ್ತಿಯಲ್ಲಿ 1,500 ಸೋಲಾರ್‌ ಘಟಕಗಳನ್ನು ಸ್ಥಾಪಿಸಲಾಗಿದೆ. ಇದರಿಂದ ಎಲ್ಲ 340 ಮನೆಗಳಿಗೆ ಅಗತ್ಯವಿರುವ 2000 ಯುನಿಟ್‌ ಸೌರ ವಿದ್ಯುತ್‌ ಅನ್ನು ಸ್ಥಳೀಯ ಪವರ್‌ಗ್ರಿಡ್‌ ಮೂಲಕ ಒದಗಿಸಲಾಗುತ್ತದೆ. ಇದಕ್ಕಾಗಿ 2.75 ಕೋಟಿ ವೆಚ್ಚ ಮಾಡಲಾಗಿದೆ. ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗ್ರಾಮದಲ್ಲಿ ಸೌರ ವಿದ್ಯುತ್‌ ಮಾತ್ರವಲ್ಲದೆ ಸೌರ ಒಲೆ, ಸೌರ ಕುಕ್ಕರ್‌, ಸೌರ ಬಲ್‌್ಬಗಳನ್ನು ಬಳಸಲಾಗುತ್ತಿದೆ. ಶೀಘ್ರ ಗ್ರಾಮದ ಎಲ್ಲ ಕೃಷಿ ಪಂಪ್‌ಸೆಟ್‌ಗಳೂ ಸೌರಚಾಲಿತವಾಗಲಿವೆ.

ಪಂಚಾಯತ್ ಆಗಲಿ, ಪಾರ್ಲಿಮೆಂಟ್ ಆಗಲಿ ಯಾವ ಕೆಲಸವೂ ಚಿಕ್ಕದಲ್ಲ!

ಜನರ ಉದ್ಗಾರ, ಕರತಾಡನದ ನಡುವೆ ಪ್ರಧಾನಿ ಮೋದಿ ಕೇವಲ 3 ವಾರಗಳಲ್ಲಿ ನಿರ್ಮಾಣವಾದ ಈ ಸೋಲಾರ್‌ ಘಟಕವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ‘ಇಂಗಾಲ ತಟಸ್ಥ ಗ್ರಾಮ ಎಂಬ ಹಿರಿಮೆಗೆ ಪಾತ್ರವಾಗುವ ಮೂಲಕ ದೇಶದ ಸಾಧನೆಗೆ ಪಾಲಿ ದಾರಿದೀಪವಾಗಿದೆ. ಯೋಜನೆಗೆ ಪಾಲಿಯ ಜನರು ನೆರವಾಗಿದ್ದಾರೆ. ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕರಿಗೆ ಆಹಾರ ನೀಡಿದ್ದಾರೆ’ ಎಂದು ಶ್ಲಾಘಿಸಿದರು.

ಪಾಲಿ ಗ್ರಾಮದ ಜನರು ಪ್ರಧಾನಿ ಭೇಟಿಯನ್ನು ‘ಕೆಂಪು ಪತ್ರದ ದಿನ’ ಎಂದು ವರ್ಣಿಸಿದ್ದಾರೆ. ಪ್ರಧಾನಿ ಭೇಟಿಯೊಂದಿಗೆ ಗ್ರಾಮವು ಭಾರತದ ಮೊದಲ ಇಂಗಾಲ ತಟಸ್ಥ ಗ್ರಾಮ ಎಂಬ ಪಟ್ಟಪಡೆದಿದೆ. ಇದಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ತಿಳಿಸುತ್ತೇವೆ ಎಂದಿದ್ದಾರೆ.

ವಿವಿಧ ಯೋಜನೆಗಳಿಗೆ ಮೋದಿ ಚಾಲನೆ
ಪ್ರಧಾನಿ ನರೇಂದ್ರ ಮೋದಿ, ಭಾನುವಾರ ಕಣಿವೆ ರಾಜ್ಯದಲ್ಲಿ ಒಟ್ಟಾರೆ 20000 ಕೋಟಿ ರು.ಮೌಲ್ಯದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು, ಜೊತೆಗೆ ಕೆಲವು ಯೋಜನೆಗಳಿಗೆ ಚಾಲನೆ ನೀಡಿದರು.

ಆಯೋಗ ತನಿಖೆಗೆ ಒತ್ತಾಯಿಸಿ ಕಾಶ್ಮೀರಿ ಪಂಡಿತ್ ಸಮುದಾಯ ಧರಣಿ, ಮೋದಿಗೆ ಮನವಿ

ಜಮ್ಮು ಮತ್ತು ಕಾಶ್ಮೀರದ ನಡುವೆ ಸರ್ವಋುತು ಸಂಪರ್ಕ ಕಲ್ಪಿಸುವ 8.45 ಕಿ.ಮೀ ಉದ್ದದ ಬನಿಹಾಲ್‌-ಖ್ವಾಜಿಗುಂಡ್‌ ರಸ್ತೆ ಸುರಂಗಕ್ಕೆ ಚಾಲನೆ ನೀಡಿದರು. ಸುರಂಗ ಆರಂಭವಾದ ಬಳಿಕ ಎರಡೂ ನಗರಗಳ ನಡುವಿನ ಅಂತರ 16 ಕಿ.ಮೀನಷ್ಟುಇಳಿಕೆಯಾಗಲಿದ್ದು, ಪ್ರಯಾಣದ ಅವಧಿ ಒಂದೂವರೆ ಗಂಟೆಯಷ್ಟುಕಡಿಮೆಯಾಗಲಿದೆ. ಜೊತೆಗೆ ಅಗ್ಗದ ದರದಲ್ಲಿ ಗುಣಮಟ್ಟದ ಔಷಧ ವಿತರಿಸುವ 100 ಜನೌಷಧಿ ಕೇಂದ್ರಗಳಿಗೆ ಚಾಲನೆ ನೀಡಿದರು.

ಇದಲ್ಲದೆ 7500 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗುವ ದೆಹಲಿ-ಅಮೃತಸರ-ಕಟ್ರಾ ಎಕ್ಸ್‌ಪ್ರೆಸ್‌ ವೇಗೆ ಮೋದಿ ಶಂಕುಸ್ಥಾಪನೆ ನೆರವೇರಿಸಿದರು. ಇದಲ್ಲದೆ 5300 ಕೋಟಿ ರು.ವೆಚ್ಚದ ರಟ್ಟಲ್‌ ಮತ್ತು 4500 ಕೋಟಿ ರು.ವೆಚ್ಚದ ಖಾರ್‌ ಜಲವಿದ್ಯುತ್‌ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಜೊತೆಗೆ ಜನರಿಗೆ ಅವರ ಭೂಮಿಯ ಮೇಲಿನ ಹಕ್ಕು ಒದಗಿಸುವ ಸ್ವಮಿತ್ರ ಕಾರ್ಡ್‌ಗಳನ್ನು ವಿತರಿಸಿದರು. ಇನ್ನು ನಾನಾ ವಿಭಾಗಗಳಲ್ಲಿ ಪುರಸ್ಕಾರಕ್ಕೆ ಪಾತ್ರರಾದ ದೇಶದ 31 ರಾಜ್ಯಗಳ 332 ವಿಜೇತ ಪಂಚಾಯತ್‌ಗಳಿಗೆ 44.70 ಕೋಟಿ ರು.ನಗದನ್ನು ನೇರವಾಗಿ ವರ್ಗಾಯಿಸಿದರು.