ನವದೆಹಲಿ (ಡಿ.  25) ಸಮಸ್ತ ನಾಗರಿಕರಿಗೆ ಪ್ರಧಾನಿ  ನರೇಂದ್ರ ಮೋದಿ ಕ್ರಿಸ್ ಮಸ್ ಹಬ್ಬದ ಶುಭಾಶಯ ಕೋರಿದ್ದಾರೆ. ಏಸು ಕ್ರಿಸ್ತನ ಜೀವನ  ಎಲ್ಲರಿಗೂ ಶಕ್ತಿ ತುಂಬಿದೆ ಎಂದು ಹೇಳಿದ್ದಾರೆ.

ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಹಬ್ಬದ ಶುಭಾಶಯ ತಿಳಿಸಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಹ ಶುಭಾಶಯ ತಿಳಿಸಿದ್ದಾರೆ.

'ಕೇಂದ್ರದಲ್ಲಿ ತ್ರಿಮೂರ್ತಿಗಳು ಇರುವವರೆಗೆ ಯಾರೂ ಭಯಪಡಬೇಕಾಗಿಲ್ಲ'

ಕೇಂದ್ರ ಸಚಿವರಾದ ಸಸ್ಮೃತಿ ಇರಾನಿ, ವಿಕೆ ಸಿಂಗ್, ಧರ್ಮೇಂದ್ರ ಪ್ರಧಾನ್ ಸಹ ಕ್ರಿಸ್ ಮಸ್ ಹಬ್ಬ ಹೊಸ ಉತ್ಸಾಹ ಮೂಡಿಸಲಿ   ಎಂದು ಶುಭಕೋರಿದ್ದಾರೆ.  ಎಡ ಪಕ್ಷದ ನಾಯಕ ಸೀತಾರಾಮ್ ಯಚೂರಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಅನೇಕ ನಾಯಕರು ಹಬ್ಬದ ಶುಭಾಶಯ ತಿಳಿಸಿದ್ದಾರೆ.