ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 76ನೇ ಜನ್ಮ ಜಯಂತಿಯಂದು ಪ್ರಧಾನಿ ನರೇಂದ್ರ ಮೋದಿ ನಮನ ಸಲ್ಲಿಸಿದರು. ಜನ್ಮ ಜಯಂತಿ ದಿನ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರಿಗೆ ನಮನಗಳು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ನವದೆಹಲಿ(ಆ.20): ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 76ನೇ ಜನ್ಮ ಜಯಂತಿಯಂದು ಪ್ರಧಾನಿ ನರೇಂದ್ರ ಮೋದಿ ನಮನ ಸಲ್ಲಿಸಿದರು. ಜನ್ಮ ಜಯಂತಿ ದಿನ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರಿಗೆ ನಮನಗಳು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

"

ಇಂದಿರಾ ಗಾಂಧಿ ಅವರ ಸಾವಿನ ನಂತರ ರಾಜೀವ್ ಗಾಂಧಿ 1984ರಲ್ಲಿ ಕಾಂಗ್ರೆಸ್‌ನಲ್ಲಿ ಸಕ್ರಿಯರಾದರು. 1984 ಅಕ್ಟೋಬರ್‌ನಲ್ಲಿ ತಮ್ಮ 40ನೇ ವಯಸ್ಸಿನಲ್ಲಿ ಪ್ರಧಾನ ಮಂತ್ರಿಯಾದರು. ಡಿಸೆಂಬರ್ 2, 1989ರ ತನಕ ಸೇವೆ ಸಲ್ಲಿಸಿದರು.

ಕಾಶ್ಮೀರದಿಂದ 10000 ಯೋಧರ ಹಿಂಪಡೆಯಲು ಕೇಂದ್ರ ಸರ್ಕಾರ ಆದೇಶ

ಮೇ 1991ರಲ್ಲಿ ತಮಿಳುನಾಡಿನಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ಸಂದರ್ಭ ಎಲ್‌ಟಿಟಿಇ ನಡೆಸಿದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಮೃತಪಟ್ಟಿದ್ದರು. 

ನಿಮ್ಮನ್ನು ತಂದೆಯಾಗಿ ಪಡೆದಿದ್ದು ಹೆಮ್ಮೆ ಎಂದ ರಾಹುಲ್ ಗಾಂಧಿ

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತಂದೆ ಹಾಗೂ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರಿಗೆ 76ನೇ ಜನ್ಮ ಜಯಂತಿಯಂದು ಗೌರವ ಸಲ್ಲಿಸಿದ್ದಾರೆ. ಅವರನ್ನು ತಂದೆಯಾಗಿ ಪಡೆದಿದ್ದು ಅದೃಷ್ಟ ಮತ್ತು ಹೆಮ್ಮೆ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.