Asianet Suvarna News Asianet Suvarna News

ಚೀನಾದ ಝೂಮ್ ಆ್ಯಪ್ ಬೇಡವೇ ಬೇಡ; ಪ್ರಧಾನಿಗೆ ಸಲಹೆ

ಕರೋನಾ ಶುರು ಆಗಿದ್ದೇ ಆಗಿದ್ದು ಬಹಳಷ್ಟು ಜನ ಒಂದೇ ಬಾರಿಗೆ ಕುಳಿತು ಒನ್ ಲೈನ್ ಸಭೆ ನಡೆಸಬಲ್ಲ ಝೋಮ್ ಆಪ್ ಗೆ ಭಾರೀ ಬೇಡಿಕೆ ಬಂದಿದೆ. ಕಳೆದ ಒಂದು ತಿಂಗಳಲ್ಲಿ ಈ ಆಪ್ ಅನ್ನು 5 ಕೋಟಿ ಭಾರತೀಯರು ಡೌನ್‌ಲೋಡ್ ಮಾಡಿ ಕೊಂಡಿದ್ದಾರೆ.

PM Modi strictly warns to Minister that do not upload unnecessary photos
Author
Bengaluru, First Published Apr 11, 2020, 4:08 PM IST

ಕರೋನಾ ಶುರು ಆಗಿದ್ದೇ ಆಗಿದ್ದು ಬಹಳಷ್ಟು ಜನ ಒಂದೇ ಬಾರಿಗೆ ಕುಳಿತು ಒನ್ ಲೈನ್ ಸಭೆ ನಡೆಸಬಲ್ಲ ಝೋಮ್ ಆಪ್ ಗೆ ಭಾರೀ ಬೇಡಿಕೆ ಬಂದಿದೆ. ಕಳೆದ ಒಂದು ತಿಂಗಳಲ್ಲಿ ಈ ಆಪ್ ಅನ್ನು 5 ಕೋಟಿ ಭಾರತೀಯರು ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಆದರೆ ರಕ್ಷಣಾ ಪರಿಣಿತ ಬ್ರಹ್ಮ ಚೇಲಾನಿ ಚೈನೀಸ್ ಝೋಮ್ ಆಪ್ ಅನ್ನು ಯಾವುದೇ ಕಾರಣಕ್ಕೂ ಸರ್ಕಾರದ ಸಭೆ ನಡೆಸಬಾರದು ಎಂದು ಪ್ರಧಾನಿಗೆ ಸಲಹೆ ನೀಡಿದ್ದಾರೆ.

ಫೋಟೋ ಅಪ್ಡೇಟ್ ಮಾಡ್ಬೇಡಿ!

ರಾಮಾಯಣ ವೀಕ್ಷಿಸುವ ಪ್ರಕಾಶ ಜಾವದೇಕರ್ ತರಕಾರಿ ಹೆಚ್ಚಲು ಕುಳಿತಿದ್ದ ಹರ್ಷವರ್ಧನ್, ತೋಟ ಅಗೆಯುತ್ತಿದ್ದ ಸಂಜೀವ್ ಬಲಿಯಾನ್ ಚಿತ್ರಗಳು ಟೀಕೆಗೆ ಒಳಗಾದ ನಂತರ ಪ್ರಧಾನಿ ಮೋದಿ ಅನಾವಶ್ಯಕ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕದಂತೆ ಸಚಿವರಿಗೆ ತಾಕೀತು ಮಾಡಿದ್ದಾರೆ.

ಕಡ್ಡಾಯವಾಗಿ ಫೋಟೋಗಳಲ್ಲಿ ಮಂತ್ರಿಗಳು ಸಾಮಾಜಿಕ ಅಂತರ ಪಾಲಿಸುತ್ತಿರುವುದು ಗೊತ್ತಾಗಬೇಕು, ಎಂದು ಮೋದಿ ಸೂಚಿಸಿದ್ದು ಯಾವ ಸಚಿವರು ದಿನವೂ ಎಷ್ಟು ಸಭೆ ನಡೆಸುತ್ತಿದ್ದಾರೆ, ಎಂಬೆಲ್ಲ ಮಾಹಿತಿ ಪ್ರಧಾನಿ ಕಾರ್ಯಾಲಯ ಪಡೆಯುತ್ತಿದೆ. ಮೇ ಅಥವಾ ಜೂನ್‌‌ನಲ್ಲಿ ಸಂಪುಟಕ್ಕೆ ಸರ್ಜರಿ ಆಗಲಿದೆ ಎಂಬ ಸುದ್ದಿ ಇದ್ದು ಮಂತ್ರಿಗಳ ಸಕ್ರಿಯತೆಗೆ ಇದು ಒಂದು ಭಯ ಕೂಡ ಕಾರಣ ಇರಬಹುದು.

