* 'ಮನ್ ಕಿ ಬಾತ್' 81ನೇ ಸಂಚಿಕೆಗೆ ಜನಸಾಮಾನ್ಯರ ಸಲಹೆ ಸೂಚನೆ ಆಹ್ವಾನಿಸಿದ ಪ್ರಧಾನಿ* ನಮೋ ಆಪ್ ಮತ್ತು Mygov ಆಪ್ ನಲ್ಲಿ ನೋಂದಾಯಿಸಬಹುದು ನಿಮ್ಮ ಐಡಿಯಾ* ರೇಡಿಯೋ ಕಾರ್ಯಕ್ರಮದಲ್ಲಿ ಉಲ್ಲೇಖವಾಗಬಹುದು ನೀವು ಕೊಟ್ಟ ಪ್ಲಾನ್

ನವದೆಹಲಿ(ಸೆ.16): ಭಾನುವಾರ, 26 ಸೆಪ್ಟೆಂಬರ್ 2021 ರಂದು ಪ್ರಸಾರವಾಗಲಿರುವ 'ಮನ್ ಕಿ ಬಾತ್' 81ನೇ ಸಂಚಿಕೆಗೆ ಸಲಹೆ ಸೂಚನೆಗೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಕರೆ ನೀಡಿದ್ದಾರೆ. 'ಮನ್ ಕಿ ಬಾತ್'ಗೆ ನೀವು ನೀಡಲು ಬಯಸುವ ಈ ಸಲಹೆಗಳನ್ನು ನಮೋ ಆಪ್ ಮತ್ತು Mygov ಆಪ್ ನಲ್ಲಿ ನೋಂದಾಯಿಸಬಹುದು. ಅಲ್ಲದೇ, 1800-11-7800 ಸಂಖ್ಯೆಗೆ ಕರೆ ಮಾಡಿಯೂ ಸಂದೇಶ ಕೊಡಬಹುದು.

ಟ್ವೀಟ್ ನಲ್ಲಿ ಪಿಎಂ ಮೋದಿ ಹೇಳಿದ್ದಿಷ್ಟು 

ಸೆ. 26 ರಂದು ಪ್ರಸಾರವಾಗುವ ಈ ತಿಂಗಳ #MannKiBaat ಗಾಗಿ ಹಲವು ಆಸಕ್ತಿದಾಯಕ ಸಲಹೆಗಳು ಬರುತ್ತಿವೆ. ನಮೋ ಆಪ್ ಮತ್ತು Mygov ಆಪ್‌ನಲ್ಲಿ ನಿಮ್ಮ ಐಡಿಯಾಗಳನ್ನು ಹಂಚಿಕೊಳ್ಳಿ ಅಥವಾ 1800-11-7800 ನಲ್ಲಿ ನಿಮ್ಮ ಸಂದೇಶ ತಲುಪಿಸಿ ಎಂದಿದ್ದಾರೆ.

Scroll to load tweet…

ಏನಿದು ಮನ್‌ ಕೀ ಬಾತ್?

ಮನ್ ಕಿ ಬಾತ್ ಆಲ್ ಇಂಡಿಯಾ ರೇಡಿಯೋ ಮೂಲಕ ಪ್ರಸಾರವಾಗುವ ಕಾರ್ಯಕ್ರಮವಾಗಿದೆ. ಇದರಲ್ಲಿ, ಭಾರತದ ಪ್ರಧಾನಿ ನರೇಂದ್ರ ಮೋದಿ ದೇಶದ ಜನರನ್ನುದ್ದೇಶಿಸಿ ಮಾತನಾಡುತ್ತಾರೆ. 3 ಅಕ್ಟೋಬರ್ 2014 ರಂದು ಈ ಸರಣಿ ರೇಡಿಯೋ ಕಾರ್ಯಕ್ರಮ ಮೊದಲ ಬಾರಿ ಪ್ರಸಾರ ಮಾಡಲಾಯಿತು. 2015 ರ ಜನವರಿಯಲ್ಲಿ, ಅಂದಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಕೂಡ ಮೋದಿಯೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದ್ದರು.