ಭಾರತದ ಧಾರ್ಮಿಕ ಗತವೈಭವ ಮರುಕಳಿಸುತ್ತಿದೆ. ರಾಮ ಮಂದಿರ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದೆ. ಇದರ ಜೊತೆಗೆ ಹಲವು ಧಾರ್ಮಿಕ ಕೇಂದ್ರಗಳ ಜೀರ್ಣೋದ್ಧಾರ ನಡೆಯುತ್ತಿದೆ. ಈ ಮೂಲಕ ಭಾರತ ಮತ್ತೆ ತನ್ನ ಆಧ್ಯಾತ್ಮಿಕ ಶಕ್ತಿಯನ್ನು ಮರಳಿ ಪಡೆಯಲಿದೆ ಎಂದು ಮೋದಿ ಹೇಳಿದ್ದಾರೆ. ಮೋದಿ ಮಹಾಕಾಲೇಶ್ವರ ಮಂದಿರ ಕಾರಿಡಾರ್ ಉದ್ಘಾಟಿಸಿ ಮೋದಿ ಮಾಡಿದ ಭಾಷಣದ ಹೈಲೈಟ್ಸ್ ಇಲ್ಲಿದೆ.

ಮಧ್ಯಪ್ರದೇಶ(ಅ.11):ಭಾರತ ಆಧ್ಯಾತ್ಮಿಕ ಕೇಂದ್ರ ಹಾಗೂ ಅಲ್ಲಿನ ಶಿಲ್ಪಕಲೆ, ವೈಜ್ಞಾನಿಕ ರೀತಿಯ ನಿರ್ಮಾಣ ಈಗಲೂ ಅಚ್ಚರಿ ತರುತ್ತದೆ. ತಮಿಳುನಾಡಿನಲ್ಲಿ ಚೋಳ ರಾಜ ಕಟ್ಟಿಸಿದ ದೇವಸ್ಥಾನ, ರಾಮೇಶ್ವರದ ರಾಮನಾಥ ದೇಗುಲ, ಕರ್ನಾಟದ ಬೇಲೂರಿನ ಚನ್ನಕೇಶವ ದೇವಸ್ಥಾನ ನಮ್ಮ ಆಧ್ಯಾತ್ಮ ಹಾಗೂ ವಾಸ್ತುಶಿಲ್ಪಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮಧ್ಯಪ್ರದೇಶದ ಮಹಾಕಾಲೇಶ್ವರ ಮಂದಿರದ ಅತೀ ದೊಡ್ಡ ಕಾರಿಡಾರ್ ಉದ್ಘಾಟಿಸಿ ಮಾತನಾಡಿದರು. 856 ಕೋಟಿ ರು. ವೆಚ್ಚದಲ್ಲಿ ಮೊದಲ ಹಂತದ ಕಾರಿಡಾರ್ ನಿರ್ಮಾಣ ಮಾಡಲಾಗಿದೆ. ಈ ಕಾರಿಡಾರ್ ಮೋದಿ ಉದ್ಘಾಟಿಸಿದ್ದಾರೆ. ಬಳಿಕ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮೋದಿ ಮಾತನಾಡಿದರು. 

ಮಹಾಕಾಲದ ಅನೂಭೂತಿ ಅತ್ಯಧ್ಬುತವಾಗಿದೆ. ಮಹಾಕಾಲ ಅನೂಭೂತಿಯಲ್ಲಿ ಲೌಕಿಕ ನಶ್ವರ. ಈ ಸಂದರ್ಭದಲ್ಲಿ ಮಹಾಕಾಲೇಶ್ವರ ಚರಣಕ್ಕೆ ಶತ ಶತ ನಮನ ಸಲ್ಲಿಸುತ್ತೇನೆ ಎಂದು ಪ್ರಧಾನಿ ಮೋದಿ ಭಾಷಣ ಆರಂಭಿಸಿದರು. ಈ ಸಂದರ್ಭದಲ್ಲಿ ಮಹಾಕಾಲೇಶ್ವರ ಭಕ್ತಗಣ, ಸಿಎಂ ಶಿವರಾಜ್ ಸಿಂಗ್ ಚವ್ಹಾಣ್ ಹಾಗೂ ಸಂಪೂರ್ಣ ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅತೀವ ಮುತುವರ್ಜಿ ವಹಿಸಿ ಈ ಕಾರಿಡಾರ್ ನಿರ್ಮಾಣ ಮಾಡಲಾಗಿದೆ ಎಂದು ಮೋದಿ ಹೇಳಿದರು.

