ನವೆಹಲಿ(ಡಿ.09): ಕೊರೋನಾ ವೈರಸ್‌ ವಿರುದ್ಧ ಹೋರಾಟದಲ್ಲಿ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸಿ ಏ.5ರಂದು ರಾತ್ರಿ 9 ಗಂಟೆಗೆ 9 ನಿಮಿಷ ದೀಪವನ್ನು ಬೆಳಗುವಂತೆ ಕರೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ದೀಪವನ್ನು ಬೆಳಗುತ್ತಿರುವ ಫೋಟೋವನ್ನು ಟ್ವೀಟ್‌ ಮಾಡಿದ್ದರು. ಈ ಫೋಟೋ ಈಗ 2020ರಲ್ಲಿ ಅತಿ ಹೆಚ್ಚು ರೀಟ್ವೀಟ್‌ ಮಾಡಲ್ಪಟ್ಟರಾಜಕೀಯ ವ್ಯಕ್ತಿಯ ಪೋಸ್ಟ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

'ದೀಪ ಬೆಳಗಲು ಹೇಳಿದ ಪ್ರಧಾನಿ ಮೋದಿ ಕರೆ ಕ್ರೂರ ಹಾಸ್ಯದಂತಿದೆ'

ಮೋದಿ ಅವರು ದೀಪ ಬೆಳಗುತ್ತಿರುವ ಫೋಸ್ಟ್‌ಗೆ 5.13 ಲಕ್ಷ ಲೈಕ್‌ಗಳು ಬಂದಿದ್ದು, 1.18 ಲಕ್ಷ ಮಂದಿ ಮೋದಿ ಅವರ ಪೋಸ್ಟ್‌ ಅನ್ನು ರೀ ಟ್ವೀಟ್‌ ಮಾಡಿದ್ದಾರೆ ಎಂದು ಟ್ವೀಟರ್‌ ಸಂಸ್ಥೆ ತಿಳಿಸಿದೆ.

ಇದೇ ವೇಳೆ ತಮಿಳು ನಟ ವಿಜಯ್‌ ಅಭಿಮಾನಿಗಳ ಜೊತೆಗಿರುವ ಫೋಟೋವನ್ನು 1.45 ಲಕ್ಷ ಮಂದಿ ರೀಟ್ವೀಟ್‌ ಮಾಡಿದ್ದು, ಈ ವರ್ಷದ ಅಗ್ರ ಟ್ವೀಟ್‌ ಎನಿಸಿಕೊಂಡಿದೆ.