ನವದೆಹಲಿ(ಜ.03):: ಅಮೆರಿಕದ ಮಾರ್ನಿಂಕ್‌ ಕನ್ಸಲ್ಟ್‌ ಎಂಬ ಸಮೀಕ್ಷಾ ಸಂಸ್ಥೆ 13 ದೇಶಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ‘ ಅತಿ ಜನಪ್ರಿಯ ನಾಯಕ’ನಾಗಿ ಹೊರಹೊಮ್ಮಿದ ಬಗ್ಗೆ ಬಿಜೆಪಿ ನಾಯಕರು ಅತೀವ ಹರ್ಷ ವ್ಯಕ್ತಪಡಿಸಿದ್ದಾರೆ.

ಶನಿವಾರ ಟ್ವೀಟ್‌ ಮಾಡಿರುವ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ‘ಕೋವುಡ್‌-19 ಪರಿಸ್ಥಿತಿ ಹಾಗೂ ವಿವಿಧ ವಿಷಯಗಳನ್ನು ಅತ್ಯಂತ ಸಮರ್ಥ ಸಮರ್ಥವಾಗಿ ನಿಭಾಯಿಸಿದ್ದಕ್ಕೆ ಅವರಿಗೆ ಸವಾಲಿನ ಸಂದರ್ಭದಲ್ಲೂ ಈ ಪಟ್ಟಲಭಿಸಿದೆ. ಜನರು ವಿಶ್ವಾಸ ಇರಿಸಿ ಅರಿಸಿ ಕಳಿಸಿದ ಸರ್ಕಾರದಿಂದ ದೇಶವು ಸರಿದಾರಿಯಲ್ಲಿ ಪ್ರಗತಿ ಕಾಣುತ್ತಿದೆ’ ಎಂದಿದ್ದಾರೆ.

ರಕ್ಷಣಾ ಸಚಿವ ರಾಜನಾಥ ಇಂಗ್‌ ಟ್ವೀಟ್‌ ಮಾಡಿ, ‘ವಿಶ್ವದಲ್ಲೇ ಮೋದಿ ಅವರ ವಿಶ್ವಾಸಾರ್ಹತೆ ಹಾಗೂ ಜನಪ್ರಿಯತೆ ಸಾಬೀತಾಗಿದೆ. ಕೊರೋನಾ ಸಂದರ್ಭದಲ್ಲೂ ಅವರ ನಾಯಕತ್ವಕ್ಕೆ ಪ್ರಶಂಸೆ ಲಭಿಸಿದೆ. ಭಾರತಕ್ಕೆ ಇದೊಂದು ಹೆಮ್ಮೆಯ ಕ್ಷಣ’ ಎಂದಿದ್ದಾರೆ.

ಸಚಿವ ಪ್ರಕಾಶ ಜಾವಡೇಕರ್‌ ಅವರು, ‘ಭಾರತಕ್ಕೆ ಇದು ಹೆಮ್ಮೆಯ ವಿಷಯ’ ಎಂದು ಹರ್ಷಿಸಿದ್ದಾರೆ.