Asianet Suvarna News Asianet Suvarna News

ಭಾರತೀಯರೆಂದರೆ ಆಲಸಿಗಳು ಅಂದುಕೊಂಡಿದ್ದರು ನೆಹರು, ಇಂದಿರಾಗಾಂಧಿ: ಪ್ರಧಾನಿ ನರೇಂದ್ರ ಮೋದಿ!

Modi Parliament Speech: ಲೋಕಸಭೆಯಲ್ಲಿ ರಾಷ್ಟ್ರಪತಿಗಳ ವಂದನಾ ನಿರ್ಣಯದ ಬಗ್ಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿಗಳಾದ ಜವಹರಲಾಲ್‌ ನೆಹರೂ ಹಾಗೂ ಇಂದಿರಾ ಗಾಂಧಿ ವಿರುದ್ಧವೂ ಟೀಕಾಪ್ರಹಾರ ಮಾಡಿದ್ದಾರೆ.

PM Modi Says Nehru thought Indians are lazy Indira Gandhi didnt think any differently san
Author
First Published Feb 5, 2024, 9:26 PM IST

ನವದೆಹಲಿ (ಜ.5): ಲೋಕಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಜವಾಹರಲಾಲ್ ನೆಹರು ಅವರು ಅಮೆರಿಕ ಮತ್ತು ಚೀನಾದ ಪ್ರಜೆಗಳಿಗೆ ಹೋಲಿಸಿದರೆ ಭಾರತೀಯರು ಸೋಮಾರಿಗಳು ಮತ್ತು ಕಡಿಮೆ ಬುದ್ಧಿವಂತಿಕೆ ಹೊಂದಿದ್ದಾರೆಂದು ಭಾವಿಸಿದ್ದರು ಎಂದು ಹೇಳಿದ್ದಾರೆ. ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಉತ್ತರ ನೀಡಿದ ಪ್ರಧಾನಿ ಮೋದಿ ಅವರು  ಸುಮಾರು 2 ಗಂಟೆಗಳ ಕಾಲ ಭಾಷಣದಲ್ಲಿ,  ಭಾರತೀಯರು ತಮ್ಮ ಕಷ್ಟಗಳಿಂದ ಓಡಿಹೋಗಲು ಬಯಸುತ್ತಾರೆ ಎನ್ನುವ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹೇಳಿಕೆಗಾಗಿ ವಾಗ್ದಾಳಿ ನಡೆಸಿದರು. ಮಾಜಿ ಪ್ರಧಾನಿ ಜವಹರಲಾಲ್‌ ನೆಹರು ಅವರು ಕೆಂಪುಕೋಟೆಯ ಮೇಲೆ ಮಾಡಿದ್ದ ಭಾಷಣದ ಆಯ್ದ ಭಾಗಗಳನ್ನು ಲೋಕಸಭೆಯಲ್ಲಿ ಓದಿದ ಪ್ರಧಾನಿ ನರೇಂದ್ರ ಮೋದಿ, 'ಭಾರತೀಯರು ಸಾಮಾನ್ಯವಾಗಿ ಕಷ್ಟಪಟ್ಟು ಕೆಲಸ ಮಾಡುವ ಅಭ್ಯಾಸವನ್ನು ಹೊಂದಿಲ್ಲ, ನಾವು ಯುರೋಪ್ ಅಥವಾ ಜಪಾನ್ ಅಥವಾ ಚೀನಾ ಅಥವಾ ರಷ್ಯಾ ಅಥವಾ ಅಮೆರಿಕದ ಜನರಂತೆ ಕೆಲಸ ಮಾಡುವುದಿಲ್ಲ' ಎಂದು ನೆಹರು ಹೇಳಿದ್ದ ಮಾತನ್ನು ಮತ್ತೊಮ್ಮೆ ಮನದಟ್ಟು ಮಾಡಿದರು.

"ಭಾರತೀಯರು ಸೋಮಾರಿಗಳು ಮತ್ತು ಕಡಿಮೆ ಬುದ್ಧಿವಂತರು ಎಂದು ನೆಹರೂ ಜಿ ಭಾವಿಸಿದ್ದರು" ಎಂದು ಕಾಂಗ್ರೆಸ್ ಸಂಸದರ ಘೋಷಣೆಗಳ ನಡುವೆ ಪ್ರಧಾನಿ ಮೋದಿ ತಿಳಿಸಿದ್ದಾರೆ. ಇಂದಿರಾ ಗಾಂಧಿಯವರ ಚಿಂತನೆಯೂ ನೆಹರೂ ಅವರ ಚಿಂತನೆಗಿಂತ ಭಿನ್ನವಾಗಿಲ್ಲ ಎಂದು ಹೇಳಿದ ಪ್ರಧಾನಿ ಮೋದಿ, ಸ್ವಾತಂತ್ರ್ಯ ದಿನದಂದು ಮಾಜಿ ಪ್ರಧಾನಿ ಕೆಂಪು ಕೋಟೆಯ ಕೋಟೆಯಿಂದ ಹೇಳಿದ ಉಲ್ಲೇಖವನ್ನು ಪ್ರಸ್ತಾಪಿಸಿದರು. “ದುರದೃಷ್ಟವಶಾತ್, ನಮ್ಮ ಅಭ್ಯಾಸ ಏನೆಂದರೆ, ಕೆಲವು ಶುಭ ಕಾರ್ಯಗಳು ಪೂರ್ಣಗೊಳ್ಳುವಾಗ, ನಾವು ಆತ್ಮತೃಪ್ತರಾಗುತ್ತೇವೆ, ಯಾವುದೇ ಕಷ್ಟ ಬಂದಾಗ ನಾವು ಹತಾಶರಾಗುತ್ತೇವೆ, ಕೆಲವೊಮ್ಮೆ ಇಡೀ ದೇಶವೇ ವಿಫಲವಾಗಿದೆ ಎಂದು ತೋರುತ್ತದೆ, ನಾವು ಸೋಲಿನ ಭಾವನೆಯನ್ನು ಅಳವಡಿಸಿಕೊಂಡಂತೆ ತೋರುತ್ತದೆ. ," ಎಂದು ಇಂದಿರಾ ಗಾಂಧಿ ಹೇಳಿದ್ದನ್ನು ಪ್ರಧಾನಿ ಮೋದಿ ಉಲ್ಲೇಖಿಸಿದ್ದಾರೆ.