ರಾಜನಾಥ್‌ ಸಿಂಗ್‌ಗೆ ಕೈ ತುಂಬಾ ಕೆಲಸ; 'ಪಂಚವಟಿ' ಯಲ್ಲಿ ಮೋದಿ

ಕೊರೋನಾ ಭೀತಿಯಿಂದ ಸಂಸದರು, ರಾಷ್ಟ್ರಪತಿ ಭಯ ಮುಕ್ತ 

ವಸುಂಧರಾ ಪುತ್ರ ದುಷ್ಯಂತ ಸಿಂಗ್ ಕೋರೋನಾ ರಿಪೋರ್ಟ್ ನೆಗೆಟಿವ್ ಬಂದಿದ್ದರಿಂದ ಸಂಸದರಾದ ಶಿವಕುಮಾರ ಉದಾಸಿ, ಸಂಜಯ ಸಿಂಗ್ ಡೇರಿಕ್ ಒಬ್ಬರಿಯೊನ್ ಸೇರಿದಂತೆ 28 ಎಂಪಿಗಳು ಭಯ ಮುಕ್ತರಾಗಿದ್ದು, ಸೆಲ್ಫ್ ಕ್ವಾರಂಟಿನ್‌ನಿಂದ ಹೊರಗೆ ಬಂದಿದ್ದಾರೆ. ದುಷ್ಯಂತರಿಂದ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪ ರಾಷ್ಟ್ರಪತಿ ವೆಂಕಯ್ಯ ನಾಯಿಡು ಜೊತೆಗೆ ಅನೇಕ ಹಿರಿಯ ಪತ್ರಕರ್ತರೂ ಕೊರೋನಾ ಭಯದಲ್ಲಿದ್ದರು. ಅವರೀಗ ಕ್ವಾರೆಂಟಿನ್‌ನಿಂದ ಹೊರಗೆ ಬಂದಿದ್ದರೂ ಲಾಕ್‌ಡೌನ್‌ನಿಂದ ದಿಲ್ಲಿಯಲ್ಲೇ ಬಂಧಿಯಾಗಿದ್ದಾರೆ

ಲಾಕ್‌ಡೌನ್ ಮಾಡದೇ ವಿಧಿಯಿಲ್ಲ; ಮೋದಿ ಸಾಹೇಬರಿಗೆ ಈಗ ಖಜಾನೆಯದ್ದೇ ಚಿಂತೆ

ಸರ್ಕಾರದ ಮಾಹಿತಿ ಅನಾಯಾಸವಾಗಿ ಚೈನೀಸ್ ಸರ್ವರ್‌ಗೆ ಹೊರಟು ಹೋಗುತ್ತದೆ ಎಂಬುದು ಭೀತಿಗೆ ಕಾರಣ. ಪ್ರಧಾನಿ ಕಾರ್ಯಾಲಯ ಈ ಬಗ್ಗೆ ಸಚಿವ ರವಿ ಶಂಕರ ಪ್ರಸಾದ್‌ರಿಂದ ಈ ಬಗ್ಗೆ ವಿವರಣೆ ಕೇಳಿದೆ. ಸಂಕಷ್ಟದ ಸೃಷ್ಟಿ ಕರ್ತರಿಗೆ ಸಂಕಷ್ಟದ ಲಾಭ ಸಿಗುವುದು ಪರಿಸ್ಥಿತಿಯ ವಿಪರ್ಯಾಸ ಅಷ್ಟೇ. 

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ದೆಹಲಿಯಿಂದ ಕಂಡ ರಾಜಕಾರಣ 

Follow Us:
Download App:
  • android
  • ios