ದೆಹಲಿ(ನ.27):  ಹಮಾನ ಬದಲಾವಣೆ, ವ್ಯಾಪಾರ, ಹೂಡಿಕೆ, ಭದ್ರತೆ ಹಾಗೂ ಕೊರೋನಾ ವೈರಸ್ ಲಸಿಕೆ ಸೇರಿದಂತೆ ಹಲವು ಪ್ರಮುಖ ವಿಚಾರಗಳನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ UK(ಯುನೈಟೆಡ್ ಕಿಂಗ್‌ಡಮ್) ಪ್ರಧಾನಿ ಬೊರಿಸ್ ಜಾನ್ಸನ್ ಮಹತ್ವದ ಮಾತುಕತೆ ನಡೆಸಿದ್ದಾರೆ. 

3 ಲಸಿಕೆ ತಯಾರಿಕೆ ಕೇಂದ್ರಗಳಿಗೆ ನಾಳೆ ಪ್ರಧಾನಿ ಮೋದಿ ಭೇಟಿ, ಪರಿಶೀಲನೆ!.

ಮೋದಿ ಈ ಕುರಿತು ಟ್ವೀಟ್ ಮಾಡಿದ್ದಾರೆ. ಆತ್ಮೀಯ ಸ್ನೇಹಿತ, ಯುಕೆ ಪ್ರಧಾನಿ ಬೊರಿಸ್ ಜಾನ್ಸನ್ ಜೊತೆ ಅತ್ಯುತ್ತಮ ಮಾತುಕತೆ ನಡೆಸಿದ್ದೇನೆ. ಮುಂದಿನ ದಶಕದಲ್ಲಿ ಭಾರತ-ಯುಕೆ ಸಂಬಂಧಗಳಿಗಾಗಿ ಮಹತ್ವಾಕಾಂಕ್ಷೆಯ ಮಾರ್ಗಸೂಚಿ ಕುರಿತು ಮಾತುಕತೆ ನಡೆಸಿದ್ದೇನೆ. ವ್ಯಾಪಾರ ಮತ್ತು ಹೂಡಿಕೆ, ರಕ್ಷಣಾ ಮತ್ತು ಭದ್ರತೆ, ಹವಾಮಾನ ಬದಲಾವಣೆ, ಮತ್ತು ಕೋವಿಡ್ -19 ರ ವಿರುದ್ಧ ಹೋರಾಡುವ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಭಾರತ ಹಾಗೂ ಯುಕೆ ಜಂಟಿಯಾಗೆ ಹೆಜ್ಜೆಹಾಕಲಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

 

ಹೊಸ ನೀತಿ, ರೀತಿಯಡಿ ಉಗ್ರರ ವಿರುದ್ಧ ಹೋರಾಟ: ಮೋದಿ ಶಪಥ...

ವಿಶ್ವಸಂಸ್ಥೆಯ ಹಮಾನ ಬದಲಾವಣೆ ಕುರಿತ ಶೃಂಗಸಭೆಯನ್ನು ಮುಂದಿನ ವರ್ಷ ಯುಕೆ ಆಯೋಜಿಸುತ್ತಿದೆ. ಕೊರೋನಾ ವೈರಸ್ ಕಾರಣ 2020ರಲ್ಲಿ ಆಯೋಜಿಸಿದ್ದ ಈ ಸಭೆಯನ್ನು ಮುಂದಿನ ವರ್ಷಕ್ಕೆ ಮುಂದೂಡಲಾಗಿದೆ.

ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆಯ ಹರಿವನ್ನು ಸುಧಾರಿಸುವ ಮಹತ್ವದ ಕುರಿತು ಬೊರಿಸ್ ಜಾನ್ಸನ್ ಒತ್ತಿ ಹೇಳಿದ್ದಾರೆ.  ಕೊರೋನಾ ವೈರಸ್ ವಿರುದ್ಧ ಕೈಗೊಂಡ ಮಹತ್ವದ ಮಾರ್ಗಸೂಚಿಗಳ ಕುರಿತು ಉಭಯ ನಾಯಕರು ಮಾತಿನಲ್ಲಿ ಉಲ್ಲೇಖಿಸಿದ್ದಾರೆ. ಇನ್ನು