Scroll to load tweet…

ಮಹಾಕಾಲ ನಗರ ಪ್ರಳಯದಿಂದಲೂ ಮುಕ್ತವಾಗಿದೆ ಎಂದು ಮಹಾಕಾಲೇಶ್ವರ ಹಾಗೂ ಉಜ್ಜಯಿನಿ ಕುರಿತು ಪುರಾಣದಲ್ಲಿ ಒಂದು ಮಾತಿದೆ. ಉಜ್ಜಯಿನಿ ಕೇವಲ ಭಾರತದ ಕೇಂದ್ರವಾಗಿಲ್ಲ. ಭಾರತದ ಸಂಸ್ಕೃತಿ, ಪರಂಪರೆ, ಸನಾತನ ಧರ್ಮದ ಆತ್ಮವಾಗಿದೆ ಎಂದು ಮೋದಿ ಹೇಳಿದ್ದಾರೆ. ಇದೇ ನಗರಕ್ಕೆ ಶ್ರೀಕೃಷ್ಣ ಆಗಮಿಸಿ ಶಿಕ್ಷಣ ಪಡೆದ ನಗರವಾಗಿದೆ. ಮಕಾಕಾಲ ನೆಲೆಸಿರುವ ಈ ಮಣ್ಣಿನಲ್ಲಿ ಇದೀಗ ಹೊಸ ಅಧ್ಯಾಯ ಶುರುವಾಗಿದೆ. ಉಜ್ಜಯಿನಿಯ ಪ್ರತಿ ಕಣಕಣದಲ್ಲಿ ಆಧ್ಯಾತ್ಮ ತುಂಬಿದೆ. ಪ್ರತಿ ಕಲ್ಲುಗಳು ಇತಿಹಾಸ ಹೇಳುತ್ತಿದೆ ಎಂದು ಮೋದಿ ಹೇಳಿದ್ದಾರೆ.

ವಿಶೇಷ ಪೂಜೆ ಸಲ್ಲಿಸಿ ನವೀಕೃತ ಉಜ್ಜಯಿನಿ ದೇಗುಲ ಕಾರಿಡಾರ್ ಉದ್ಘಾಸಿದ ಮೋದಿ!

