ಪಂಚಾಯತ್ ರಾಜ್ ದಿವಸ್ ಆಚರಣೆಗೆ ಮೋದಿ ಕಾಶ್ಮೀರ ಭೇಟಿ ಕಾಶ್ಮೀರ ಪಂಡಿತರಿಂದ ಧರಣಿ, ಆಯೋಗದ ತನಿಖೆಗೆ ಆಗ್ರಹ ಉಗ್ರರ ಆತಂಕ ಬೆನ್ನಲ್ಲೇ ಭದ್ರತಾ ವ್ಯವಸ್ಥೆ ಮತ್ತಷ್ಟು ಬಿಗಿ
ಕಾಶ್ಮೀರ(ಏ.24): ಪಂಚಾಯತ್ ರಾಜ್ ದಿನ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಜಮ್ಮು ಮತ್ತು ಕಾಶ್ಮೀರ ಭೇಟಿ ಭಾರಿ ಸದ್ದು ಮಾಡುತ್ತಿದೆ. ಮೋದಿ ಭೇಟಿಗೂ ಮೊದಲು ಕಣಿವೆ ರಾಜ್ಯದಲ್ಲಿನ ಉಗ್ರರ ದಾಳಿ ಮತ್ತಷ್ಟು ಆತಂಕ ಹೆಚ್ಚಿಸಿತ್ತು. ಇದೀಗ ಮೋದಿ ಭೇಟಿ ಬಳಿಕ ಕಾಶ್ಮೀರ ಪಂಡಿತ್ ಸಮುದಾಯ ಧರಣಿ ತೀವ್ರಗೊಳಿಸಿದೆ. ಪಂಡಿತರ ನರಮೇಧವನ್ನು ಆಯೋಗದ ಮೂಲಕ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಪಂಡಿತ್ ಸಮುದಾಯ ಧರಣಿ ನಡೆಸುತ್ತಿದೆ.
ಕಾಶ್ಮೀರ ಪಂಡಿತ್ ಸ್ವಯಂಸೇವಕರು(KPV) ಧರಣಿ ನಡೆಸುತ್ತಿದೆ. ಸಂದೀಪ್ ಮವಾ ನೇತೃತ್ವದಲ್ಲಿ ಪಂಡಿತ್ ಸಮುದಾಯದ ಪ್ರಮುಖ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಶ್ರೀನಗರದಲ್ಲಿ ಧರಣಿ ನಡೆಸುತ್ತಿರುವ ಪಂಡಿತ್ ಸಮುದಾಯದ ಪ್ರಮುಖರು, ಪಂಡಿತ್ ನರಮೇಧದ ತನಿಖೆ ನಡೆಸಲು ಆಯೋಗ ರಚಿಸಬೇಕು. ಈ ಆಯೋಗ ರಚನೆ ಆಗುವವರೆಗೂ ಹೋರಾಟ ನಡೆಸುವುದಾಗಿ KPV ಎಚ್ಚರಿಸಿದೆ.
ಪಂಚಾಯತ್ ಆಗಲಿ, ಪಾರ್ಲಿಮೆಂಟ್ ಆಗಲಿ ಯಾವ ಕೆಲಸವೂ ಚಿಕ್ಕದಲ್ಲ!
ಮಲ್ಟಿ ಘಾಟ್‌ನಲ್ಲಿ ಸುಮಾರು 200ಕ್ಕೂ ಅಧಿಕ ಮಂದಿ ಕಳೆದ ನಾಲ್ಕು ದಿನಗಳಿಂದ ಧರಣಿ ನಡೆಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನಲೆಯಲ್ಲಿ ತಮ್ಮ ಧರಣಿ ತೀವ್ರಗೊಳಿಸಿದ್ದರು. ಆಕ್ರಮಣಕಾರರಿಂದ ಹಿಡಿದು ಇಲ್ಲೀವರೆಗೂ ಕಾಶ್ಮೀರ ಪಂಡಿತರ ಮೇಲೆ ದೌರ್ಜನ್ಯ, ಹಿಂಸಾಚಾರ ನಡೆಯುತ್ತಿದೆ. ಸ್ವತಂತ್ರ ಭಾರತದಲ್ಲೂ ನಮಗೆ ನ್ಯಾಯ ಸಿಕ್ಕಿಲ್ಲ. 1900ರಲ್ಲಿ ನಡೆದ ಹತ್ಯಾಕಾಂಡದ ಕುರಿತು ತನಿಖೆ ನಡೆಸಬೇಕು. ಆರೋಪಿಗಳು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಆದರೆ ನಮ್ಮದೇ ನೆಲದಲ್ಲಿ ನಾವು ನಿರಾಶ್ರಿತರಾಗಿದ್ದೇವೆ ಎಂದು KPV ಹೇಳಿದೆ.
