Asianet Suvarna News Asianet Suvarna News

ಮೋದಿ, ದೀದಿ, ಅದಾರ್‌ಗೆ ಟೈಮ್ಸ್‌ ವರ್ಷದ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ!

* ಟೈಮ್‌ ಮ್ಯಾಗಜಿನ್‌ನ ವರ್ಷದ ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿ

* ಮೋದಿ, ದೀದಿ, ಅದಾರ್‌ಗೆ ಟೈಮ್ಸ್‌ ವರ್ಷದ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ

 

PM Modi Mamata Banerjee SII CEO Poonawalla on Time Magazine list of 100 Most Influential People of 2021 pod
Author
Bangalore, First Published Sep 16, 2021, 9:44 AM IST
  • Facebook
  • Twitter
  • Whatsapp

ನ್ಯೂಯಾರ್ಕ್(ಸೆ.16): ಭಾರತದ ಪ್ರಧಾನಿ ನರೇಂದ್ರ ಮೋದಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಕೋವಿಶೀಲ್ಡ್‌ ಕೊರೋನಾ ಲಸಿಕೆ ಉತ್ಪಾದಿಸುತ್ತಿರುವ ಪುಣೆಯ ಸೀರಂ ಇನ್‌ಸ್ಟಿಟ್ಯೂಟ್‌ನ ಸಿಇಒ ಆದಾರ್‌ ಪೂನಾವಾಲ ಟೈಮ್‌ ಮ್ಯಾಗಜಿನ್‌ನ ವರ್ಷದ ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಟೈಮ್‌ ಮ್ಯಾಗಜಿನ್‌ ಬುಧವಾರ ಪ್ರಪಂಚದ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಬಿಡುಗಡೆ ಮಾಡಿದ್ದು ಇದರಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ಉಪಾಧ್ಯಕ್ಷೆ ಕಮಲಾ ಹ್ಯಾರೀಸ್‌, ಚೀನಾ ಅಧ್ಯಕ್ಷ ಕ್ಸಿ ಜಿನ್‌ಂಗ್‌, ಅಮೆರಿಕದ ಮಾಜಿ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌, ತಾಲಿಬಾನ್‌ ಸಹ ಸಂಸ್ಥಾಪಕ ಮುಲ್ಲಾ ಅಬ್ದುಲ್‌ ಘನಿ ಬರಾದರ್‌ ಸ್ಥಾನ ಪಡೆದಿದ್ದಾರೆ.

ಮೋದಿ ಅವರ ಪರಿಚಯದ ಜೊತೆಗೆ ನೆಹರು ಮತ್ತು ಇಂದಿರಾ ಗಾಂಧಿ ನಂತರ ಭಾರತದ ಭಾರತದ ರಾಜಕಾರಣವನ್ನು ನಿಯಂತ್ರಿಸುತ್ತಿರುವ ಪ್ರಮುಖ ನಾಯಕ ಎಂದು ಬರೆದಿದೆ. ಮಮತಾ ಬ್ಯಾನರ್ಜಿ ತಮ್ಮ ಪಕ್ಷವನ್ನು ಮುನ್ನಡೆಸುತ್ತಿಲ್ಲ ಅವರೇ ಪಕ್ಷವಾಗಿದ್ದಾರೆ ಎಂದು ಮಮತಾ ಬ್ಯಾನರ್ಜಿಯವರ ಪರಿಚಯ ನೀಡಲಾಗಿದೆ. ಕೊರೊನಾ ಇನ್ನೂ ಸಹಾ ಕೊನೆಯಾಗಿಲ್ಲ ಅದನ್ನು ಕೊನೆಗೊಳಿಸಲು ಪೂನಾವಾಲಾ ಶ್ರಮಿಸುತ್ತಿದ್ದಾರೆ ಎಂದು ಆದಾರ್‌ ಪೂನಾವಾಲ ಅವರ ಪರಿಚಯ ನೀಡಲಾಗಿದೆ.

ಇವರಲ್ಲದೇ ಟೆನ್ನಿಸ್‌ ತಾರೆ ನವೋಮಿ ಒಸಾಕ, ರಷ್ಯಾದ ವಿಪಕ್ಷ ನಾಯಕ ಅಲೆಕ್ಸಿ ನಾವಲ್ನೀ, ಆ್ಯಪಲ್‌ ಸಿಇಒ ಟಿಮ್‌ ಕುಕ್‌ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

Follow Us:
Download App:
  • android
  • ios