ನವದೆಹಲಿ(ಜ.08): ಭಾರತದಲ್ಲಿ ಎರಡು ಕೊರೋನಾ ಲಸಿಕೆ ಬಳಕಿಗೆ ಅನುಮತಿ ಸಿಕ್ಕಿಗೆ. ಕೋವಿಶೀಲ್ಡ್ ಹಾಗೂ ಕೋವಾಕ್ಸಿನ್ ಲಸಿಕೆಗೆ ಅನುಮೋದನೆ ಸಿಕ್ಕ ಬೆನ್ನಲ್ಲೇ ಇದೀಗ ಲಸಿಕೆ ವಿತರಣೆ ಕುರಿತು ರೂಪುರೇಶೆ ಸಿದ್ದಗೊಂಡಿದೆ. ಇದೀಗ ಎಲ್ಲಾ ರಾಜ್ಯಗಳಿಗೆ ಲಸಿಕೆ ರೋಲ್ ಔಟ್ ಮಾಡಲು ತಯಾರಿ ಆರಂಭಗೊಂಡಿದೆ. ಇದರ ಮೊದಲ ಭಾಗವಾಗಿ ಪ್ರಧಾನಿ ಮೋದಿ ಮುಖ್ಯಮಂತ್ರಿಗಳ ಮಹತ್ವದ ಸಭೆ ನಡೆಸಲಿದ್ದಾರೆ.

ರೂಪಾಂತರಿ ವೈರಸ್ ಆತಂಕ ಬೇಡ; 2 ಕೊರೋನಾ ಲಸಿಕೆ ಪರಿಣಾಮಕಾರಿ ಎಂದ ಅಧ್ಯಯನ ವರದಿ!..

ಜನವರಿ 11ರಂದು ಸಂಜೆ 4 ಗಂಟೆ ಮೋದಿ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳ ಜೊತೆ ಮಹತ್ವದ ಮಾತುಕತೆ ನಡೆಸಲಿದ್ದಾರೆ. ವಿಡಿಯೋ ಕಾನ್ಫೆರೆನ್ಸ್ ಮೂಲಕ ಮೋದಿ ಸಭೆ ನಡೆಸಲಿದ್ದಾರೆ.  ಸೆರಂ ಸಂಸ್ಥೆಯ ಕೋವಿಶೀಲ್ಡ್ ಹಾಗೂ ಭಾರತ್ ಭಯೋಟೆಕ್ ಸಂಸ್ಥೆಯ ಕೋವಾಕ್ಸಿನ್ ಲಸಿಕೆಗೆ ಭಾರತದ ಔಷಧ ನಿಯಂತ್ರಕ ಬೋರ್ಡ್ ತುರ್ತು ಬಳಕೆಗೆ ಅನುಮೋದನೆ ನೀಡಿದೆ. ಇದರ ಬೆನ್ನಲ್ಲೇ ಮೋದಿ, ರಾಜ್ಯಗಳ ಸಿಎಂ ಜೊತೆ ಸಭೆ ಕರೆದಿದ್ದಾರೆ.

 

ಕೊರೋನಾ ವೈರಸ್ ಲಸಿಕೆ ಕೆಲ ದಿನಗಳಲ್ಲಿ ಎಲ್ಲಾ ರಾಜ್ಯಗಳಿಗೆ ಲಭ್ಯವಾಗಲಿದೆ ಎಂದು ಇತ್ತೀಚೆಗಷ್ಟೇ ಕೇಂದ್ರ ಆರೋಗ್ಯ ಸಚಿವರು ಹೇಳಿದ್ದರು. ಇದೀಗ ಕೊರೋನಾ ವೈರಸ್ ಲಸಿಕೆ ಲಭ್ಯತೆ, ವಿತರಣೆ ಹಾಗೂ ಮೊದಲ ಹಂತದಲ್ಲಿ ಯಾರಿಗೆಲ್ಲಾ ಲಸಿಕೆ ನೀಡಬೇಕು ಅನ್ನೋ ಕುರಿತ ಎಲ್ಲಾ ಸಿದ್ದತೆಗಳು ಬಹುತೇಕ ಪೂರ್ಣಗೊಂಡಿದೆ.

ಭಾರತದಲ್ಲಿ ಈಗಾಗಲೇ 2 ಲಸಿಕೆ ಡ್ರೈ ರನ್ ನಡೆಸಲಾಗಿದೆ. ಇದೀಗ ಲಸಿಕೆ ರೋಲ್ ಔಟ್ ಕುರಿತ ಸಭೆ ಭಾರಿ ಮಹತ್ವದ ಪಡೆದುಕೊಂಡಿದೆ. ಕರ್ನಾಟಕ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿದಂತೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಪ್ರಧಾನಿ ಮೋದಿ ಜೊತೆ ಲಸಿಕೆ ವಿತರಣೆ ಕುರಿತು ಮಾತುಕತೆ ನಡೆಸಲಿದ್ದಾರೆ.