* ಸಂಸತ್‌ ಟೀವಿ ಚಾನೆಲ್‌ಗೆ ಇಂದು ಮೋದಿ ಚಾಲನೆ* ಲೋಕಸಭಾ, ರಾಜ್ಯಸಭಾ ಟೀವಿ ವಿಲೀನಗೊಳಿಸಿ ಹೊಸ ಚಾನೆಲ್‌

ನವದೆಹಲಿ(ಸೆ.15): ಲೋಕಸಭೆ ಮತ್ತು ರಾಜ್ಯಸಭೆ ಚಾನೆಲ್‌ಗಳನ್ನು ವಿಲೀನಗೊಳಿಸಿ ಹೊಸದಾಗಿ ರಚಿಸಲಾಗಿರುವ ಸಂಸತ್‌ ಟೀವಿ ಬುಧವಾರ ಉದ್ಘಾಟನೆಗೊಳ್ಳಲಿದೆ.
ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹಾಗೂ ಲೋಕಾಸಭಾ ಸ್ಪೀಕರ್‌ ಓಂ ಬಿರ್ಲಾ ಜಂಟಿಯಾಗಿ ಚಾನೆಲ್‌ಗೆ ಚಾಲನೆ ನೀಡಲಿದ್ದಾರೆ. ಉಭಯ ಸದನಗಳ ಕಾರ್ಯಾಚರಣೆ ಕುರಿತು ಈ ಚಾನಲ್‌ ಕಾರ್ಯಕ್ರಮ ಪ್ರಸಾರ ಮಾಡಲಿದೆ.

ಹೊಸ ಚಾನೆಲ್‌ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದಂದೇ ಚಾಲನೆಗೊಳ್ಳುತ್ತಿರುವುದು ವಿಶೇಷ ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ಹೇಳಿದೆ. ಲೋಕಸಭಾ ಮತ್ತು ರಾಜ್ಯಸಭಾ ಟಿವಿಗಳನ್ನು ಕಳೆದ ಫೆಬ್ರವರಿಯಲ್ಲಿ ವಿಲೀನಗೊಳಿಸುವುದಾಗಿ ಸರ್ಕಾರ ಹೇಳಿತ್ತು. ನಿವೃತ್ತ ಐಎಎಸ್‌ ಅಧಿಕಾರಿ ರವಿ ಕಪೂರ್‌ ಅವರನ್ನು ಸಂಸತ್‌ ಟೀವಿಯ ಸಿಇಒ ಆಗಿ ಮಾಚ್‌ರ್‍ನಲ್ಲಿ ನೇಮಿಸಲಾಗಿತ್ತು.

ಕಾಂಗ್ರೆಸ್‌ ಮುಖಂಡ ಕರಣ್‌ ಸಿಂಗ್‌, ಅರ್ಥಶಾಸ್ತ್ರಜ್ಞ ವಿವೇಕ್‌ ದೆಬರಾಯ್‌, ನೀತಿ ಆಯೋಗದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಅಮಿತಾಭ್‌ ಕಾಂತ್‌, ವಕೀಲ ಹೇಮಂತ್‌ ಬಾತ್ರಾ ಹೊಸ ಚಾನೆಲ್‌ನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ.