Asianet Suvarna News Asianet Suvarna News

ಪ್ರಧಾನಿ ಮೋದಿ ನವ ಭಾರತದಲ್ಲಿ ಯುವಕರಿಗೆ ವಿಪುಲ ಅವಕಾಶ, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್!

 ಕೆಲವೆೇ ಕೆಲವು ಸ್ಟಾರ್ಟ್ಆಪ್‌ನಿಂದ ಕೂಡಿದ್ದ ಭಾರತ ಇದೀಗ ಸ್ಟಾರ್ಟ್ಆಪ್ ಹಬ್ ಆಗಿ ಬೆಳೆದು ನಿಂತಿದೆ. ಇದಕ್ಕೆ ಮೋದಿ ಆಡಳಿತ ಪೂರಕ ವಾತಾವರಣ ಒದಗಿಸಿದೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.  ವಿದ್ಯಾರ್ಥಿಗಳೊಂದಿಗೆ ರಾಜೀವ್ ಚಂದ್ರಶೇಖರ್ ನಡೆಸಿದ ಸಂವಾದ ಪ್ರಮುಖಾಂಶ ಇಲ್ಲಿದೆ.

PM modi New India vision full of Opportunities for Youths says Union minister rajeev chandrasekhar ckm
Author
First Published Aug 30, 2022, 8:37 PM IST

ಕೇರಳ(ಆ.30):  ಭಾರತ ಕಳೆದ 8 ವರ್ಷಗಳಲ್ಲಿ ಭಾರಿ ಬದಲಾವಣೆ ಹಾಗೂ ಪರಿವರ್ತನೆಗೆ ಒಳಗಾಗಿದೆ. ಇದು ಪ್ರಧಾನಿ ನರೇಂದ್ರ ಮೋದಿಯ ನವಭಾರತ. ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಯುವ ಸಮೂಹ ಪ್ರಮುಖ ಪಾತ್ರವಹಿಸುವ ಅವಕಾಶ ನವಭಾರತದಲ್ಲಿದೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ಕೇರಳದ ಕ್ಯಾಲಿಕಟ್‌ನ ಎನ್ಐಟಿ ಕಾಲೇಜಿನಲ್ಲಿ ಆಯೋಜಿಸಿದ ವಿದ್ಯಾರ್ಥಿಗಳ ಜೊತೆಗಿನ ಸಂವಾದಲ್ಲಿ ರಾಜೀವ್ ಚಂದ್ರಶೇಖರ್, ಯುವಕರಿಗಿರುವ ಅವಕಾಶ, ಭಾರತದ ಸ್ಟಾರ್ಟ್ಆಪ್ ಬೆಳವಣಿಗೆ ಕುರಿತು ಮಾತನಾಡಿದರು. ಮೋದಿ ಆಡಳಿತದಲ್ಲಿ ದೇಶದ ಆರ್ಥಿಕತೆ ಭಾರಿ ಪರಿವರ್ತನೆ ಕಂಡಿದೆ. ಕೆಲವೆೇ ಕೆಲವು ಸ್ಟಾರ್ಟ್ಆಪ್‌ನಿಂದ ಕೂಡಿದ್ದ ಭಾರತ ಇದೀಗ ಸ್ಟಾರ್ಟ್ಆಪ್ ಹಬ್ ಆಗಿ ಬೆಳೆದು ನಿಂತಿದೆ. ಇದಕ್ಕೆ ಮೋದಿ ಆಡಳಿತ ಪೂರಕ ವಾತಾವರಣ ಒದಗಿಸಿದೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ಸದ್ಯ ಭಾರತದಲಲ್ಲಿ 78,000 ಕ್ಕೂ ಹೆಚ್ಚು ಸ್ಟಾರ್ಟ್ಅಪ್‌ಗಳಿವೆ. ಇನ್ನು 1110 ಯೂನಿಕಾರ್ನ್‌ಗಳಿವೆ. ಈ ಸ್ಟಾರ್ಟ್ಅಪ್ ಹಾಗೂ ಯೂನಿಕಾರ್ನ್ ಆವಿಷ್ಕಾರ, ಹೊಸ ಉದ್ಯಮವನ್ನು ಮಾತ್ರ ಸೃಷ್ಟಿಸುತ್ತಿಲ್ಲ. ಜೊತೆಗೆ ಉದ್ಯೋಗವಕಾಶವನ್ನೂ ಸೃಷ್ಟಿಸಿದೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

ಕಾಲೇಜು ಹಾಗೂ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಲ್ಲಿ ಸ್ಟಾರ್ಟ್ಆಪ್ ಇಕೋಸಿಸ್ಟಮ್(startup ecosystem) ಬೆಳೆಯುವಂತೆ ಮಾಡಲು ಅನೂಕಲರ ವಾತಾವರವನ್ನು ನೀಡಬೇಕು. ವಿದ್ಯಾರ್ಥಿಗಳಿಗೆ(Students) ನಿಯಮಿತವಾಗಿ ಹೂಡಿಕೆದಾರರೊಂದಿಗೆ ಇಂಟರ್ಫೇಸ್‌ಗಳನ್ನು ಸುಗಮಗೊಳಿಸಬೇಕು ಎಂದು ರಾಜೀವ್ ಚಂದ್ರಶೇಖರ್(rajeev chandrasekhar) ಹೇಳಿದ್ದಾರೆ. 

ತೆರಿಗೆ ಸಂಗ್ರಹದಲ್ಲಿ ಮೋದಿ ಸರ್ಕಾರ ಐತಿಹಾಸಿಕ ದಾಖಲೆ: ಸಚಿವ ರಾಜೀವ್ ಚಂದ್ರಶೇಖರ್!

ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಉದ್ಯೋಗವಕಾಶದ ಕ್ಷೇತ್ರಗಳತ್ತ ಮಾತ್ರ ನೋಡದೆ ಲಭ್ಯವಿರುವ ಉದ್ಯಮ ಅವಕಾಶ, ಸ್ಟಾರ್ಟ್ ಅಪ್ ಉತ್ತೇಜಿಸುವತ್ತ ಗಮನ ನೀಡಬೇಕು. ಸ್ಟಾರ್ಟ್ಆಫ್ ಆರಂಭಿಸುವಿಕೆ ಸೇರಿದಂತೆ ಸರ್ಕಾರ ಯುವ ಸಮೂಹಕ್ಕೆ ವಿಪುಲ ಅವಕಾಶ ನೀಡಿದೆ. ಈ ಮೂಲಕ ಸ್ವಾವಲಂಬಿ ಹಾಗೂ ಉದ್ಯೋಗ ಸೃಷ್ಟಿಸುವ ಅವಕಾಶವನ್ನು ನೀಡಿದೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ಇದಕ್ಕಾಗಿ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಕೇಂದ್ರ ಸಚಿವರು ಹೇಳಿದರು.

 

 

ಭಾರತದಲ್ಲಿ ಈ ಹಿಂದೆ ಶೇಕಡಾ 97 ರಷ್ಟು ಬ್ಯಾಕಿಂಗ್ ನಿವ್ವಳ ಮೌಲ್ಯಗಳು ಕೇವಲ 9 ರಿಂದ 10 ಕುಟುಂಬಗಳ ಕೇಂದ್ರೀಕೃತವಾಗಿತ್ತು. ಈ ಕುಟುಂಬಗಳಿಂದಲೇ ಎಲ್ಲವೂ ನಿರ್ಧರಿಸಲಾಗುತ್ತಿತ್ತು. ಇದು ಭಾರತದಲ್ಲಿದ್ದ ಹೌಸ್ ಆಫ್ ಡೇಟ್ ಎಂಬ ಕ್ರೆಡಿಟ್ ಸೂಸೈಟಿ. ಆದರೆ ನವ ಭಾರತದಲ್ಲಿ ಇದು ಬದಲಾಗಿದೆ. ಎಲ್ಲರಿಗೂ ಅವಕಾಶಗಳಿವೆ. ಸರ್ಕಾರದ ಹೊಸ ನೀತಿಗಳಿಂದ ಉದ್ಯಮ ಅಥವಾ ಇನ್ಯಾವುದೇ ಕ್ಷೇತ್ರದಲ್ಲಿ ಅವಕಾಶಗಳು ಸೃಷ್ಟಿಯಾಗಿದೆ. ಕೆಲವು ಕುಟುಂಬಕ್ಕೆ ಮಾತ್ರವಿಲ್ಲ ಸವಲತ್ತು ಸಮಸ್ತ ಭಾರತೀಯರಿಗೆ ಲಭ್ಯವಿದೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ಇಂದು ಭಾರತ ಅತೀ ದೊಡ್ಡ ಸ್ಟಾರ್ಟ್ಆಪ್ ವ್ಯವಸ್ಥೆಯಾಗಿ ಬೆಳೆದಿದೆ. ಸ್ಟಾರ್ಟ್ ಅಪ್ ಆರಂಭಿಸುವ ವ್ಯಕ್ತಿ ಕುಟುಂಬದ ಬೆಂಬಲ, ತಾತನ ಬೆಂಬಲದ ಅವಶ್ಯಕತೆ ಇಲ್ಲ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.

ಅರ್ಥಶಾಸ್ತ್ರ ಪಂಡಿತರ ರೀತಿ ನಟಿಸಿ ಪೇಚಿಗೆ ಸಿಲುಕಿದ ಕೇಜ್ರಿವಾಲ್, ರೇವಡಿ ಸಂಸ್ಕೃತಿ ವಿರುದ್ಧ ಗುಡುಗಿದ ರಾಜೀವ್ ಚಂದ್ರಶೇಖರ್!

ಯುವ ಭಾರತೀಯರಿಗೆ ಅವಕಾಶಗಳು ಹೆಚ್ಚಾಗಿದೆ. ಸಾಮಾನ್ಯವಾಗಿ ಕೌಶಲ್ಯ ಮತ್ತು ನಿರ್ದಿಷ್ಟವಾಗಿ ಡಿಜಿಟಲ್ ಕೌಶಲ್ಯಗಳು ಆತನ ಭವಿಷ್ಯದ ಬೆಳವಣಿಗೆಗೆ ಅತ್ಯವಶ್ಯಕ.  ಕೇರಳದ ಯುವಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ರಾಜೀವ್ ಚಂದ್ರಶೇಖರ್ ಸಲಹೆ ನೀಡಿದರು.  

ಅಧಿಕಾರಶಾಹಿಗಳಿಂದ ಮುಕ್ತಿ, ಬಂಡವಾಳದ ಲಭ್ಯತೆ ಸೇರಿ ಭಾರತದಲ್ಲಿನ ವ್ಯಾಪರ, ಉದ್ಯಮ ಸಂಸ್ಕೃತಿ ಸುಲಭ ಹಾಗೂ ಅಭಿವೃದ್ಧಿಗೊಳಿಸಲು ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಸರ್ಕಾರ ಕೈಗೊಳ್ಳಲಿದೆ. ಮುಂದಿನ ದಶಕ ಭಾರತದಲ್ಲಿ ತಂತ್ರಜ್ಞಾನ ಪೂರಿತ ಕ್ರಾಂತಿಯಾಗಲು ಸರ್ಕಾರ ಎಲ್ಲಾ ಪ್ರಯತ್ನ ಮಾಡಲಿದೆ. ಇದು ಕೇವಲ ನಗರಗಳಿಗೆ ಮಾತ್ರ ಸೀಮಿತವಲ್ಲ. ಪಟ್ಟಣಗಳಲ್ಲೂ ಲಭ್ಯವಾಗಲಿದೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. 

2014ರಲ್ಲಿ ಮೋದಿ ಸರ್ಕಾರ ಬಂದ ಬಳಿಕ ಭಾರತದ ಎಲೆಕ್ಟ್ರಾನಿಕ್ಸ್ ವಲಯದಲ್ಲಿ ಅಭೂತಪೂರ್ವ ಬದಲಾವಣೆಯಾಗಿದೆ. ಎಲೆಕ್ಟ್ರಾನಿಕ್ಸ್ ಉತ್ಪಾದನೆ, ಸೆಮಿಕಂಡಕ್ಟರ್ ವಲಯಗಳನ್ನು ಬಲಪಡಿಸಲು ಕೇಂದ್ರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. 2026 ರ ವೇಳೆಗೆ 300 ಶತಕೋಟಿ ಅಮೆರಿಕನ್ ಡಾಲರ್ ಎಲೆಕ್ಟ್ರಾನಿಕ್ ಉತ್ಪಾದನೆಯ ಗುರಿಯತ್ತ ಸಾಗುತ್ತಿದ್ದೇವೆ. ಭಾರತ ಅಸಾಧಾರಣ ಟೆಕ್ ನಿರ್ಮಾಪಕ ಹಾಗೂ ರಫ್ತುದಾರನಾಗಿ ಹೊರಹೊಮ್ಮಿದೆ. ಶೀಘ್ರದಲ್ಲೇ ಭಾರತದಲ್ಲಿ 5ಜಿ ಸೇವೆ ಲಭ್ಯವಾಗುತ್ತಿದೆ. ಅಧಿಕೃತ ಘೋಷಣೆ ಕೂಡ ಆಗಿದೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.  

ಎರಡು ದಿನದ ಕೇರಳ ಪ್ರವಾಸದಲ್ಲಿರುವ ರಾಜೀವ್ ಚಂದ್ರಶೇಖರ್  ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಲೆಕ್ಟ್ರಾನಿಕ್ಸ್ & ಇನ್ಫರ್ಮೇಷನ್ ಟೆಕ್ನಾಲಜಿ (NIELIT) ಭೇಟಿ ನೀಡಿದರು. NIELIT ಸರ್ಕಾರವು ಕಲ್ಪಿಸಿರುವ 1 ಟ್ರಿಲಿಯನ್ ಡಾಲರ್ ಡಿಜಿಟಲ್ ಆರ್ಥಿಕತೆಯ ಗುರಿಗಾಗಿ ಕೌಶಲ್ಯ ಸಕ್ರಿಯಗೊಳಿಸುವಂತೆ ಕಾರ್ಯನಿರ್ವಹಿಸಬೇಕು ಎಂದರು. ಈ ಭೇಟಿ ಬಳಿಕ ಮಲಬಾರ್ ಚೇಂಬರ್ ಆಫ್ ಕಾಮರ್ಸ್ ಮತ್ತು ಕ್ಯಾಲಿಕಟ್ ಮ್ಯಾನೇಜ್ಮೆಂಟ್ ಅಸೋಸಿಯೇಶನ್ ಸದಸ್ಯರನ್ನು ಭೇಟಿ ಮಾಡಿದರು

Follow Us:
Download App:
  • android
  • ios