Asianet Suvarna News Asianet Suvarna News

ಅಂಡಮಾನ್‌ಗೆ ಸಮುದ್ರಾಳದಡಿ ಎಳೆದ ಫೈಬರ್‌ ಕೇಬಲ್‌ಗೆಮೋದಿ ಚಾಲನೆ!

ಅಂಡಮಾನ್‌ಗೆ ಸಮುದ್ರಾಳದಡಿ ಎಳೆದ ಫೈಬರ್‌ ಕೇಬಲ್‌ಗೆ ನಾಡಿದ್ದು ಮೋದಿ ಚಾಲನೆ| ಅಂಡಮಾನ್‌-ನಿಕೋಬಾರ್‌ನಲ್ಲಿ ಸಂಪರ್ಕ ಕ್ರಾಂತಿಗೆ ಕಾರಣವಾಗಬಹುದಾದ, ಸಮುದ್ರಾಳದಲ್ಲಿ ಎಳೆಯಲಾದ ಆಪ್ಟಿಕಲ್‌ ಫೈಬರ್‌ ಕೇಬಲ್‌ 

PM Modi to inaugurate Chennai Andaman And Nicobar submarine cable project on Monday
Author
Bangalore, First Published Aug 8, 2020, 9:50 AM IST

ನವದೆಹಲಿ(ಆ.08): ಅಂಡಮಾನ್‌-ನಿಕೋಬಾರ್‌ನಲ್ಲಿ ಸಂಪರ್ಕ ಕ್ರಾಂತಿಗೆ ಕಾರಣವಾಗಬಹುದಾದ, ಸಮುದ್ರಾಳದಲ್ಲಿ ಎಳೆಯಲಾದ ಆಪ್ಟಿಕಲ್‌ ಫೈಬರ್‌ ಕೇಬಲ್‌ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ವಿಡಿಯೋ ಕಾನ್ಫರೆನ್ಸ್‌ ಮೂಲಕ ಉದ್ಘಾಟಿಸಲಿದ್ದಾರೆ.

ವಿಮಾನ ದುರಂತ ಸಾವಿನ ಸಂಖ್ಯೆ 12ಕ್ಕೆ, ಪಿಣರಾಯಿ ಜತೆ ಮಾತನಾಡಿದ ಮೋದಿ

ಈ ಯೋಜನೆಯಿಂದಾಗಿ ಅಂಡಮಾನ್‌-ನಿಕೋಬಾರ್‌, ಸ್ವರಾಜ್‌ ದ್ವೀಪ, ಲಿಟಲ್‌ ಅಂಡಮಾನ್‌, ಕಾರ್‌ ನಿಕೋಬಾರ್‌, ಕಮೊರ್ಟಾ, ಗ್ರೇಟ್‌ ನಿಕೋಬಾರ್‌, ಲಾಂಗ್‌ ಐಲೆಂಡ್‌ ಹಾಗೂ ರಂಗತ್‌ ಪ್ರದೇಶಗಳಿಗೆ ಗುಣಮಟ್ಟದ ಅಂತರ್ಜಾಲ ಸಂಪರ್ಕ ಕಲ್ಪಿಸಲಿದೆ.

ಈ ಆಫ್ಟಿಕಲ್‌ ಫೈಬರ್‌ ಕೇಬಲ್‌ ಅಳವಡಿಕೆಯಿಂದ ಅಂಡಮಾನ್‌-ನಿಕೋಬಾರ್‌ನಲ್ಲಿ ಸಹ 4ಜಿ ನೆಟ್‌ವರ್ಕ್ ಲಭ್ಯವಾಗಲಿದ್ದು, ಸಣ್ಣ ಮತ್ತು ಮಧ್ಯಮ ಉದ್ಯಮಗಳು, ಶಿಕ್ಷಣ ಸಂಸ್ಥೆಗಳು, ಜ್ಞಾನದ ಶೀಘ್ರ ಸಂಚಲನಕ್ಕೆ ನೆರವಾಗಲಿದೆ. 2018ರ ಡಿಸೆಂಬರ್‌ನಲ್ಲಿ ಪೋರ್ಟ್‌ಬ್ಲೇರ್‌ನಲ್ಲಿ ಈ ಯೋಜನೆಗೆ ಶಿಲಾನ್ಯಾಸ ನೆರವೇರಿಸಿದ್ದ ಪ್ರಧಾನಿ ಮೋದಿ ಅವರೇ, ಇದೀಗ ಆಗಸ್ಟ್‌ 10ರಂದು ಉದ್ಘಾಟನೆ ಮಾಡಲಿದ್ದಾರೆ.

Follow Us:
Download App:
  • android
  • ios