ಪ್ರಧಾನಿ ಮೋದಿ ಆಗಮನ ಹಿನ್ನಲೆ ಗುಜರಾತ್‌ನಲ್ಲಿ ಭರ್ಜರಿ ತಯಾರಿ ಏಪ್ರಿಲ್ 18 ರಿಂದ 20ರ ವರೆಗೆ ಮೋದಿ ಗುಜರಾತ್ ಪ್ರವಾಸ ಪೂರ್ಣಗೊಂಡಿರುವ ಕಾಮಾಗಾರಿಗಳ ಲೋಕಾರ್ಪಣೆ, ಹಲವು ಶಂಕುಸ್ಥಾಪನೆ  

ನವದೆಹಲಿ(ಏ.16): ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಹಾಗೂ ಪೂರ್ಣಗೊಂಡಿರುವ ಕಾಮಾಗಾರಿಗಳ ಲೋಕಾರ್ಪಣೆ ಸೇರಿದಂತೆ ಹಲವು ಕಾರ್ಯಕ್ರಮಗಳ ನಿಮಿತ್ತ ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 18 ರಂದು ಗುಜರಾತ್‌ಗೆ ಭೇಟಿ ನೀಡುತ್ತಿದ್ದಾರೆ. ಈ ವೇಳೆ ಬರೋಬ್ಬರಿ 22,000 ಕೋಟಿ ರೂಪಾಯಿ ಅಭಿವೃದ್ಧಿ ಕಾಮಾಕಾರಿಗಳ ಶಿಲನ್ಯಾಸ ನೆರವೇರಿಸಲಿದ್ದಾರೆ.

ಏಪ್ರಿಲ್ 18ರ ಸಂಜೆ 6 ಗಂಟೆಗೆ ಪ್ರಧಾನಿ ಮೋದಿ ಗಾಂಧಿನಗರದಲ್ಲಿರುವ ಕಮಾಂಡ್ ಹಾಗೂ ಸಂಟ್ರಲ್ ಸ್ಕೂಲ್‌ಗೆ ಭೇಟಿ ನೀಡಲಿದ್ದಾರೆ. ಇನ್ನು ಏಪ್ರಿಲ್ 19 ರ ಬೆಳಗ್ಗೆಯಿಂದ ಏಪ್ರಿಲ್ 20ರ ಸಂಜೆ ವರೆಗೆ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಮೋದಿ ನವದೆಹಲಿಗೆ ಮರಳಲಿದ್ದಾರೆ. 

108 ಅಡಿ ಎತ್ತರದ ಹನುಮಂತನ ಪ್ರತಿಮೆ ಅನಾವರಣಗೊಳಿಸಿದ ಪ್ರಧಾನಿ ಮೋದಿ!

ಕಮಾಂಡ್ ಶಾಲಾ ಭೇಟಿ:
ಈ ಬಾರಿಯ ಗುಜರಾತ್ ಭೇಟಿಯಲ್ಲಿ ಮೋದಿ ಮೊದಲ ಕಾರ್ಯಕ್ರಮ ಶಾಲೆಗಳ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‌ನಲ್ಲಿ ಆಯೋಜಿಸಲಾಗಿದೆ. ಈ ಕೇಂದ್ರ ವಾರ್ಷಿಕವಾಗಿ 500 ಕೋಟಿ ಡೇಟಾ ಸಂಗ್ರಹಿಸುತ್ತಿದೆ. ವಿದ್ಯಾರ್ಥಿಗಳ ಕಲಿಕೆ ಹಾಗೂ ಉತ್ತಮ ಫಲಿತಾಂಸಕ್ಕಾಗಿ ಇದು ನೆರವಾಗಲಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ, ವಿದ್ಯಾರ್ಥಿಗಳ ಆನ್‌ಲೈನ್ ಹಾಜರಾತಿ ಸೇರಿದಂತೆ ಎಲ್ಲಾ ಮಾಹಿತಿಗಳು ಈ ಸೆಂಟರ್ ನೀಡಲಿದೆ. ಇಲ್ಲಿಗೆ ಭೇಟಿ ನೀಡಲಿರುವ ಮೋದಿ ಮಾಹಿತಿ ಪಡೆದುಕೊಳ್ಳಲಿದ್ದಾರೆ.