ಪ್ರಧಾನಿ ನರೇಂದ್ರ ಮೋದಿ ನಮ್ಮ ಹಕ್ಕಿಗೆ ನ್ಯಾಯಕೊಡಿಸುತ್ತಾರೆ ಅನ್ನೋ ಭರವಸೆ ಇದೆ. ಆದರೆ ಈ ವಿಚಾರದಲ್ಲಿ ವಿಳಂಬ ಸಲ್ಲದು ಎಂದು ಧರಣಿ ನಿರತ ಕಾಶ್ಮೀರ ಪಂಡಿತರು ಹೇಳಿದ್ದಾರೆ.
ಮೋದಿ ಬೇಟಿ
ಎರಡು ವರ್ಷಗಳ ಬಳಿಕ ಪ್ರಧಾನಿ ನರೇಂದ್ರ ಮೋದಿ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. ಪಂಚಾಯತ್ ರಾಜ್ ದಿನ ಅಂಗವಾಗಿ ಮೋದಿ ಭೇಟಿಯಲ್ಲಿ ಬರೋಬ್ಬರಿ 20,000 ಕೋಟಿ ರೂಪಾಯಿ ಅಭಿವೃದ್ಧಿ ಯೋಜನೆಗಳಿಗೂ ಮೋದಿ ಚಾಲನೆ ನೀಡಲಿದ್ದಾರೆ. ಮೋದಿ ಭೇಟಿಗೂ ಕೆಲ ದಿನಗಳ ಮೊದಲೇ ಕಣಿವೆ ರಾಜ್ಯದಲ್ಲಿ ಉಗ್ರರು ಅಶಾಂತಿ ಸೃಷ್ಟಿಸವು ಕಾರ್ಯಕ್ಕೆ ಮುಂದಾಗಿದ್ದರು. ಆದರೆ ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಕ್ಕ ಪ್ರತ್ಯುತ್ತರ ನೀಡಿದೆ.
ಪ್ರಧಾನಿ ಮೋದಿ ಭೇಟಿಯಾಗಿ ತಾಯಿ ಕೊಟ್ಟ ವಿಶೇಷ ಉಡುಗೊರೆ ನೀಡಿದ ಕಾಶ್ಮೀರ್ ಫೈಲ್ಸ್ ನಟ ಅನುಪಮ್ ಖೇರ್
ಪಾಕಿಸ್ತಾನ ಮೂಲದ ಜೈಷ್ ಎ ಮೊಹ್ಮಮದ್ ಸಂಘಟನೆಯ ಓರ್ವ ಉಗ್ರನನ್ನು ಸೇನೆ ಹತ್ಯೆ ಮಾಡಿದೆ. ಬಾರಾಮುಲ್ಲಾ ಸೇರಿದಂತೆ ಹಲೆವೆಡೆ ಕಾರ್ಯಾಚರಣೆ ನಡೆಸಿದ ಸೇನೆ ಉಗ್ರರ ಜೊತೆ ಗುಂಡಿನ ಚಕಮಕಿ ನಡೆಸಿದೆ. ಈ ದಾಳಿಯಲ್ಲಿ ಮೂವರು ಉಗ್ರರು ಹತರಾಗಿದ್ದರೆ, ಐವರು ಯೋಧರು ಗಾಯಗೊಂಡಿದ್ದಾರೆ.
ರಾಷ್ಟ್ರೀಯ ಪಂಚಾಯಿತಿ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಸಾಂಬಾ ಜಿಲ್ಲೆಯ ಪಾಲ್ಲಿ ಪಂಚಾಯತಿ ವ್ಯಾಪ್ತಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.ದೇಶಾದ್ಯಂತ ಇರುವ ಪಂಚಾಯಿತಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ 1 ಲಕ್ಷ ಹೆಚ್ಚು ಜನರು ಭಾಗಿಯಾಗಿದ್ದಾರೆ. 2019ರ ಅಗಸ್ಟ್‌ನಲ್ಲಿ ಜಮ್ಮು ಹಾಗೂ ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂಪಡೆದ ನಂತರ ಮೊದಲನೇ ಬಾರಿ ಮೋದಿ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ.