ಉಜ್ಜಯಿನಿಯಲ್ಲಿ ಸಾವಿರ ವರ್ಷಗಳ ಕಾಲ ಭಾರತೀಯ ಸಾಹಿತ್ಯ, ಸಂಸ್ಕೃತಿ, ಆಧ್ಯಾತ್ಮದ ನೇತೃತ್ವದ ವಹಿಸಿತ್ತು. ಉಜ್ಜಯಿನಿ ಕುರಿತು ಮಹಾ ಕವಿ ಕಾಳಿದಾಸನ ಕವಿತೆಯಲ್ಲಿ ವರ್ಣನೆ ಸಿಗುತ್ತದೆ. ಹಲವು ಪುರಾಣ, ಇತಿಹಾಸಗಳಲ್ಲಿ ಮಹಾಕಾಲೇಶ್ವರ ಸನ್ನಿಧಿ ಕುರಿತು ಮಾಹಿತಿಗಳು ಲಭ್ಯವಿದೆ. ಆಜಾದಿಕಾ ಅಮೃತ ಕಾಲದಲ್ಲಿ ನಾವು ಬ್ರಿಟೀಷರ ಕಾಲೋನಿ ಸಂಸ್ಕತಿಗೆ ಮುಕ್ತಿ ಹಾಡಿದ್ದೇವೆ. ಇದೇ ವೇಳೆ ನಮ್ಮ ಆಧ್ಯಾತ್ಮ, ನಮ್ಮ ಧಾರ್ಮಿಕ ಕೇಂದ್ರಗಳು ಮತ್ತೆ ಗತವೈಭವ ಪಡೆದುಕೊಳ್ಳುತ್ತಿದೆ. ಆಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ನಡೆಯುತ್ತಿದೆ. ಕಾಶಿ ವಿಶ್ವನಾಥ ಮಂದಿರ ಕಾರಿಡಾರ್ ಉದ್ಘಾಟನೆಗೊಂಡಿದೆ. ಸೋಮನಾಥ ದೇವಾಲಯದ ಜೀರ್ಣೋದ್ಧಾರ ನಡೆಯುತ್ತಿದೆ. ಭಾರತದ ಗತವೈಭವ ಮರುಕಳಿಸುತ್ತಿದೆ ಎಂದು ಮೋದಿ ಹೇಳಿದರು.

ಮಹಾಕಾಲೇಶ್ವರ ಸೇರಿದಂತೆ ಭಾರತದ ಐತಿಹಾಸಿಕ ಮಂದಿರದ ಮೇಲೆ ಸತತ ದಾಳಿ ನಡೆದಿದೆ. ಪ್ರತಿ ದಾಳಿ ನಡೆದಾಗಲು ಮತ್ತೆ ಮೈಕೊಡವಿ ಎದ್ದು ನಿಂತಿದೆ. ಇದೀಗ ಈ ಆಧ್ಯಾತ್ಮಿಕ ಕೇಂದ್ರಗಳನ್ನು ಪುನರ್ ನಿರ್ಮಿಸುವ ಅವಕಾಶ ನಮಗೆ ಒದಗಿಬಂದಿರುವುದು ಸೌಭಾಗ್ಯ ಎಂದು ಮೋದಿ ಹೇಳಿದರು. 

ಮಹಾಕಾಲ್ ಕಾರಿಡಾರ್ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರದೇಶದ ಇಂದೋರ್‌ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಬಳಿಕ ಉಜ್ಜಯಿನಿಗೆ ಆಗಮಿಸಿದ ಮೋದಿ ನೇರವವಾಗಿ ಮಹಾಕಾಲೇಶ್ವರ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಪ್ರಧಾನಿ ಮೋದಿ ಪ್ರಾಂಗಣದಲ್ಲಿನ ಬೃಹದಾಕಾರದ ಶಿವಲಿಂಗವನ್ನು ಅನಾವರಣಗೊಳುವ ಮೂಲಕ ಮಹಾಕಾಲ್ ದೇಗುಲದ ಮೊದಲ ಹಂತದ ಕಾರಿಡಾರ್ ಉದ್ಘಾಟನೆ ಮಾಡಿದರು. 

ಬಳಿಕ ಎಲೆಕ್ಟ್ರಿಕ್ ವಾಹನದ ಮೂಲಕ ಸಂಪೂರ್ಣ ಕಾರಿಡಾರ್ ಸುತ್ತಾಡಿದರು. ಈ ವೇಳೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚವ್ಹಾಣ್ ಕಾರಿಡಾರ್ ಗೋಡೆಗಳಲ್ಲಿ ಚಿತ್ರಿಸಿರುವ ಐತಿಹಾಸಿಕ ಹಾಗೂ ಪೌರಾಣಿಕ ಕಲಾಕೃತಿಗಳ, ಮಹಾಕಾಲೇಶ್ವರ ಮಂದಿರದ ಇತಿಹಾಸದ ಮಾಹಿತಿ ನೀಡಿದರು.