ಏಪ್ರಿಲ್ 19 ರಂದು ಮೋದಿ, ಬನಸ್ಕಾಂತರದ ದಿಯೋರ್‌ನಲ್ಲಿರುವ ಬನಾಸ್ ಡೈರಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಬಳಿಕ ಬಹು ಅಭಿವೃದ್ಧಿ ಯೋಜನೆಗಳ ಶಿಲನ್ಯಾಸ ನೇರವೇರಿಸಲಿದ್ದಾರೆ. ಮಧ್ಯಾಹ್ನ 3.30ಕ್ಕೆ ಜಾಮ್‌ನಗರದಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆಯ ಗ್ಲೋಬರ್ ಸೆಂಟರ್ ಫಾರ್ ಟ್ರಡಿಷನಲ್ ಮೆಡಿಸನ್ ಕೇಂದ್ರದ ಶಂಕು ಸ್ಥಾಪನೆ ಮಾಡಲಿದ್ದಾರೆ. ಏಪ್ರಿಲ್ 20 ರಂದು ಬೆಳಕ್ಕೆ 10.30ಕ್ಕೆ ಗಾಂಧಿನಗರದಲ್ಲಿರುವ ಜಾಗತಿಕ ಆಯುಷ್ ಹೂಡಿಕೆ ಮತ್ತು ನಾವಿನ್ಯತೆ ಶೃಂಗಸಭೆ ಉದ್ಘಾಟಿಸಲಿದ್ದಾರೆ. ಬಳಿಕ ದಹೋದ್‌ನಲ್ಲಿ ಆದಿಜಾತಿ ಮಹಾಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಇದೇ ವೇಳೆ ಬರೋಬ್ಬರಿ 22,000 ಕೋಟಿ ರೂಪಾಯಿ ಅಭಿವೃದ್ಧಿ ಕಾಮಾಕಾರಿಗಳಿಗೆ ಚಾಲನೆ ನೀಡಲಿದ್ದಾರೆ.

ಮುಂದಿನ 10 ವರ್ಷಗಳಲ್ಲಿ ಭಾರತ ದಾಖಲೆ ಸಂಖ್ಯೆಯ ವೈದ್ಯರನ್ನು ಪಡೆಯಲಿದೆ: ಪ್ರಧಾನಿ

ಆದಿಜಾತಿ ಮಹಾ ಸಮ್ಮೇಳನ ಭಾರಿ ವಿಶೇಷತೆ ಪಡೆದುಕೊಂಡಿದೆ. ಮೋದಿ ಕಾರ್ಯಕ್ರಮದಲ್ಲಿ ಸುಮಾರು 2 ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಇಲ್ಲಿನ ಅಭಿವೃದ್ಧಿ ಯೋಜನೆಗಳ ಪೈಕಿ 1,400 ಕೋಟಿ ರೂಪಾಯಿ ಅಧಿಕ ಮೊತ್ತದ ಯೋಜನೆಗಳನ್ನು ಮೋದಿ ಉದ್ಘಾಟಿಸಲಿದ್ದಾರೆ. 840 ಕೋಟಿ ರೂಪಾಯಿ ವೆಚ್ಚದಲ್ಲಿ ನರ್ಮದಾ ನದಿ ಜಲಾಯನ ಪ್ರದೇಶದಲ್ಲಿ ನೀರು ಸರಬರಾಜು ಯೋಜನೆ ಉದ್ಘಾಟಿಸಲಿದ್ದಾರೆ. ಈ ಯೋಜನೆಯಿಂದದ 280 ಹಳ್ಳಿಗಳಿಗೆ ನೀರು ಪೂರೈಕೆಯಾಗಲಿದೆ. ಈ ಹಳ್ಳಿಗಳು ನೀರಿನ ಸಮಸ್ಯೆ ನೀಗಲಿದೆ. ಇದೇ ವೇಳೆ 5 ಸ್ಮಾರ್ಟ್ ಸಿಟಿ ಯೋಜನೆಗಳನ್ನು ಮೋದಿ ಉದ್ಘಾಟಿಸಲಿದ್ದಾರೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ದಾಹೋದ್‌ನ 10,000 ಆದಿವಾಸಿಗಳಿಗೆ 120 ಕೋಟಿ ರೂಪಾಯಿ ನೀಡಲಿದ್ದಾರೆ. ಇದರ ಜೊತೆಗೆ ಸಬ್ ಸ್ಟೇಷನ್, ಪಂಚಾಯತ್ ಮನೆ, ಅಂಗನವಾಡಿ ಸೇರಿದಂತೆ ಹಲವು ಯೋಜನೆಗಳ ಉದ್ಘಾಟನೆ ಮಾಡಲಿದ್ದಾರೆ.

ದಾಹೋದ್‌ನಲ್ಲಿ ಮೋದಿ, 9000 Hp ಎಲೆಕ್ಟ್ರಿಕ್ ಲೋಕೋಮೊಟೀವ್ ತಯಾರಿಕೆಗಳ ಕೇಂದ್ರಕ್ಕೆ ಶಂಕುಸ್ಥಾಪನೆ ಮಾಡಲಿದ್ದಾರೆ. ಇದರ ಯೋಜನಾ ವೆಚ್ಚ 20,000 ಕೋಟಿ ರೂಪಾಯಿ. ಈ ಕೇಂದ್ರ 10,000 ಕ್ಕೂ ಹೆಚ್ಚು ಜನರಿಗೆ ನೇರ ಮತ್ತು ಪರೋಕ್ಷ ಉದ್ಯೋಗವನ್ನು ಒದಗಿಸುತ್ತದೆ.ಇದೇ ವೇಳೆ ರಾಜ್ಯಸರ್ಕಾರದ 550 ಕೋಟಿ ರರೂಪಾಯಿ ಯೋಜನೆಗಳಿಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.