ಇಂದಿನ ಕಾಂಗ್ರೆಸ್‌ನಲ್ಲಿರುವ ಜನರನ್ನು ನೋಡಿದರೆ, ಇಂದಿರಾ ಗಾಂಧಿಯವರು ದೇಶದ ಜನರನ್ನು ಸರಿಯಾಗಿ ನಿರ್ಣಯಿಸಲು ಸಾಧ್ಯವಾಗಲಿಲ್ಲ. ಆದರೆ ಕಾಂಗ್ರೆಸ್ ಬಗ್ಗೆ ಸಂಪೂರ್ಣವಾಗಿ ಸರಿಯಾಗಿ ನಿರ್ಣಯಿಸಿದ್ದಾರೆ ಎಂದು ತೋರುತ್ತದೆ" ಎಂದು ಪ್ರಧಾನಿ ಮೋದಿ ವಿರೋಧ ಪಕ್ಷದವರನ್ನು ತಿವಿದರು.

ಕಾಂಗ್ರೆಸ್‌ನ ಮನಸ್ಥಿತಿಯು ದೇಶದ ಸಾಮರ್ಥ್ಯವನ್ನು ಎಂದಿಗೂ ನಂಬುವುದಿಲ್ಲ ಎಂದು ಪ್ರಧಾನಿ ಹೇಳಿದರು. ಯಾಕೆಂದರೆ ಇಡೀ ಗಾಂಧಿ ಕುಟುಂಬ ನಾವು ಆಡಳಿತಗಾರರು, ಸಾಮಾನ್ಯ ಜನರು ಲೆಕ್ಕಕ್ಕೆ ಇಲ್ಲ ಎಂದು ಪರಿಗಣಿಸಿತ್ತು ಎಂದು ತಿಳಿಸಿದರು.

ದೇಶ ಒಡೆದ ಮೇಲೂ ತೃಪ್ತಿ ಇಲ್ಲವೆ? ಡಿಕೆ ಸುರೇಶ್ ಪ್ರತ್ಯೇಕ ರಾಷ್ಟ್ರ ಹೇಳಿಕೆ ಖಂಡಿಸಿದ ಪ್ರಧಾನಿ ಮೋದಿ!

ಈ ವೇಳೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನೂ ಬಿಡಲಿಲ್ಲ. ವಯನಾಡ್‌ ಸಂಸದರ ವಿರುದ್ಧ ಪರೋಕ್ಷವಾಗಿ ದಾಳಿ ನಡೆಸಿದ ಮೋದಿ, ಪದೇ ಪದೇ ಒಂದೇ ಪ್ರಾಡಕ್ಟ್‌ಅನ್ನು ಲಾಂಚ್‌ ಮಾಡುವ ಯತ್ನದಲ್ಲಿ ಕಾಂಗ್ರೆಸ್‌ನ ಅಂಗಡಿಗೆ ಬಾಗಿಲು ಹಾಕುವ ಸ್ಥಿತಿ ಬಂದಿದೆ ಎಂದರು.

'ಲೂಟಿ ಮಾಡಿದ ದುಡ್ಡನ್ನು ದೇಶಕ್ಕೆ ಕೊಡಲೇಬೇಕು..' ಭ್ರಷ್ಟಾಚಾರದ ವಿರುದ್ದ ಇಡಿ ಕ್ರಮ ಸರ್ಮಥಿಸಿದ ಪ್ರಧಾನಿ!

ಇದೇ ವೇಳೆ ಮೂರನೇ ಬಾರಿ ಅಧಿಕಾರಕ್ಕೇರುವ ವಿಶ್ವಾಸ ವ್ಯಕ್ತಪಡಿಸಿದ ಪ್ರಧಾನಿ ಮೋದಿ, 2024ರ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ 400ರ ಗಡಿ ದಾಟಲಿದೆ. ಹಾಗೂ ಬಿಜೆಪಿ ಪಕ್ಷವೊಂದೇ 370 ಸೀಟ್‌ಗಳನ್ನು ಗೆಲ್ಲಲಿದೆ. ನನ್ನ ಮೂರನೇ ಅವಧಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಮಯವಾಗಿದೆ ಎಂದು ಮೋದಿ ತಿಳಿಸಿದ್ದಾರೆ.

Follow Us:
Download App:
  • android
  • ios