ಅಮೆರಿಕ ಅಧ್ಯಕ್ಷರಾಗಿ ಇತ್ತೀಚೆಗೆ ಚುನಾಯಿತರಾದ ಜೋ ಬೈಡೆನ್‌ ಅವರ ಜತೆ ಪ್ರಧಾನಿ ನರೇಂದ್ರ ಮೋದಿ ಸಂಭಾಷಣೆ|  ಎರಡೂ ದೇಶಗಳ ಸಹಕಾರವನ್ನು ವಿವಿಧ ವಲಯಗಳಲ್ಲಿ ವೃದ್ಧಿಸುವ ಬದ್ಧತೆ ಮಾತು

ನವದೆಹಲಿ(ಫೆ.09): ಅಮೆರಿಕ ಅಧ್ಯಕ್ಷರಾಗಿ ಇತ್ತೀಚೆಗೆ ಚುನಾಯಿತರಾದ ಜೋ ಬೈಡೆನ್‌ ಅವರ ಜತೆ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ರಾತ್ರಿ ಫೋನ್‌ ಸಂಭಾಷಣೆ ನಡೆಸಿದರು. ಈ ವೇಳೆ ಎರಡೂ ದೇಶಗಳ ಸಹಕಾರವನ್ನು ವಿವಿಧ ವಲಯಗಳಲ್ಲಿ ವೃದ್ಧಿಸುವ ಬದ್ಧತೆಯನ್ನು ಉಭಯ ನಾಯಕರು ವ್ಯಕ್ತಪಡಿಸಿದರು.

‘ನಾನು ಬೈಡೆನ್‌ ಅವರ ಯಶಸ್ಸಿಗೆ ಹಾರೈಸಿದೆ. ಪ್ರಾದೇಶಿಕ ವಿಚಾರಗಳ ಬಗ್ಗೆ ಚರ್ಚಿಸಿ ಯಾವುದಕ್ಕೆ ಆದ್ಯತೆ ನೀಡಬೇಕೆಂಬ ಬಗ್ಗೆ ಮಾತುಕತೆ ನಡೆಸಿದೆವು. ಹವಾಮಾನ ಬದಲಾವಣೆ ವಿರುದ್ಧ ಹೋರಾಡಲು ಒಪ್ಪಿಕೊಂಡೆವು.

Scroll to load tweet…

ಇಂಡೋ ಪೆಸಿಫಿಕ್‌ ಹಾಗೂ ಇತರ ಪ್ರದೇಶಗಳಲ್ಲಿ ಶಾಂತಿ ಸ್ಥಾಪಿಸುವ ಉದ್ದೇಶದಿಂದ ವ್ಯೂಹಾತ್ಮಕ ಸಹಭಾಗಿತ್ವ ಬಲಗೊಳಿಸಲು ಹಾಗೂ ಅಂತಾರಾಷ್ಟ್ರೀಯ ನಿಯಮಗಳಿಗೆ ಬದ್ಧರಾಗಿರುವುದಾಗಿ ನಿರ್ಧರಿಸಿದೆವು’ ಎಂದು ಮಾತುಕತೆ ಬಗ್ಗೆ ಮೋದಿ ಟ್ವೀಟ್‌ ಮಾಡಿದ್ದಾರೆ.